Viral Video: ‘ಡ್ರೀಮಮ್ ವೇಕಪಮ್ ಕ್ರಿಟಿಕಲ್ ಕಂಡೀಷನಮ್’ ಗಾಯಕಿ ಅಂಕಿತಾ ಕುಂಡು ಹೊಸ ರೀಲ್ಗೆ ನೆಟ್ಟಿಗರ ಬೇಸರ
Ankita Kundu : ಗಾಯಕಿ ಎಂದರೆ ಫ್ರೇಮಿನಲ್ಲಿರುವ ಸರಸ್ವತಿಯಂತೆಯೇ ನಿತ್ಯ ಕಂಗೊಳಿಸುತ್ತಿರಬೇಕೆಂಬ ಭ್ರಮೆ ಜನರಿಗೇಕೆ? ಬಂಗಾಳಿ ಹುಡುಗಿ ಕರ್ನಾಟಕದ ಮಾನ ಹರಾಜು ಹಾಕುವುದು ಬೇಡ ಎಂದರೆ ಏನರ್ಥ? ಸುಮ್ಮನೆ ಕಣ್ಣುಮುಚ್ಚಿ ಹಾಡು ಕೇಳಿ.
Dance : ಕನ್ನಡ ಝೀ ವಾಹಿನಿಯ ಸಾರೆಗಮಪ ಲಿಟಲ್ ಚಾಂಪ್ಸ್ ಮೂಲಕ ಸಂಗೀತಾಸಕ್ತರಿಗೆಲ್ಲ ಸುಪರಿಚಿತರಾದ ಅಂಕಿತಾ ಕುಂಡು (Ankita Kundu) ಪ್ರತಿಭಾನ್ವಿತ ಗಾಯಕಿ. ಕನ್ನಡ ಸಿನೆಮಾಗೀತೆಗಳಿಂದ ಕರ್ನಾಟಕದ ಮನಗೆದ್ದಾಕೆ. ಬಂಗಾಳಿ ಮೂಲದ ಈಕೆ ಸದ್ಯ ಬೆಂಗಳೂರಿನ ಪಿಇಎಸ್ ಯುನಿವರ್ಸಿಟಿಯಲ್ಲಿ ಪ್ರದರ್ಶನ ಕಲೆಗಳಲ್ಲಿ ಪದವಿ ಪೂರೈಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿವಿಧ ಅಭಿವ್ಯಕ್ತಿಗಳ ಮೂಲಕ ತಮ್ಮನ್ನು ತಾವು ಅನಾವರಣಗೊಳಿಸಿಕೊಳ್ಳುತ್ತಾ ಚಾಲ್ತಿಯಲ್ಲಿದ್ದಾರೆ. ಇದೀಗ ಇವರು ಬೆಂಗಳೂರಿನ ರಸ್ತೆಯೊಂದರಲ್ಲಿ ಹಾಡಿಗೆ ಹೆಜ್ಜೆ ಹಾಕಿದ್ದೇ ದೊಡ್ಡ ಪ್ರಮಾದವೆಂಬಂತೆ ಜಾಲತಾಣಿಗರು ಟೀಕಿಸುತ್ತಿದ್ದಾರೆ. 2012 ರಲ್ಲಿ ತೆರೆಕಂಡ ರಾಣಿ ಮುಖರ್ಜಿ ಮತ್ತು ಪೃಥ್ವಿರಾಜ್ ಸುಕುಮಾರನ್ ಅಭಿನಯದ Aiyyo ಸಿನೆಮಾದ ಹಾಡು ಇದಾಗಿದೆ.
View this post on Instagram ಇದನ್ನೂ ಓದಿ
21 ವರ್ಷದ ಅಂಕಿತಾ ಸದಾ ಕಲೆಯನ್ನೇ ಧ್ಯಾನಿಸುತ್ತಿರುತ್ತಾರೆ. ತನ್ನೊಳಗಿನ ಸೃಜನಶೀಲತೆಯ ಒರತೆಗೆ ಕಲೆಯ ಯಾವ ಪ್ರಕಾರ ಸೂಕ್ತ ಎಂಬ ಹುಡುಕಾಟದಲ್ಲಿರುವಂಥ ವ್ಯಕ್ತಿತ್ವ ಇವರದು. ಜೊತೆಗೆ ನಿತ್ಯಬದುಕಿನ ಏಕತಾನತೆಯನ್ನು ಮುರಿಯಲು ಇಂಥ ರೀಲ್ಗಳು ಇನ್ಸ್ಟಂಟ್ ಎನರ್ಜಿಯಂತೆ ಅವರಿಗೆ ಒತ್ತಾಸೆ ನೀಡಿರಬಹುದು. ಆದರೆ ಉಳಿದಂತೆ ಅವರೊಳಗಿನ ಗಾಯಕಿ ತಾಲೀಮಿನಲ್ಲಿ ತನ್ಮಯರಾಗಿಯೇ ಇರುತ್ತಾರೆ. ಇಂಥ ರೀಲ್ಗಳನ್ನು ಅದೆಷ್ಟು ಜನ ಗಮನಿಸಿದ್ದಾರೆ?
View this post on Instagram
ಗಾಯಕಿಯಾಗಿ ನೀವು ಅಸಭ್ಯವಾಗಿ ಡ್ಯಾನ್ಸ್ ಮಾಡುವುದು ಸರಿಯಲ್ಲ. ಬಂಗಾಳಿ ಹುಡುಗಿ ಕರ್ನಾಟಕದ ಮಾನ ಹರಾಜು ಹಾಕುವುದು ಬೇಡ. ತಾಯೀ, ನಿನಗೂ ಹಿಡೀತಾ ಕೊಳ್ಳೀ ದೆವ್ವ? ಒಳ್ಳೆಯ ದೇವರ ಹತ್ರ ಹೋಗಿ ತಾಯತ ಕಟ್ಟಿಸಿಕೋ. ನೀನು ಮುಂದೆ ಒಂದು ದಿನ ಹೆಸರಾಂತ ಗಾಯಕಿ ಆಗುತ್ತೀಯಾ ಎಂದುಕೊಂಡೆ. ಆದರೆ ಬುದ್ದಿಜೀವಿಯಾಗುತ್ತಿದ್ದೀಯಾ ಎಂದು ಅನೇಕರು ತಕರಾರೆತ್ತಿದ್ದಾರೆ.
ಈ ಹಾಡನ್ನೊಮ್ಮೆ ಕೇಳಿ ನಿಮ್ಮ ಕಣ್ಣಮುಂದೆ ಯಾರು ಸುಳಿಯುತ್ತಾರೆ ಹೇಳಿ.
View this post on Instagram
ಆದರೂ ಕೆಲವರು ಅಂಕಿತಾಗೆ ಬೆಂಬಲ ವ್ಯಕ್ತಪಡಿಸುತ್ತಿರುತ್ತಾರೆ ಎನ್ನುವುದೇ ಸಮಾಧಾನ; ಬಟ್ಟೆಬರೆಯಿಂದ ನಮ್ಮ ಚಾರಿತ್ರ್ಯವನ್ನು ನಿರ್ಧರಿಸಲಾಗದು ನಾವು ಮಾಡುವ ಒಳ್ಳೆಯ ಕೆಲಸಗಳಿಂದ ನಾವು ಮನುಷ್ಯರಾಗುವುದು. ಆಕೆಯ ಬದುಕನ್ನು ಆಕೆ ಬದುಕುತ್ತಿದ್ದಾಳೆ. ಯಾರಿಗೂ ಆಕೆ ಕೆಟ್ಟದ್ದು ಮಾಡಿಲ್ಲದಿರುವಾಗ ಯಾರಿಗೂ ಹೀಗೆ ಪ್ರತಿಕ್ರಿಯಿಸಲು ಹಕ್ಕಿಲ್ಲ. ಇವರು ಪ್ರತಿಭೆಯ ಗಣಿ, ಇವರ ಆಸಕ್ತಿಗಳನ್ನು ಸಾಧ್ಯವಾದರೆ ಪೋಷಿಸಿ…
ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ ಎಂಬಂತೆ ಹರಿಯುತ್ತಾರೆ ಅಂಕಿತಾ. ಇವರ ಅಭಿವ್ಯಕ್ತಿಯನ್ನು ಸಾಣೆ ಹಿಡಿಯುವ ಅವಕಾಶಗಳು ಇವರಿಗೆ ಸಿಗಲಿ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 4:09 pm, Fri, 9 June 23