Viral : ಬೇಕಾ ನಿಮಗೂ ‘ಲಲ್ಲೂರಾಮ್ಸ್ ಸೋಲಾರ್ ಫ್ಯಾನ್​ ಹೆಲ್ಮೆಟ್​’?

Solar Fan : ಉತ್ತರ ಪ್ರದೇಶದ 77 ವರ್ಷದ ಹೂವ್ಯಾಪಾರಿ ಬಿಸಿಲಿನಿಂದ ರಕ್ಷಿಸಿಕೊಳ್ಳಲೆಂದು ಸ್ವತಃ ತಯಾರಿಸಿಕೊಂಡ ದೇಸೀ ಸೋಲಾರ್ ಹೆಲ್ಮೆಟ್ ಐಡಿಯಾ​ ಈಗ ವೈರಲ್ ಆಗಿದೆ.

Viral : ಬೇಕಾ ನಿಮಗೂ ‘ಲಲ್ಲೂರಾಮ್ಸ್ ಸೋಲಾರ್ ಫ್ಯಾನ್​ ಹೆಲ್ಮೆಟ್​’?
ಸೋಲಾರ್ ಫ್ಯಾನ್​ ಧರಿಸಿರುವ ಲಲ್ಲೂರಾಮ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Sep 21, 2022 | 12:13 PM

Viral : ಹೊರಗೆ ಕಾಲಿಟ್ಟರೆ ಉರಿಉರಿ ಬಿಸಿಲಷ್ಟೇ ಅಲ್ಲ, ಉಷ್ಣಗಾಳಿ ಕೂಡ. ಅದರಲ್ಲೂ ಉತ್ತರ ಭಾರತದ ಭಾಗಗಳಲ್ಲಿ ಈ ಹಾವಳಿ ಹೇಳತೀರದು. ಉತ್ತರ ಪ್ರದೇಶದ ಲಖೀಂಪುರ ಖೇರಿ ಜಿಲ್ಲೆಯ 77 ವರ್ಷದ ಲಲ್ಲೂರಾಮ್​ ಈ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಒಂದು ಹೊಸ ಐಡಿಯಾ ಕಂಡುಕೊಂಡಿದ್ದು ಇದೀಗ ವೈರಲ್ ಆಗಿದೆ. ನೆಟ್ಟಿಗರು ಇವರ ಈ ಚಾತುರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ಧಾರೆ. ಲಲ್ಲೂರಾಮ್ ಪ್ಲಾಸ್ಟಿಕ್ ಹೆಲ್ಮೆಟ್​ ಧರಿಸಿ, ಅದಕ್ಕೆ ಸೋಲಾರ್​ ಫ್ಯಾನ್​ ಜೋಡಿಸಿಕೊಂಡು ರಸ್ತೆಯಲ್ಲಿ ಹೊಂಟರೆ ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಅವರನ್ನು ಹಿಂಬಾಲಿಸಿ ಸೋಜಿಗದಿಂದ ನೋಡತೊಡಗುತ್ತಿದ್ದಾರೆ.

ಈ ವ್ಯಕ್ತಿಗೆ ಇಂಥ ಐಡಿಯಾ ಹೇಗೆ ಬಂದಿತು? ಲಲ್ಲೂರಾಮ್​ ಒಬ್ಬ ಹೂ ವ್ಯಾಪಾರಿ. ಮನೆಮನೆಗಳಿಗೆ ಹೋಗಿ ಹೂ ಮಾರುವುದು ಇವರ ನಿತ್ಯದ ಕಾಯಕ. ವಯಸ್ಸು ಮತ್ತು ಬಿಸಿಲು ಇವರನ್ನು ಸುಸ್ತು ಮಾಡುತ್ತ ಹೋಯಿತು. ಆರೋಗ್ಯ ಕೈಕೊಟ್ಟು ಕೆಲಸವನ್ನು ನಿಭಾಯಿಸಲು ಕಷ್ಟವಾಗತೊಡಗಿತು. ಹೀಗಾದಾಗೆಲ್ಲ ಅವರ ಸರಕು ನಷ್ಟವಾಗತೊಡಗಿತು, ಹೇಳಿಕೇಳಿ ಹೂ, ಅರ್ಧ ದಿನದಲ್ಲಿ ಬಾಡಿಹೋಗುವಂಥ ಕೋಮಲತೆ. ಬಹುಮುಖ್ಯವಾಗಿ ಸಂಸಾರಜೀವನ ನಡೆಸುವವರಾರು? ಕೊನೆಗೆ ಈ ಬಿಸಿಲಿನಿಂದ ಹೇಗೆ ರಕ್ಷಿಸಿಕೊಳ್ಳುವುದು ಎಂದು ಯೋಚಿಸುತ್ತ ಪುಟ್ಟ ಟೇಬಲ್​ ಫ್ಯಾನ್​ ಅನ್ನು ಹೆಲ್ಮೆಟ್​ಗೆ ಜೋಡಿಸಿಕೊಂಡರು. ಅದು ಸೌರಶಕ್ತಿಯ ಸಹಾಯದಿಂದ ಚಲಿಸುವಂತೆ ವ್ಯವಸ್ಥೆ ಮಾಡಿಕೊಂಡರು.

UP man beats the heat with solar-powered fan attached to his helmet

ಕುತೂಹಲ ಉಂಟುಮಾಡಿರುವ ಈ ಫ್ಯಾನ್!

ಇದನ್ನು ರೂಪಿಸಲು ಅಗತ್ಯವಿರುವ ವಸ್ತುಗಳನ್ನು ಪರಿಚಿತ ಜನರಿಂದ ಕಡ ಪಡೆದುಕೊಂಡರು. ಕಾರಣ, ಲಲ್ಲೂರಾಮ್​ ಅವರ ಅನಾರೋಗ್ಯದಿಂದ ವ್ಯಾಪಾರ ಕುಸಿದಿತ್ತಾದ್ದರಿಂದ ಅವರ ಬಳಿ ಹೊಸ ವಸ್ತುಗಳನ್ನು ಕೊಂಡುಕೊಳ್ಳಲು ಹಣವಿರಲಿಲ್ಲ. ಏಕೆಂದರೆ ನಿತ್ಯ ಮನೆಮನೆಗೆ ಹೋಗಿ ಹೂಮಾರಿದರಷ್ಟೇ ಕುಟುಂಬದವರ ಹೊಟ್ಟೆ ತುಂಬುವಂಥ ಪರಿಸ್ಥಿತಿ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಕಷ್ಟದಲ್ಲೇ ಹೊಸ ಆಲೋಚನೆಗಳು ಹುಟ್ಟುತ್ತವೆ ಎನ್ನುವುದಕ್ಕೆ ಇದಕ್ಕಿಂತ ಉದಾಹರಣೆ ಬೇಕಾ?

ಮತ್ತಷ್ಟು ವೈರಲ್ ನ್ಯೂಸ್ ಗಾಗಿ ಕ್ಲಿಕ್ ಮಾಡಿ 

Published On - 12:11 pm, Wed, 21 September 22

ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ