Viral Video : ನೀ ನಡೆವ ಹಾದಿಯಲ್ಲಿ; ಕೇರಳದ ವಧುವಿನ ಈ ಅರ್ಥಪೂರ್ಣ ವೆಡ್ಡಿಂಗ್​ ಶೂಟ್​

Wedding Photoshoot : 4 ಮಿಲಿಯನ್​ಗಿಂತಲೂ ಹೆಚ್ಚು ಜನ ನೋಡಿರುವ ಈ ವಿಡಿಯೋದಲ್ಲಿ, ಈ ವಧು ತನ್ನ ವೆಡ್ಡಿಂಗ್ ಫೋಟೋ ಶೂಟ್ ಮೂಲಕ ಕೇರಳ ರಸ್ತೆಗಳ ಅವಸ್ಥೆಗಳ ಬಗ್ಗೆ ಗಮನ ಸೆಳೆದಿದ್ದಾರೆ.

Viral Video : ನೀ ನಡೆವ ಹಾದಿಯಲ್ಲಿ; ಕೇರಳದ ವಧುವಿನ ಈ ಅರ್ಥಪೂರ್ಣ ವೆಡ್ಡಿಂಗ್​ ಶೂಟ್​
ವೆಡ್ಡಿಂಗ್ ಫೋಟೋ ಶೂಟ್​ನಲ್ಲಿ ಕೇರಳದ ವಧು
Follow us
TV9 Web
| Updated By: ಶ್ರೀದೇವಿ ಕಳಸದ

Updated on:Sep 21, 2022 | 10:46 AM

Viral Video : ಜೀವನದ ಪ್ರತೀ ಘಟ್ಟವನ್ನೂ ವಿಶೇಷವಾಗಿ ದಾಖಲಿಸುವುದನ್ನು ಇಂದು ಸಾಮಾನ್ಯವಾಗಿ ಎಲ್ಲರೂ ಬಯಸುತ್ತಿದ್ದಾರೆ. ಅದರಲ್ಲೂ ಡಿಜಿಟಲ್​ಯುಗದಲ್ಲಿ ಈ ಸೃಜನಶೀಲತೆಗೆ ಎಲ್ಲೆಯೇ ಇಲ್ಲ. ಪ್ರೀವೆಡ್ಡಿಂಗ್ ಶೂಟ್ ಇರಬಹುದು, ವೆಡ್ಡಿಂಗ್​ ಶೂಟ್​ ಇರಬಹುದು ಸಿನೆಮಾ ದೃಶ್ಯಗಳಂತೆಯೇ ಕಂಗೊಳಿಸುತ್ತಿರುತ್ತವೆ. ಕೇರಳದ ವಧುವೊಬ್ಬರು ತಮ್ಮ ಮದುವೆಯ ಕ್ಷಣಗಳನ್ನು ದಾಖಲಿಸಲು ಆಲೋಚಿಸಿದ ರೀತಿ ಬಹಳ ಗಮನ ಸೆಳೆಯುವಂತಿದೆ. ತಾವಿರುವ ಊರಿನ ರಸ್ತೆಗಳ ಹದಗೆಟ್ಟ ಸ್ಥಿತಿಯನ್ನು ಈ ವಿಡಿಯೋದಲ್ಲಿ ಹಿಡಿದಿಡಲು ನೋಡಿದ್ದಾರೆ. ತುಂಬಿದ ಹೊಂಡಗಳ ಮಧ್ಯೆ ಕೆಂಪು ಸೀರೆ ಉಟ್ಟು ನಡೆದು ಬರುವ ವಧುವಿನ ವಿಡಿಯೋ ಇಲ್ಲಿದೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಓಡಾಡುವ ವಾಹನಗಳು, ಎಲ್ಲೆಂದರಲ್ಲಿ ತುಂಬಿಕೊಂಡ ರಸ್ತೆಹೊಂಡಗಳು. ಸಂಪೂರ್ಣ ಅಲಂಕರಿಸಿಕೊಂಡು ಹುಷಾರಿನಿಂದ ನಡೆದುಬರುತ್ತಿರುವ ಈ ವಧು… ಈ ದೃಶ್ಯ ನೋಡಿದ ಯಾರೂ ಮತ್ತೆ ಮತ್ತೆ ನೋಡುವಂತಿದೆ.

Arrow_weddingcompany ಎಂಬ ಇನ್​ಸ್ಟಾಗ್ರಾಂ ಖಾತೆಯಲ್ಲಿ ಸೆಪ್ಟೆಂಬರ್​ 11ರಂದು ಈ ಪೋಸ್ಟ್​ ಹಂಚಿಕೊಳ್ಳಲಾಗಿದೆ. ಈತನಕ 4.3 ಮಿಲಿಯನ್ ಜನ ಈ ವಿಡಿಯೋ ವೀಕ್ಷಿಸಿದ್ದಾರೆ. 3,70,400 ಜನರಿಂದ ಮೆಚ್ಚುಗೆ ಪಡೆದಿದೆ.

ವಧುವಿನ ಈ ಸೃಜನಶೀಲ ಆಲೋಚನೆಯಿಂದ ನೆಟ್ಟಿಗರು ಪ್ರಭಾವಿತರಾಗಿದ್ದಾರೆ. ಆದರೆ, ಕೇರಳ ರಸ್ತೆಯ ಅವಸ್ಥೆಯ ಬಗ್ಗೆ ಸಾಕಷ್ಟು ಗೇಲಿ ಮಾಡಿದ್ದಾರೆ. ‘ಫೋಟೋ ಶೂಟ್​ ರಸ್ತೆಯಲ್ಲಿ ನಡೆಯುತ್ತಿಲ್ಲ, ಹೊಂಡದಲ್ಲಿ’ ಎಂದಿದ್ದಾರೆ. ‘ನೈಸ್ ರೋಡ್’ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ‘ಅದು ರಸ್ತೆಯೇ? ಕೆಲವು ಮರಿ ಮೀನುಗಳನ್ನು ಖರೀದಿಸಿ ಇಲ್ಲಿಯೇ ಮೀನುಸಾಕಾಣಿಕೆ ಪ್ರಾರಂಭಿಸಬಹುದು’ ಎಂದಿದ್ದಾರೆ ಒಬ್ಬರು.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:41 am, Wed, 21 September 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ