Viral Video: ನಡುರಸ್ತೆಯಲ್ಲಿ ಡಿಶ್ಯುಂ ಡಿಶ್ಯುಂ; ನುಗ್ಗಿ ಬಂದ ಕಾರಿನಿಂದ ಡಿಕ್ಕಿ, ಯುವಕರಿಬ್ಬರು ಪಲ್ಟಿ
ನಡುರಸ್ತೆಯಲ್ಲೇ ಯುವಕರ ಮಾರಾಮರಿ ನಡೆಯುತ್ತಿದ್ದಾಗ ನುಗ್ಗಿ ಬಂದ ಕಾರೊಂದು ಯುವಕರಿಗೆ ಡಿಕ್ಕಿ ಹೊಡೆದ ಘಟನೆಯ ವಿಡಿಯೋ ವೈರಲ್ ಆಗುತ್ತಿದೆ. ಈ ಘಟನೆ ಉತ್ತರಪ್ರದೇಶದ ಘಾಜಿಯಾಬಾದ್ನಲ್ಲಿ ನಡೆದಿದೆ.
ನಡುರಸ್ತೆಯಲ್ಲೇ ಹೀರೋ ಜೊತೆ ಹತ್ತಾರು ಪುಡಿ ರೌಡಿಗಳು ಫೈಟಿಂಗ್ ನಡೆಸುತ್ತಿರುತ್ತಾರೆ. ಈ ನಡುವೆ ನುಗ್ಗಿ ಬರುವ ಕಾರೊಂದು ಹೀರೋ ಮೇಲೆ ಹತ್ತಿಸಲು ಯತ್ನಿಸಲಾಗುತ್ತದೆ. ಇದು ಸಿನಿಮಾದ ರೀಲ್ ದೃಶ್ಯಾವಳಿಯಾಗಿದ್ದರೆ ಉತ್ತರಪ್ರದೇಶದಲ್ಲೊಂದು ಇಂತಹದ್ದೇ ಮಾದರಿಯ ಘಟನೆಯೊಂದು ನೈಜವಾಗಿಯೇ ನಡೆದಿದೆ. ಆದರೆ ಈ ಘಟನೆಯಲ್ಲಿ ಹೀರೋ ಯಾರೂ ಇಲ್ಲ. ಕೇವಲ ಪುಂಡು ಪೋಕರಿಗಳನ್ನಷ್ಟೇ ಕಾಣಬಹುದು. ಘಾಜಿಯಾಬಾದ್ನ ರಸ್ತೆಯೊಂದರಲ್ಲಿ ಹತ್ತಾರು ಯುವಕರ ನಡುವೆ ಮಾರಾಮರಿ ನಡೆಯುತ್ತಿರುತ್ತದೆ. ಈ ವೇಳೆ ಗುಂಪಿನತ್ತ ನುಗ್ಗಿ ಬಂದ ಕಾರೊಂದು ಬೇಕಂತಲೇ ಇಬ್ಬರಿಗೆ ಡಿಕ್ಕಿ ಹೊಡೆದಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಯುವಕರ ಡಿಶ್ಯಂಡಿಶ್ಯುಂ ವಿಡಿಯೋ ವೈರಲ್ (Video Viral) ಆಗುತ್ತಿದೆ.
ವಿಡಿಯೋದಲ್ಲಿ ಇರುವಂತೆ, ಗಾಜಿಯಾಬಾದ್‌ನಲ್ಲಿ ನಡುರಸ್ತೆಯಲ್ಲಿ ಯುವಕರ ತಂಡ ಜಗಳ ನಡೆಸುತ್ತಿರುತ್ತದೆ. ಯುವಕರು ಪರಸ್ಪರ ಹೊಡೆದಾಡುವಲ್ಲಿ ನಿರತರಾಗಿರುತ್ತಾರೆ. ಈ ವೇಳೆ ವ್ಯಕ್ತಿಯೊಬ್ಬ ತನ್ನ ಕಾರಿನ್ನು ಚಲಾಯಿಸುತ್ತಾ ಗುಂಪಿನ ಮಧ್ಯೆ ನುಗ್ಗಿ ಬಂದು ಯುವಕರ ಮೇಲೆ ಹತ್ತಿಸಲು ಯತ್ನಿಸುತ್ತಾನೆ. ಆದರೆ ಕಾರು ತಮ್ಮತ್ತ ಬರುತ್ತಿರುವುದನ್ನು ನೋಡಿದ ಪುಂಡುಪೋಕರಿಗಳು ಚೆಲ್ಲಾಪಿಲ್ಲಿಯಾಗಿ ಓಡಿ ತಪ್ಪಿಸಿಕೊಂಡಿದ್ದಾರೆ. ಆದರೆ ಇಬ್ಬರು ಯುವಕರು ಮಾತ್ರ ಫೈಟಿಂಗ್ ಮುಂದುವರಿಸಿದ್ದಾರೆ. ಹೀಗಾಗಿ ಇವರನ್ನೇ ಗುರಿಯಾಗಿಸಿಕೊಂಡು ಬಂದು ಕಾರು ಗುದ್ದಿದೆ. ಪರಿಣಾಮವಾಗಿ ಓರ್ವ ಯುವಕ ಡಿಕ್ಕಿಯ ರಭಸಕ್ಕೆ ಪಲ್ಟಿ ಹೊಡೆದಿದ್ದಾನೆ.
ಇಷ್ಟೆಲ್ಲಾ ಆದರೂ ಯುವಕರ ಕೋಪ ಕಮ್ಮಿ ಆದಂತೆ ಕಂಡಿಲ್ಲ, ನಂತರವೂ ಯುವಕರ ಫೈಟಿಂಗ್ ಮುಂದುವರಿದಿದೆ. ಅಲ್ಲದೆ ಕೆಲವರು ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾರೆ. ಅಷ್ಟರಲ್ಲಾಗಲೇ ಎಂಟ್ರಿಕೊಟ್ಟ ಪೊಲೀಸರು ಒಂದಷ್ಟು ಯುವಕರನ್ನು ಹಿಡಿದಿದ್ದಾರೆ. ಈ ಎಲ್ಲಾ ದೃಶ್ಯಾವಳಿಗಳು ವೈಲರ್ ವಿಡಿಯೋದಲ್ಲಿ ಕಾಣಬಹುದಾಗಿದೆ.
ಘಟನೆಯ ನಂತರ ಗಾಜಿಯಾಬಾದ್ ಪೊಲೀಸರು ಕೆಲವು ಆರೋಪಿಗಳನ್ನು ಬಂಧಿಸಿದ್ದಾರೆ ಮತ್ತು ಘಟನೆಯಲ್ಲಿ ಭಾಗಿಯಾಗಿದ್ದ ವಾಹನವನ್ನು ಕೂಡ ವಶಪಡಿಸಿಕೊಂಡಿದ್ದಾರೆ. ಸದ್ಯ ಘಟನೆ ಸಂಬಂದ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ವೈರಲ್ ವಿಡಿಯೋ:
Peak Ghaziabad. Disturbing video.
A speeding car gate-crashes a brawl. The brawl didn't stop though. pic.twitter.com/p3qyBf0DKt
— Piyush Rai (@Benarasiyaa) September 21, 2022
ಮತ್ತಷ್ಟು ವೈರಲ್ ವಿಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Published On - 12:41 pm, Thu, 22 September 22