Viral Video : ಮಲಗಿರುವ ಹುಲಿರಾಣಿಯನ್ನು ಎಬ್ಬಿಸಿದ ಹುಲಿರಾಜ, ಮುಂದೇನಾಗುತ್ತದೆ?

Tiger Disturbs Tigress : ಡಬ್ಲಿನ್​ ಝೂನಲ್ಲಿ ಹೆಣ್ಣುಹುಲಿಯೊಂದು ತನ್ನ ಪಾಡಿಗೆ ತಾ ಮಲಗಿದೆ. ಗಂಡುಹುಲಿ ಬಂದು ಅದನ್ನು ಎಬ್ಬಿಸಿದ್ದಕ್ಕೆ ಅದು ಹೇಗೆ ಪ್ರತಿಕ್ರಿಯಿಸಿದೆ ನೋಡಿ.

Viral Video : ಮಲಗಿರುವ ಹುಲಿರಾಣಿಯನ್ನು ಎಬ್ಬಿಸಿದ ಹುಲಿರಾಜ, ಮುಂದೇನಾಗುತ್ತದೆ?
ಮಲಗಿದ ಹೆಣ್ಣುಹುಲಿಗೆ ಎಬ್ಬಿಸಿದ ಗಂಡುಹುಲಿ
Follow us
TV9 Web
| Updated By: ಶ್ರೀದೇವಿ ಕಳಸದ

Updated on: Sep 22, 2022 | 1:44 PM

Viral Video : ಸಾಮಾನ್ಯವಾಗಿ ಪ್ರಾಣಿಗಳು ಹಗಲುಹೊತ್ತು ಮಲಗುತ್ತವೆ. ಅದರಲ್ಲೂ ಹುಲಿಗಳು ಹೆಚ್ಚೂಕಡಿಮೆ 18-20 ಗಂಟೆ ಮಲಗುತ್ತವೆ. ಉಳಿದಂತೆ ರಾತ್ರಿ ಹೊತ್ತು ಬೇಟೆಯಾಡುತ್ತವೆ. ಗಂಡುಹುಲಿ ಒಂದೇ ಬೇಟೆಯಾಡಿದರೆ,  ಹೆಣ್ಣುಹುಲಿ ತನ್ನ ಮರಿಗಳೊಂದಿಗೆ ಬೇಟೆಯಾಡುತ್ತದೆ. ಎಂಥ ಸಂದರ್ಭದಲ್ಲಿಯೂ ಏಕಾಂಗಿಯಾಗಿ ತನ್ನನ್ನು ತಾನು ರಕ್ಷಿಸಿಕೊಳ್ಳುವುದು ಹೇಗೆ ಎನ್ನುವುದನ್ನು ತಾಯಿಹುಲಿ ಈ ಮೂಲಕ ಮಕ್ಕಳಿಗೆ ಕಲಿಸಿಕೊಡುತ್ತದೆ. ತನ್ನಷ್ಟಕ್ಕೆ ತಾನು ಬೇಟೆಯಾಡುವುದು ಬೇರೆ. ತಾನೂ ಆಡುತ್ತ, ತನ್ನ ಮಕ್ಕಳಿಗೂ ಕಲಿಸುವ ಜವಾಬ್ದಾರಿ ಬೇರೆ. ಹೀಗಾದಾಗ ತಾಯಿಹುಲಿಗೆ ಹೆಚ್ಚು ವಿಶ್ರಾಂತಿ ಬೇಕಾಗುತ್ತದೆ. ಆದರೆ ಈ ಗಂಡುಹುಲಿಗೆ ಈ ಸೂಕ್ಷ್ಮ ಅರ್ಥವಾಗುವುದೇ ಇಲ್ಲ ಎನ್ನುವುದಕ್ಕೆ ಉದಾಹರಣೆ ಈ ವಿಡಿಯೋ. ಮಲಗಿರುವ ಹೆಣ್ಣು ಹುಲಿಯನ್ನು ಎಬ್ಬಿಸಿದರೆ ಏನಾಗುತ್ತದೆ ಎನ್ನುವುದನ್ನು ನೋಡಿ.

ಈ ಹೆಣ್ಣುಹುಲಿ ಶಾಂತವಾಗಿ ಕೊಳದ ಬಳಿ ಮಲಗಿದೆ. ಆದರೆ ಈ ಗಂಡುಹುಲಿ ಹೋಗಿ ಎಬ್ಬಿಸಿಬಿಟ್ಟಿದೆ. ಮಲಗಿದವರನ್ನು ಎಬ್ಬಿಸಿದರೆ ಇನ್ನೇನಾಗಬೇಡ!? ಹೆಣ್ಣುಹುಲಿ ಅಬ್ಬರಿಸಿ ಮೇಲೇರಿ ಹೋದ ರೀತಿಗೆ ಗಂಡುಹುಲಿ ನಿರುಪಾಯ ಸ್ಥಿತಿಗೆ ತಲುಪುತ್ತದೆ. ಸುಮ್ಮನೆ ಕೊಳದ ಬಳಿ ನೀರು ಕುಡಿಯುವಂತೆ ನಟಿಸಲು ಪ್ರಯತ್ನಿಸುತ್ತದೆ.

ಈ ದೃಶ್ಯವನ್ನು 2016ರಲ್ಲಿ ಐರ್ಲೆಂಡಿನ ಡಬ್ಲಿನ್​ ಝೂನಲ್ಲಿ ಸೆರೆಹಿಡಿಯಲಾಗಿದೆ. ಇದೀಗ 14.8 ಮಿಲಿಯನ್​ ವೀಕ್ಷಕರನ್ನು ತಲುಪಿದೆ. 569 ಜನರು ಈ ವಿಡಿಯೋ ಇಷ್ಟಪಟ್ಟಿದ್ದಾರೆ.

ಜೀವನದಲ್ಲಿ ಇನ್ನೆಂದೂ ಮಲಗಿರುವ ಹೆಣ್ಣುಹುಲಿಯನ್ನು ಎಬ್ಬಿಸಬಾರದೆಂಬ ಪಾಠವನ್ನು ಈ ಗಂಡುಹುಲಿ ಕಲಿತಿರಲು ಸಾಕು!

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ