AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Brain Teaser: ಡ್ರ್ಯಾಗನ್​​​ಗಳ ನಡುವೆ ಅಡಗಿ ಕುಳಿತಿರುವ ಮೂರು ಮೊಸಳೆಗಳನ್ನು ಕಂಡುಹಿಡಿಯಿರಿ ನೋಡಾ

ಮೆದುಳನ್ನು ಚುರುಕುಗೊಳಿಸುವ ಒಗಟಿನ ಆಟವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆ ಚಿತ್ರದಲ್ಲಿ ಡ್ರ್ಯಾಗನ್​​​ಗಳ ಮಧ್ಯೆ ಮೂರು ಮೊಸಳೆಗಳು ಅಡಗಿ ಕುಳಿತಿದ್ದು, ಸರಿಯಾದ ಉತ್ತರವನ್ನು ಕಂಡುಹಿಡಿಯಿರಿ.

Viral Brain Teaser: ಡ್ರ್ಯಾಗನ್​​​ಗಳ ನಡುವೆ ಅಡಗಿ ಕುಳಿತಿರುವ ಮೂರು ಮೊಸಳೆಗಳನ್ನು ಕಂಡುಹಿಡಿಯಿರಿ ನೋಡಾ
ವೈರಲ್​​ ನ್ಯೂಸ್​
ಮಾಲಾಶ್ರೀ ಅಂಚನ್​
| Edited By: |

Updated on: Jun 10, 2023 | 2:43 PM

Share

ಮೆದುಳಿಗೆ ಕೆಲಸ ನೀಡುವ ಒಗಟಿನ ಆಟಗಳು ಪ್ರತಿನಿತ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುತ್ತವೆ. ಈ ಒಗಟಿನ ಆಟಗಳು ಆಟಗಳು ಮನರಂಜನೆಯನ್ನು ನೀಡುವುದರ ಜೊತೆಗೆ ಮೆದುಳನ್ನು ಚುರುಕುಗೊಳಿಸಲು ಇರುವ ಒಂದು ಮೋಜಿನ ವ್ಯಾಯಾಮ ಮಾರ್ಗವಾಗಿದೆ. ಹೆಚ್ಚಿನ ಜನರು ಈ ಕುತೂಹಲಕಾರಿ ಆಟವನ್ನು ಆಡಲು ಇಷ್ಟಪಡುತ್ತಾರೆ. ಬಿಡುವಿಲ್ಲದ ಕೆಲಸದ ನಡುವೆ ತ್ವರಿತ ಬಿಡುವು ಪಡೆದುಕೊಂಡು ಮನಸ್ಸನ್ನು ರಿಫ್ರೇಶ್ ಮಾಡಬೇಕೆಂದು ಬಯಸುತ್ತೀರಾ? ಹಾಗಾದರೆ ಈ ಸವಾಲಿನ ಆಟವನ್ನು ಭೇದಿಸಿ. ಫೇಸ್ಬುಕ್​​​​ನಲ್ಲಿ ವೈರಲ್ ಆಗಿರುವ ಈ ಒಗಟಿನ ಆಟವು ಡ್ರ್ಯಾಗನ್ ಗಳ ಮಧ್ಯೆ ಇರುವ ಮೂರು ಮೊಸಳೆಗಳನ್ನು ಹುಡುಕಲು ಸವಾಲು ಹಾಕುತ್ತದೆ.

ಈ ಒಗಟಿನ ಆಟದ ಚಿತ್ರವನ್ನು ಹಂಗೇರಿಯ ಗ್ರಾಫಿಕ್ಸ್ ಕಲಾವಿದ ಗೆರ್ಗೆಲಿ ಡುಡಾಸ್ (@Gergely dudas) ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದು, ‘ಡ್ರ್ಯಾಗನ್ ಗಳ ಮಧ್ಯೆ ಇರುವ ಮೂರು ಮೊಸಳೆಗಳನ್ನು ಹುಡುಕಬಹುದೇ’ ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ ವೈರಲ್ ಆಗಿರುವ ಈ ಒಗಟಿನ ಚಿತ್ರದಲ್ಲಿ ನೀವು ಡ್ರ್ಯಾಗನ್ ಗಳ ಗುಂಪನ್ನು ನೋಡಬಹುದು. ಜೊತೆಗೆ ಮೂರು ಮೊಸಳೆಗಳು ಅವುಗಳ ನಡುವೆ ಅವಿತು ಕುಳಿತಿದೆ. ಮೊಸಳೆಗಳು ಹಾಗೂ ಡ್ರ್ಯಾಗನ್​​​​ಗಳ ಬಣ್ಣ ಒಂದೇ ಆಗಿರುವುದರಿಂದ ಅವುಗಳನ್ನು ಕಂಡುಹಿಡಿಯುವುದು ಸಾಕಷ್ಟು ಸವಾಲಿನದ್ದಾಗಿದೆ.

ಇದನ್ನೂ ಓದಿ: Viral Brain Teaser: ಮರದ ದಿಮ್ಮಿಗಳ ರಾಶಿಯ ನಡುವೆ ಅಡಗಿರುವ ಬೆಕ್ಕನ್ನು ನೀವು ಗುರುತಿಸಬಲ್ಲಿರಾ?

ಜೂನ್ 6ರಂದು ಫೇಸ್ಬುಕ್​​​ನಲ್ಲಿ ಹಂಚಿಕೊಳ್ಳಲಾದ ಒಗಟಿನ ಆಟವು ಲೈಕ್ಸ್ ಮತ್ತು ಹಲವಾರು ಕಮೆಂಟ್ಸ್ ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ‘ನಾನು ಎರಡು ಮೊಸಳೆಗಳನ್ನು ಕಂಡುಹಿಡಿದೆ. ಆದರೆ ಮೂರನೆಯದು ನಿಜವಾಗಿಯೂ ಮೊಸಳೆಯೇ ಎನ್ನುವುದು ನನಗೆ ಖಚಿತವಾಗಿಲ್ಲ’ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ‘ನಾನು ಮೂರು ಮೊಸಳೆಗಳನ್ನು ಕಂಡುಹಿಡಿದೆ. ಈ ಒಗಟನ್ನು ನೀಡಿದ್ದಕ್ಕಾಗಿ ಧನ್ಯವಾದಗಳು’ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ‘ಈ ಸವಾಲು ಸ್ವಲ್ಪ ಕಷ್ಟಕರವಾಗಿತ್ತು, ಆದರೂ ಕೊನೆಯಲ್ಲಿ ಸರಿಯಾದ ಉತ್ತರವನ್ನು ಕಂಡುಕೊಂಡೆ’ ಎಂದು ಕಮೆಂಟ್ ಮಾಡಿದ್ದಾರೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ