Viral Video : ಕೆಳಗೆ ಜ್ವಾಲಾಮುಖಿ, ಹಗ್ಗದ ಮೇಲೆ ನಡಿಗೆಯ ಸಾಹಸ
Slackline Walk : ಕೆಳಗೆ ಕಡಿದಾದ ಕಣಿವೆಯೋ ನೀರೋ ಇದ್ದು ನಡುವಿನ ಅಂತರದಲ್ಲಿ ಹಗ್ಗದ ಮೇಲೆ ನಡೆಯುವ ಸಾಹಸ ಗೊತ್ತಿರುವುದೇ. ಆದರೆ ಕೆಳಗೆ ಜ್ವಾಲಾಮುಖಿ ಭುಗಿಲೇಳುತ್ತಿರುವಾಗ ಈ ಸಾಹಸಕ್ಕಿಳಿಯುವುದೆಂದರೆ...
Viral Video : ರಾಫೆಲ್ ಝುಗ್ನೋ ಬ್ರಿಡಿ ಮತ್ತು ಅಲೆಕ್ಸಾಂಡರ್ ಶುಲ್ಝ್ ಎಂಬ ಸಾಹಸಪ್ರಿಯರು ತಮ್ಮ ಸಾಹಸಮಯ ವಿಡಿಯೋ ಅನ್ನು ಇನ್ಸ್ಟಾಗ್ರಾಮ್ನ ಗಿನ್ನೀಸ್ ವರ್ಲ್ಡ್ ರೆಕಾರ್ಡ್ಸ್ ಪುಟದಲ್ಲಿ ಪೋಸ್ಟ್ ಮಾಡಿದ ನಂತರ ನೆಟ್ಟಿಗರು ಅಚ್ಚರಿಗೆ ಒಳಗಾಗಿದ್ದಾರೆ. ಕೆಳಗೆ ಜ್ವಾಲಾಮುಖಿ ಭುಗಿಲೇಳುತ್ತಿದ್ದರೂ ಅಂತರದಲ್ಲಿ ಕಟ್ಟಿದ ಹಗ್ಗದ ಮೇಲೆ ನಿಧಾನ ಲಯದಲ್ಲಿ ನಡೆದು ಗುರಿತಲುಪುವ ಸಾಹಸ ಮಾಡಿದ್ದಾರೆ. ಕ್ಷಣ ಎಚ್ಚರತಪ್ಪಿದರೂ ಮುಂದೇನಾಗುತ್ತದೆ ಎಂದು ಹೇಳಬೇಕಿಲ್ಲ.
ಇದನ್ನೂ ಓದಿView this post on Instagram
261 ಮೀಟರ್ ಉದ್ದದ ಹಗ್ಗದ ಮೇಲೆ ನಡೆದುಕೊಂಡು ಹೋಗಿರುವ ಈ ದೃಶ್ಯ ಭಯ ತರಿಸುವಂತಿಲ್ಲವೆ? ಈ ಪೋಸ್ಟ್ ಕುರಿತು ಮಾಹಿತಿಯನ್ನು ಅವರು ಹಂಚಿಕೊಂಡಿದ್ದಾರೆ, ‘ರಾಫೆಲ್ ಮತ್ತು ಅಲೆಕ್ಸ್, ವನುವಾಟೋವಿನ ಯುಸೂರ್ ಪರ್ವತದಲ್ಲಿ 42 ಮೀ ಎತ್ತರದಲ್ಲಿ ಈ ನಿಧಾನ ನಡಿಗೆ ಪೂರ್ಣಗೊಳಿಸಿದ್ದಾರೆ’ ಎಂದು. ಸುಮಾರು 12 ಗಂಟೆಗಳ ಹಿಂದೆ ಈ ಪೋಸ್ಟ್ ಮಾಡಲಾಗಿದೆ. ಈತನಕ 1.4 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಈ ವಿಡಿಯೋ ಪಡೆದಿದೆ. 12,000ಕ್ಕೂ ಹೆಚ್ಚು ಜನರು ಈ ವಿಡಿಯೋ ಮೆಚ್ಚಿದ್ದಾರೆ. ವಿವಿಧ ರೀತಿಯಲ್ಲಿ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.
ಅತ್ಯದ್ಭುತವಾಗಿದೆ ಎಂದು ಒಬ್ಬರು ಪ್ರತಿಕ್ರಿಯಿಸಿದರೆ, ಇನ್ನೊಬ್ಬರು, ಈಗಾಗಲೇ ಇದು ದಾಖಲೆಯಾಗಿದೆ ಎಂದು ಹೇಳಿದ್ದಾರೆ.
ಆದರೂ ಇದಕ್ಕೆಲ್ಲ ಎದೆಗುಂಡಿಗೆ ಎಷ್ಟು ಗಟ್ಟಿಯಾಗಿರಬೇಕಲ್ಲವೆ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ