Viral Video : ಎಳನೀರು ಕುಡಿಯಲು ನಾಸಿಕ್​ಗೆ ಬಂದವಾ ಈ ಚಿರತೆಗಳು

Maharashtra : ಬೆಕ್ಕಿನಂತೆ ಸರಾಗವಾಗಿ ತೆಂಗಿನ ಮರವನ್ನು ಹತ್ತಿಳಿದ ಚಿರತೆಗಳನ್ನು ನೋಡಿ ನೆಟ್ಟಿಗರು ಚಕಿತಗೊಂಡಿದ್ದಾರೆ. ಈ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

Viral Video : ಎಳನೀರು ಕುಡಿಯಲು ನಾಸಿಕ್​ಗೆ ಬಂದವಾ ಈ ಚಿರತೆಗಳು
ತೆಂಗಿನಮರ ಏರುತ್ತಿರುವ ಚಿರತೆಗಳು
Follow us
TV9 Web
| Updated By: ಶ್ರೀದೇವಿ ಕಳಸದ

Updated on:Sep 21, 2022 | 2:55 PM

Viral Video : ಸಾಕಷ್ಟು ಕಾಡುಪ್ರಾಣಿಗಳು ನಾಡಿಗೆ ಬಂದ ವಿಡಿಯೋಗಳು ಈಗಾಗಲೇ ವೈರಲ್ ಆಗಿರುವುದನ್ನು ನೋಡಿದ್ದೀರಿ. ಅವು ಬರುವುದೇನಿದ್ದರೂ ಆಹಾರ ಹುಡುಕಿಕೊಂಡೇ. ಹೀಗೆ ಬರುವಾಗ ದಾರಿ ತಪ್ಪಿ ಊರೊಳಗೆ ನುಗ್ಗಿರುತ್ತವೆ. ಇಲ್ಲಿರುವ ಈ ವಿಡಿಯೋದಲ್ಲಿಯೂ ಹಾಗೇ ಆಗಿದೆ. ಈ ಚಿರತೆಗಳು ನಾಸಿಕ್​ಗೆ ಬಂದಿವೆ. ಬಂದು ಸರಸರನೆ ಬೆಕ್ಕಿನಂತೆ ತೆಂಗಿನ ಮರ ಏರಿವೆ, ಎಳನೀರು ಕುಡಿಯಲು ಅಲ್ಲ, ಅಲ್ಲಿ ಮನುಷ್ಯರ ಸುಳಿವು ಸಿಕ್ಕಿದ್ದರಿಂದ ಪ್ರಾಣಭಯದಿಂದ ತಪ್ಪಿಸಿಕೊಳ್ಳಲು.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

67,000ಕ್ಕೂ ಹೆಚ್ಚು ಜನರು ಈ ವಿಡಿಯೋ ನೋಡಿ ಅಚ್ಚರಿಪಟ್ಟಿದ್ದಾರೆ. ವಾಟ್ಸಪ್​ ಮೂಲಕ ಬಂದ ಈ ವಿಡಿಯೋ ಅನ್ನು  ಐಪಿಎಸ್ ಅಧಿಕಾರಿ ಪರ್ವೀನ್​ ಕಸ್ವಾನ್​ ಟ್ವಿಟರ್​ನಲ್ಲಿ ಪೋಸ್ಟ್ ಮಾಡಿ, ‘ಇವುಗಳ ಚುರುಕುತನವೇ ಇವುಗಳ ವೈಶಿಷ್ಟ್ಯ. ಎಲ್ಲ ರೀತಿಯ ಪ್ರದೇಶಗಳಲ್ಲಿಯೂ ಇವು ಹೊಂದಿಕೊಳ್ಳುತ್ತವೆ. ರಾಜಸ್ಥಾನ ಮತ್ತು ರಾಕಿ ಬೆಟ್ಟಗಳಿಂದ ಈಶಾನ್ಯದ ಅರಣ್ಯ, ಮುಂಬೈ ಮತ್ತು ಗುರಗಾಂವ್​ ನಗರಗಳಿಂದ ಹಿಮಾಲಯದ ಭೂಪ್ರದೇಶಗಳಲ್ಲಿಯೂ ಇವು ವಾಸಿಸುತ್ತವೆ. ಆಹಾರಬೇಟೆಯಲ್ಲಿ ಅತೀ ಚುರುಕಾದ ಪ್ರಾಣಿಗಳು ಇವು’ ಎಂದಿದ್ದಾರೆ.

ಈ ಪೋಸ್ಟ್​ನಿಂದ ಪ್ರೇರಿತರಾದ ಅವರು ಮತ್ತೊಂದು ಪೋಸ್ಟ್​ ಟ್ವೀಟ್ ಮಾಡಿದ್ಧಾರೆ.

‘ಚಹಾ ತೋಟಗಳು ಮತ್ತು ಕಬ್ಬಿನ ತೋಟಗಳಲ್ಲಿ ಇವು ಹೆಚ್ಚಾಗಿ ಕಂಡುಬರುತ್ತವೆ. ಚಹಾ ತೋಟ ಇವುಗಳಿಗೆ ಬಹುನೆಚ್ಚಿನ ಜಾಗಗಳು. ಸುಲಭಕ್ಕೆ ಆಹಾರ ಅಲ್ಲಿ ದೊರಕುತ್ತದೆ. ವಿಶ್ರಾಂತಿಗಾಗಿ ನೆರಳು ಲಭ್ಯವಿರುತ್ತದೆ. ಮರಿಗಳನ್ನೂ ಆರಾಮವಾಗಿ ಸಾಕಬಹುದು’ ಎಂದು ತಾವು ತೆಗೆದ ಚಿರತೆಯ ಫೋಟೋ ಕೂಡ ಹಂಚಿಕೊಂಡಿದ್ದಾರೆ.

ವನ್ಯಲೋಕದ ವೈಶಿಷ್ಟ್ಯ ಅಪಾರ.

ಮತ್ತಷ್ಟು ವೈರಲ್​ ವಿಡಿಯೋಗಳಿಗಾಗಿ ಕ್ಲಿಕ್ ಮಾಡಿ

Published On - 2:53 pm, Wed, 21 September 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್