Viral Video: ಮೃತ ಮಾಲೀಕನ ಮುಖ ಕೊನೆಯದಾಗಿ ನೋಡಲು ಓಡೋಡಿ ಬಂದು ಕಣ್ಣೀರಿಟ್ಟ ಕರು

ಆತ ಕರುವನ್ನು ಪ್ರೀತಿಯಿಂದ ಸಾಕಿ ಸಲಹಿ ಕಾಣದ ಊರಿಗೆ ಹೊರಟೇ ಬಿಟ್ಟ. ಆದರೆ ತನ್ನನ್ನು ಮನೆಯ ಸದಸ್ಯನಂತೆ ನೋಡಿಕೊಂಡ ಮಾಲೀಕ ಇನ್ನಿಲ್ಲ ಎಂಬುದನ್ನು ತಿಳಿದ ಆ ಕರು ಅರಗಿಸಿಕೊಳ್ಳುವುದಾದರೂ ಹೇಗೆ? ಮುಂದೇನಾಯ್ತು ಎಂದು ತಿಳಿಯಲು ವಿಡಿಯೋ ನೋಡಿ.

Viral Video: ಮೃತ ಮಾಲೀಕನ ಮುಖ ಕೊನೆಯದಾಗಿ ನೋಡಲು ಓಡೋಡಿ ಬಂದು ಕಣ್ಣೀರಿಟ್ಟ ಕರು
ಮೃತ ಮಾಲೀಕನಿಗೆ ಕಣ್ಣೀರಿನ ವಿದಾಯ ಹೇಳಿದ ಕರು
Follow us
TV9 Web
| Updated By: Rakesh Nayak Manchi

Updated on:Sep 22, 2022 | 4:21 PM

ಆತ ಕರುವನ್ನು ಪ್ರೀತಿಯಿಂದ ಸಾಕಿ ಸಲಹಿ ಕಾಣದ ಊರಿಗೆ ಹೊರಟೇ ಬಿಟ್ಟ. ಆದರೆ ತನ್ನನ್ನು ಮನೆಯ ಸದಸ್ಯನಂತೆ ನೋಡಿಕೊಂಡ ಮಾಲೀಕ ಇನ್ನಿಲ್ಲ ಎಂಬುದನ್ನು ತಿಳಿದ ಆ ಕರು ಅರಗಿಸಿಕೊಳ್ಳುವುದಾದರೂ ಹೇಗೆ? ಜನರೆಲ್ಲರೂ ಮೃತ ವ್ಯಕ್ತಿಯ ದೇಹವನ್ನು ಅಂತ್ಯಸಂಸ್ಕಾರ ನಡೆಸಲು ಜಮೀನಿಗೆ ಕರೆದುಕೊಂಡು ಹೋದರು. ಇತ್ತ ಬೇಸರಲ್ಲೇ ಓಡೋಡಿ ಬಂದ ಕರು ಜಮೀನಿನಲ್ಲಿ ತನ್ನ ಮಾಲೀಕನನ್ನು ಹುಡುಕಾಡಲು ಪ್ರಾರಂಭಿಸಿತು. ಇದನ್ನು ಅರಿತ ಅಲ್ಲಿದ್ದ ಜನರು ಕರುವನ್ನು ಮೃತದೇಹದ ಬಳಿ ಹೋಗಲು ದಾರಿ ಮಾಡಿಕೊಟ್ಟರು. ಹೀಗೆ ಚಟ್ಟದ ಮೇಲೆ ಮಲಗಿದ್ದ ಮೃತ ಮಾಲೀಕನ ಬಳಿ ಹೋಗಿ ಜೋರಾಗಿ ಬೊಬ್ಬಿಡುತ್ತಾ ಕಣ್ಣೀರಿಟ್ಟಿತು. ಈ ಕ್ಷಣವನ್ನು ನೋಡಿದರೆ ಎಂಥವರಿಗಾದರೂ ಕಣ್ಣಿನಲ್ಲಿ ನೀರು ಉಕ್ಕಿ ಹರಿಯದೆ ಇರದು. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ವೈರಲ್ (Video Viral) ಆಗುತ್ತಿದೆ.

ವಿಡಿಯೋದಲ್ಲಿ ಕಾಣುವಂತೆ, ಕರುವಿನ ಮಾಲೀಕ ಸಾವನ್ನಪ್ಪಿರುತ್ತಾರೆ. ಮೃತದೇಹವನ್ನು ಅಂತ್ಯಸಂಸ್ಕಾರ ಮಾಡುವ ನಿಟ್ಟಿನಲ್ಲಿ ಸಮಸ್ತರು ಜಮೀನಿಗೆ ತೆಗೆದುಕೊಂಡು ಹೋಗುತ್ತಾರೆ. ಆದರೆ ಈ ವೇಳೆ ಜಮೀನಿಗೆ ಬಂದ ಹಸು, ಮೃತಪಟ್ಟ ತನ್ನ ಮಾಲೀಕನನ್ನು ನೋಡಲು ಪರಿತಪಿಸುತ್ತಿತ್ತು. ಇದನ್ನು ನೋಡಿದ ಜನರು ಹಸುವನ್ನು ಮೃತದೇಹದತ್ತ ಹೋಗಲು ದಾರಿ ಮಾಡಿಕೊಟ್ಟರು. ಅದರಂತೆ ಮೃತದೇಹದ ಬಳಿ ಹೋದ ಹಸು ಬೇಸರದಲ್ಲಿ ಬೊಬ್ಬಿಡುತ್ತಾ ದೇಹವನ್ನು ಮುದ್ದಿಸಿ ಕಣ್ಣೀರಿಡುವುದನ್ನು ನೋಡಬಹುದು.

ತನ್ನನ್ನು ಸಲಹಿದ ಮಾಲೀಕನಿಗೆ ಹಸು ಕಣ್ಣೀರಿನ ವಿದಾಯ ಹೇಳುವಂತಹ ಮನಕಲಕುವ ಘಟನೆ ಜಾರ್ಖಂಡ್‌ನ ಹಜಾರಿಬಾಗ್‌ನಲ್ಲಿ ನಡೆದಿದೆ. ಅಲ್ಲದೆ ಹಸುವಿನ ಉಪಸ್ಥಿತಿಯಲ್ಲಿಯೇ ಅಂತಿಮ ವಿಧಿವಿಧಾನಗಳು ನೆರವೇರಿದೆ. ಈ ವಿಡಿಯೋವನ್ನು ಶಕ್ತಿ ಓಜಾ ಎಂಬವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಜಾರ್ಖಂಡ್​ನ ಹಜಾರಿಬಾಗ್​ನಲ್ಲಿ ಮಾಲೀಕನ ಸಾವಿನಿಂದಾಗಿ ಚಿತಾಗಾರ ತಲುಪಿದ ಸಾಕು ಹಸು” ಎಂದು ಶೀರ್ಷಿಕೆ ಬರೆದಿದ್ದಾರೆ. ಅಲ್ಲದೆ ಮಾಲೀಕನ ಮುಖವನ್ನು ಕೊನೆಯದಾಗಿ ನೋಡಲು ಹೊದಿಕೆಯನ್ನು ತೆಗೆಯಲಾಗಿತ್ತು ಎಂದೂ ಬರೆದಿದ್ದಾರೆ.

ಮತ್ತಷ್ಟು ವೈರಲ್ ವಿಡಿಯೋಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Published On - 4:17 pm, Thu, 22 September 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ