Viral : ಸಾಫ್ಟ್​ವೇರ್​ ಎಂಜಿನಿಯರ್ ವರಗಳ ಬೇಡಿಕೆ ಕುಸಿಯುತ್ತಿದೆಯೇ? ‘ಎತ್ತ ಸಾಗುತ್ತಿದೆ ಐಟಿ ಭವಿಷ್ಯ!’

Groom : 'ವರನು ಐಎಎಸ್​, ಐಪಿಎಸ್​, ವೈದ್ಯ, ಕೈಗಾರಿಕೋದ್ಯಮಿಯಾಗಿರಬೇಕು. ದಯವಿಟ್ಟು ಸಾಫ್ಟ್​ವೇರ್​ ಎಂಜನಿಯರುಗಳು ಬೇಡ’ ಪತ್ರಿಕೆಯಲ್ಲಿ ನೀಡಿದ ಜಾಹೀರಾತಿನ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

Viral : ಸಾಫ್ಟ್​ವೇರ್​ ಎಂಜಿನಿಯರ್ ವರಗಳ ಬೇಡಿಕೆ ಕುಸಿಯುತ್ತಿದೆಯೇ? ‘ಎತ್ತ ಸಾಗುತ್ತಿದೆ ಐಟಿ ಭವಿಷ್ಯ!'
ವೈರಲ್ ಆದ ಜಾಹೀರಾತು
Follow us
| Updated By: ಶ್ರೀದೇವಿ ಕಳಸದ

Updated on:Sep 21, 2022 | 11:29 AM

Viral : ಡಿಜಿಟಲ್​ ಯುಗದಲ್ಲಿ ತಮ್ಮ ಜೀವನ ಸಂಗಾತಿಗಳನ್ನು ಹುಡುಕಿಕೊಳ್ಳುವ ವಿಧಾನ ಇತ್ತೀಚೆಗೆ ಗಮನ ಸೆಳೆಯುವಂತಿರುತ್ತವೆ; ಹಿಂದೂ ಪಿಳ್ಳೈ, ಮಾಂಸಾಹಾರಿ, ಶ್ರೀಮಂತ ಮನೆತನದ ಸೌಂದರ್ಯವತಿಯಾಗಿರುವ, ಎಂಬಿಎ ಓದಿರುವ 24 ವಯಸ್ಸಿನ ವಧುವಿಗೆ ಇದೇ ಜಾತಿಯ ವರ ಬೇಕಾಗಿದೆ. ಐಪಿಎಸ್​, ಐಎಎಸ್​, ವೈದ್ಯ (ಪಿಜಿ) ಉದ್ಯಮಿ, ಕೈಗಾರಿಕೋದ್ಯಮಿಗಳು ಸಂಪರ್ಕಿಸಬಹುದು. ಆದರೆ ದಯವಿಟ್ಟು ಸಾಫ್ಟ್​ವೇರ್​ ಎಂಜನಿಯರುಗಳು ಫೋನ್ ಮಾಡಬೇಡಿ-ಪತ್ರಿಕೆಯಲ್ಲಿ ಬಂದ ಜಾಹೀರಾತಿನ ತುಣುಕೊಂಡು ವೈರಲ್ ಆಗಿದೆ. ಹಾಗಿದ್ದರೆ ಸಾಫ್ಟ್​ವೇರ್​ ಎಂಜಿನಿಯರ್ ವರಗಳಿಗೆ ಬೇಡಿಕೆ ಕುಸಿಯುತ್ತಿದೆಯೇ?

ಒಟ್ಟಾರೆಯಾಗಿ ಸಾಫ್ಟ್​ವೇರ್​ ಕ್ಷೇತ್ರದ ಭವಿಷ್ಯದ ಬಗ್ಗೆ ಅನುಮಾನ ಹುಟ್ಟುಹಾಕುವಂತೆ ಪನ್ ಮಾಡಿ ಈ ಪೋಸ್ಟ್​ಗೆ ಶೀರ್ಷಿಕೆ ನೀಡಲಾಗಿದೆ. ನೆಟ್ಟಿಗರು ಇಂಥ ವಿಚಿತ್ರ ಜಾಹೀರಾತುಗಳ ಕಾಲೆಳೆಯಲು ಆಗಾಗ ಕಾಯುತ್ತಿರುತ್ತಾರೆ. ಸದ್ಯ ಈ ಜಾಹೀರಾತು ನೆಟ್ಟಿಗರನ್ನು ಬಗೆಬಗೆಯಲ್ಲಿ ಯೋಚಿಸುವಂತೆ, ಪ್ರತಿಕ್ರಿಯಿಸುವಂತೆ ಮಾಡಿದೆ.

‘ಮೆಕ್ಯಾನಿಕಲ್ ಎಂಜಿನಿಯರುಗಳು​ ಫೋನ್ ಮಾಡಬಹುದಾ?’ ಎಂದು ಒಬ್ಬರು ತಮಾಷೆ ಮಾಡಿದ್ದಾರೆ. ‘ಈ ಜಾಹೀರಾತು ನೋಡುತ್ತಿದ್ದಂತೆ, ಇಡೀ ದೇಶದ ಭವಿಷ್ಯ ಅಷ್ಟೊಂದು ಚೆನ್ನಾಗಿಲ್ಲ ಎಂದೆನ್ನಿಸುತ್ತಿದೆ’ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

‘ಚಿಂತೆ ಮಾಡಬೇಡಿ, ಸಾಫ್ಟ್​ವೇರ್​ ಎಂಜಿನಿಯರುಗಳು ಪತ್ರಿಕೆಯ ಜಾಹೀರಾತುಗಳನ್ನು ಅವಲಂಬಿಸಿರುವುದಿಲ್ಲ. ತಮಗೆ ಬೇಕಾದುದನ್ನು ಸ್ವತಃ ಹುಡುಕಿಕೊಳ್ಳುತ್ತಾರೆ’ ಎಂದು ಮತ್ತೊಬ್ಬರು ಹೇಳಿದ್ದಾರೆ.

ನಿಮಗೇನೆನ್ನಿಸುತ್ತಿದೆ?

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 11:20 am, Wed, 21 September 22

ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ