Viral Video: ಕೊಂಬೆಯಲ್ಲಿ ಸಿಲುಕಿದ್ದ ಗೂಬೆಯನ್ನು ರಕ್ಷಿಸಿದವನಿಗೆ ನೆಟ್ಟಿಗರಿಂದ ಧನ್ಯವಾದ
Owl Rescue : ಹಕ್ಕಿಗೆ ರೆಕ್ಕೆಯೇ ಜೀವ. ಕೆಳಗೆ ನೀರು ಬೇರೆ. ಭಯದಿಂದ ಗೂಬೆ ಎಷ್ಟೊಂದು ಒದ್ದಾಡಿತೋ. ತನ್ನನ್ನು ಈಗ ಈ ಅಪಾಯದಿಂದ ಯಾರು ಹೇಗೆ ಕಾಪಾಡಬಹುದು ಎಂಬ ಅಂದಾಜೂ ಅದಕ್ಕಿರಲಿಲ್ಲವೇನೋ.
Animal Love: ದಯೆ, ಕರುಣೆ, ಸಹಾನುಭೂತಿ ಮನುಷ್ಯನಲ್ಲಿರಬೇಕಾದ ಅತ್ಯವಶ್ಯ ಗುಣಗಳು. ಈ ಗುಣಗಳನ್ನು ಹೊಂದಿದ ಮನುಷ್ಯ ಯಾರನ್ನೂ ನೋಯಿಸಲಾರ. ಕಷ್ಟದಲ್ಲಿರುವ ಯಾವ ಜೀವಿಯನ್ನೂ ಮೇಲೆತ್ತುವ ಹೃದಯವಂತ ಅವನಾಗಿರುತ್ತಾನೆ. ಇದೀಗ ವೈರಲ್ (Viral Video) ಆಗಿರುವ ಈ ವಿಡಿಯೋ ನೋಡಿ. ಹರಿವ ನೀರು, ದಡದಲ್ಲಿರುವ ಮರ, ಮರದ ಕೊಂಬೆಯಲ್ಲಿ ಸಿಕ್ಕಿಹಾಕಿಕೊಂಡು ಪ್ರಾಣಭಯದಲ್ಲಿ ಒದ್ದಾಡುತ್ತಿರುವ ಗೂಬೆ. ಅಂತೂ ಅಲ್ಲಿಗೆ ಬಂದ ಈ ಮನುಷ್ಯ ಅದನ್ನು ರಕ್ಷಿಸಿದ್ದಾನೆ. ನೆಟ್ಟಿಗರೆಲ್ಲ ಈತನನ್ನು ಪ್ರಶಂಸಿಸುತ್ತಿದ್ದಾರೆ.
Terrified owl was so thankful to the guy who saved his life pic.twitter.com/UecYjfnIgN
ಇದನ್ನೂ ಓದಿ— B&S (@_B___S) June 8, 2023
54 ಸೆಕೆಂಡುಗಳ ಈ ವಿಡಿಯೋ ಕ್ಲಿಪ್ ಗಮನಿಸಿದಿರಲ್ಲವೆ? ಇದರ ರೆಕ್ಕೆಗಳು ಕೊಂಬೆಗೆ ಸಿಕ್ಕಿಕೊಂಡುಬಿಟ್ಟಿವೆ. ಬಿಡಿಸಿಕೊಳ್ಳುವಲ್ಲಿ ವಿಫಲವಾಗಿದೆ. ಹಕ್ಕಿಗೆ ರೆಕ್ಕೆಯೇ ಜೀವ. ರೆಕ್ಕೆಯ ಗತಿಯೇ ಹೀಗಾದರೆ? ಕೆಳಗೆ ನೀರು ಬೇರೆ. ಭಯದಿಂದ ಗೂಬೆ ಎಷ್ಟೊಂದು ಒದ್ದಾಡಿತೋ. ತನ್ನನ್ನು ಈಗ ಈ ಅಪಾಯದಿಂದ ಯಾರು ಹೇಗೆ ಕಾಪಾಡಬಹುದು ಎಂಬ ಅಂದಾಜೂ ಅದಕ್ಕಿರಲಾರದು. ಅದೃಷ್ಟವಶಾತ್ ಈ ಮನುಷ್ಯ ಅಲ್ಲಿಗೆ ಬಂದಿದ್ದಾನೆ.
ಇದನ್ನೂ ಓದಿ : Viral Video: ”ಡ್ರೀಮಮ್ ವೇಕಪಮ್ ಕ್ರಿಟಿಕಲ್ ಕಂಡೀಷನಮ್” ಗಾಯಕಿ ಅಂಕಿತಾ ಕುಂಡು ಹೊಸ ರೀಲ್ಗೆ ನೆಟ್ಟಿಗರ ಬೇಸರ
ಗೂಬೆಯ ಜೀವ ಉಳಿಸಿದ ನಿಮಗೆ ಕೃತಜ್ಞತೆ ಎನ್ನುತ್ತಿದ್ದಾರೆ ನೆಟ್ಮಂದಿ. ನಿಮ್ಮ ತಾಳ್ಮೆ, ಉಪಾಯ ನಿಜಕ್ಕೂ ಶ್ಲಾಘನೀಯ. ಗೂಬೆ ಬಲೆಯೊಳಗೆ ಕುಳಿತುಕೊಳ್ಳುತ್ತಿದ್ದಂತೆ ಆ ದಾರವನ್ನು ಸುಡುವ ನಿಮ್ಮ ಜಾಣ್ಮೆ ಸ್ತುತ್ಯಾರ್ಹ ಎಂದಿದ್ದಾರೆ ಕೆಲವರು. ನೀವು ಅದನ್ನು ಸ್ಪರ್ಶಿಸಿ ಮುದ್ದಿಸುವ ಕ್ಷಣಗಳು ವರ್ಣಿಸಲಸಾಧ್ಯ, ಪರಸ್ಪರ ನಿಮ್ಮಿಬ್ಬರಿಗೂ ಇವ ಅಪೂರ್ವ ಗಳಿಗೆಗಳು ಎಂದು ಹಲವರು ಹೇಳಿದ್ದಾರೆ. ಈ ವಿಡಿಯೋ ಅನ್ನು ಈತನಕ ಸುಮಾರು 2.7 ಮಿಲಿಯನ್ ಜನರು ನೋಡಿದ್ದಾರೆ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ