AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಬಾತ್ರೂಮಿನಲ್ಲಿ ಸಂಗೀತ ಕೇಳಿದ್ದಕ್ಕಾಗಿ ವಿದ್ಯಾರ್ಥಿನಿಯಿಂದ ಕ್ಷಮಾಪಣೆ ಪತ್ರ ಬರೆಯಿಸಿಕೊಂಡ ಹಾಸ್ಟೆಲ್ ಸಿಬ್ಬಂದಿ

Apology : ಇಂಥ ಸಣ್ಣ ವಿಷಯಕ್ಕೆ ಇಷ್ಟು ದೊಡ್ಡ ಶಿಕ್ಷೆಯೇ? ಹಾಸ್ಟೆಲ್​ಗಳಲ್ಲಿ ಈಗಲೂ ಇಂಥ ಪರಿಸ್ಥಿತಿ ಇದೆಯೇ? ಇದು ಈ ವಿದ್ಯಾರ್ಥಿನಿಗೆ ಆದ ಅವಮಾನವಲ್ಲವೆ? ಎಂದು ನೆಟ್ಟಿಗರು ಬಹಳ ಪೇಚಾಡುತ್ತಿದ್ದಾರೆ.

Viral: ಬಾತ್ರೂಮಿನಲ್ಲಿ ಸಂಗೀತ ಕೇಳಿದ್ದಕ್ಕಾಗಿ ವಿದ್ಯಾರ್ಥಿನಿಯಿಂದ ಕ್ಷಮಾಪಣೆ ಪತ್ರ ಬರೆಯಿಸಿಕೊಂಡ ಹಾಸ್ಟೆಲ್ ಸಿಬ್ಬಂದಿ
ಕ್ಷಮಾಪಣೆ ಪತ್ರದೊಂದಿಗೆ ಕೇರಳದ ಎಂಜಿನಿಯರಿಂಗ್ ವಿದ್ಯಾರ್ಥಿನಿ ವರಲಕ್ಷ್ಮೀ ರಾಜೀವ್
Follow us
TV9 Web
| Updated By: ಶ್ರೀದೇವಿ ಕಳಸದ

Updated on:Jun 10, 2023 | 1:03 PM

Hostel Life : ವಿದ್ಯಾರ್ಥಿನಿಯೊಬ್ಬಳು ಸ್ನಾನದ ಕೋಣೆಯಲ್ಲಿ ಮೊಬೈಲ್​ ಮೂಲಕ ಸಂಗೀತ ಕೇಳಿದ್ದೇ ಮಹಾಪ್ರಮಾದವೆಂಬಂತೆ ಪರಿಣಮಿಸಿದೆ. ಹಾಸ್ಟೆಲ್ ಸಿಬ್ಬಂದಿಯು ಆಕೆಯ ಮೊಬೈಲ್​ ಅನ್ನು ವಶಪಡಿಸಿಕೊಂಡಿದ್ದಲ್ಲದೆ ಆಕೆಯಿಂದ ಕ್ಷಮಾಪಣೆ ಪತ್ರವನ್ನೂ ಬರೆಸಿಕೊಂಡಿದೆ. ಫೋಟೋದಲ್ಲಿ ಪತ್ರ ಹಿಡಿದುಕೊಂಡು ನಿಂತಿರುವ ವಿದ್ಯಾರ್ಥಿನಿಯು ಕೇರಳದ ಕೂವಾಪಳ್ಳಿಯಲ್ಲಿರುವ (Koovapally) ಅಮಲ್ ಜ್ಯೋತಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ. ಆದರೆ ಈ ಘಟನೆ 2022ರ ಅಕ್ಟೋಬರ್​ನಲ್ಲಿ ನಡೆದಿದೆ ಎನ್ನುವುದನ್ನು ಪತ್ರದಲ್ಲಿರುವ ತಾರೀಖು ಸೂಚಿಸುತ್ತಿದೆ. ಇದೀಗ ರೆಡ್ಡಿಟ್ ಮೂಲಕ ಎಲ್ಲೆಡೆ ಹರಿದಾಡುತ್ತಿದೆ.

An apology letter for listening to music – Amal Jyothi College of Engineering by u/bheemanreghu in Kerala

(ಪತ್ರದ ಸಾರಾಂಶ ಈ ಕೆಳಗಿನಂತಿದೆ)

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಸಿಸ್ಟರ್ ಮಗಾ, ಅಮಲಾ ಹಾಸ್ಟೆಲ್​, ಎಜೆಸಿಇ

ವಿಷಯ : ಕ್ಷಮಾಪಣೆ ಪತ್ರ

ಮಾನ್ಯ ಸಿಸ್ಟರ್,

ನಾನು ಬಾತ್ರೂಮಿನಲ್ಲಿ ನನ್ನ ಮೊಬೈಲ್​ ಮೂಲಕ ಹಾಡು ಕೇಳುತ್ತ ಸ್ನಾನ ಮಾಡಿದ್ದಕ್ಕೆ ಕ್ಷಮಾಪಣೆ ಯಾಚಿಸುತ್ತಿದ್ದೇನೆ. ಅಲ್ಲದೆ, ಇದು ಮತ್ತೆ ಪುನರಾವರ್ತನೆಯಾಗದಂತೆ ಜಾಗ್ರತೆ ವಹಿಸುತ್ತೇನೆ. ಮುಖ್ಯವಾದ ಪ್ರಾಜೆಕ್ಟ್​ಗಳನ್ನು ನಾನು ಪೂರ್ಣಗೊಳಿಸಬೇಕಿದೆ, ಆದ್ದರಿಂದ ದಯವಿಟ್ಟು ನನ್ನ ಮೊಬೈಲನ್ನು ಹಿಂದಿರುಗಿಸಲು ವಿನಂತಿಸಿಕೊಳ್ಳುತ್ತೇನೆ.

ಇಂತಿ ದೇವಲಕ್ಷ್ಮೀ ರಾಜೀವ

ಇದನ್ನೂ ಓದಿ : Viral : ‘ಈ ಕಸವನ್ನು ಮತ್ತು ಆ ”ಆರೇಂಜ್” ಸಮವಸ್ತ್ರಧಾರಿಯನ್ನು ಎಡಿಟ್ ಮಾಡಬಹುದೆ?’

ಈ ಪತ್ರವನ್ನು ಹಿಡಿದು ನಿಂತಿರುವ ಈ ಫೋಟೋ ನೋಡಿದ ನೆಟ್ಟಿಗರು ದಂಗಾಗಿದ್ಧಾರೆ, ಬೇಸರಗೊಂಡಿದ್ದಾರೆ. ಇಷ್ಟು ಕಟ್ಟುನಿಟ್ಟಾಗಿವೆಯೇ ಹಾಸ್ಟೆಲ್​ಗಳು ಎಂದು ಒಬ್ಬರು ಕೇಳಿದ್ದಾರೆ. ಯಾಕೋ ಈ ವಿಷಯ ಇಷ್ಟಕ್ಕೇ ಮುಗಿಯದು ಎಂದೆನ್ನಿಸುತ್ತಿದೆ ಎಂದಿದ್ಧಾರೆ ಮತ್ತೊಬ್ಬರು. ಸ್ನಾನ ಮಾಡುವಾಗ ಸಂಗೀತ ಕೇಳಿದರೆ ತಪ್ಪೇ? ನಿಜಕ್ಕೂ ಇದು ಅಚ್ಚರಿ ಉಂಟುಮಾಡುತ್ತಿದೆ ಎಂದು ಇನ್ನೂ ಒಬ್ಬರು ಹೇಳಿದ್ದಾರೆ. ಅಂದಹಾಗೆ ನಾನು ಈ ಪೋಸ್ಟ್ ಅನ್ನು ತರಗತಿಯಲ್ಲಿ ಕುಳಿತೇ ಓದುತ್ತಿದ್ದೇನೆ ಎಂದಿದ್ದಾರೆ ಯಾರೋ ಒಬ್ಬ ವಿದ್ಯಾರ್ಥಿ.

ಇದನ್ನೂ ಓದಿ : Viral Video: ಮ್ಯಾಷಪ್​ ವಿಥ್ ಅಮ್ಮಾ; ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ ಸಿನಿಸಂಗಮ

ಯಾರಿಗೂ ಏನೂ ತೊಂದರೆ ಮಾಡದೆ ಸ್ನಾನ ಮಾಡುತ್ತ ತನ್ನಷ್ಟಕ್ಕೆ ತಾನು ಹಾಡು ಕೇಳುತ್ತ ಕ್ಷಣಹೊತ್ತು ಮೈಮರೆತ ವಿದ್ಯಾರ್ಥಿನಿಗೆ ಹಾಸ್ಟೆಲ್ ಸಿಬ್ಬಂದಿ ಇಂಥ ಶಿಕ್ಷೆ ವಿಧಿಸುವುದು ಎಷ್ಟು ಸರಿ? ಇದು ವಿದ್ಯಾರ್ಥಿನಿಗೆ ಮಾಡಿದ ಅವಮಾನವಲ್ಲವೆ?

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:59 pm, Sat, 10 June 23