Viral Video: ಮೆಕ್ಡೊನಾಲ್ಡ್ಸ್; ಡೇಟಿಂಗ್, ಪ್ರೇಮದ ಬೆಲೆ ಇಲ್ಲಿ ರೂ. 179?; ನೆಟ್ಟಿಗರ ಆಕ್ರೋಶ
McDonald's : ದುಡಿಯುವ ಹೆಣ್ಣುಮಕ್ಕಳೆಂದರೆ ಇಷ್ಟೊಂದು ಸದರವೆ? ಇದು ಹೆಣ್ಣುಮಕ್ಕಳ ಮೇಲಿನ ಲೈಂಗಿಕ ಕಿರುಕುಳವನ್ನು ಪ್ರೋತ್ಸಾಹಿಸುತ್ತದೆ, ಕೆಟ್ಟ ಸಂದೇಶವಿರುವ ಪ್ರಚಾರವನ್ನು ಅನುಮೋದಿಸಿದವರು ಯಾರು? ಕಟುವಾಗಿ ಟೀಕೆಗೊಳಗಾಗುತ್ತಿದೆ ಈ ಹೊಸ ಜಾಹೀರಾತು.
Woman : ತನ್ನ ಆರ್ಡರ್ ಪಡೆದುಕೊಂಡ ಯುವಕ ಮೆಕ್‌ಡೊನಾಲ್ಡ್‌ನ (McDonald’s) ಮಹಿಳಾ ಉದ್ಯೋಗಿಗೆ ಧನ್ಯವಾದ ಹೇಳುತ್ತಾನೆ. ಆಕೆ ಪ್ರತಿಯಾಗಿ ಮುಗುಳ್ನಗೆಯಿಂದ ಉತ್ತರಿಸುತ್ತಾಳೆ. ಹುಡುಗನಿಗೆ ಆ ಹುಡುಗಿಯ ಬಗ್ಗೆ ಮೊದಲ ನೋಟಕ್ಕೇ ಆಕರ್ಷಣೆಯಾಗಿರುವುದು ಸ್ಪಷ್ಟ. ಅದನ್ನು ಗಮನಿಸಿದ ಹುಡುಗಿಯೂ ಅಂಥದೇ ಭಾವನೆಯಿಂದಲೋ ಅಥವಾ ವೃತ್ತಿಪರ ಸೌಜನ್ಯದಿಂದಲೋ ಮುಗುಳ್ನಗುತ್ತಾಳೆ. ಇಷ್ಟಕ್ಕೇ ಅದು ಕೊನೆಗೊಂಡಿದ್ದರೆ ಅಂಥಾ ತೊಂದರೆಯೇನಿರಲಿಲ್ಲ. ಆದರೆ ಆ ಹುಡುಗ ಮರುದಿನ ಮತ್ತೆ ಬರುತ್ತಾನೆ, ಅಷ್ಟೇ ಅಲ್ಲದೇ ಇನ್ನೊಂದು ಕೌಂಟರ್ ಖಾಲಿ ಇದ್ದರೂ ಸರದಿಯಲ್ಲಿ ನಿಂತು ಆ ಹುಡುಗಿಯನ್ನು ಭೆಟ್ಟಿಯಾಗಿ ಮಾತಾಡಿಸುತ್ತಾನೆ. ಇದರ ಮುನ್ನೆಲೆಯಲ್ಲಿ, “ಡೇಟ್… ಒಂದು ಬಗೆಯಲ್ಲಿ…” ಎಂಬ ಕ್ಯಾಪ್ಶನ್ ಮತ್ತು “ಕೇವಲ ರೂ. 179ಕ್ಕೆ ಬಹಳಷ್ಟು ಸಂಗತಿ ಸಂಭವಿಸಬಹುದು..” ಎಂಬ ಅಶರೀರವಾಣಿ!
What is this. What kind of people approved this campaign ?? pic.twitter.com/7ZaoitYlDx
ಇದನ್ನೂ ಓದಿ— Chirag Barjatya (@chiragbarjatyaa) June 7, 2023
ಯಾರಿಗೆ ಎಲ್ಲಿಯಾದರೂ ಯಾರ ಬಗೆಗೂ ಪ್ರೇಮಾಂಕುರವಾಗಬಹುದು. ಅದರಲ್ಲೇನೂ ತಪ್ಪಿಲ್ಲ. ಆದರೆ ಈ ಜಾಹೀರಾತು ಕೊಡುತ್ತಿರುವ ಸಂದೇಶವೇನು? ಮೆಕ್‌ಡೊನಾಲ್ಡ್‌ಗೆ ಬಂದರೆ ಸುಲಭವಾಗಿ ಡೇಟಿಂಗ್ ಮಾಡಲು ಹುಡುಗಿ ಸಿಗಬಹುದು ಎಂದೇ? ಪ್ರೇಮದ ಬೆಲೆ ಕೇವಲ ರೂ. 179 ಎಂದೆ? ದುಡಿಯುವ ಹೆಣ್ಣುಮಕ್ಕಳೆಂದರೆ ಇಷ್ಟೊಂದು ಸಸಾರವೆಂದೇ? ಹೆಣ್ಣುಮಕ್ಕಳು ಅದರಲ್ಲೂ ಹೊರಗಡೆ ಹೋಗಿ ದುಡಿಯುವವರು ದಿನೇದಿನೇ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಈ ದೇಶದಲ್ಲಿ ಈ ರೀತಿಯ ಜಾಹೀರಾತು ಏನು ಪರಿಣಾಮ ಬೀರಬಹುದು ಎಂಬ ಕನಿಷ್ಟ ಪ್ರಜ್ಞೆಯಿಲ್ಲದವರಿಗಷ್ಟೇ ಇದು ರುಚಿಸಬಹುದು.
ಇದನ್ನೂ ಓದಿ : Viral: “ಕಚರಾ”; ಮರುಬಳಕೆ; ಝೊಮ್ಯಾಟೋದ ಕೀಳು ಅಭಿರುಚಿಯ ಜಾತೀವಾದಿ ಜಾಹೀರಾತು
ಒಮ್ಮಿಂದೊಮ್ಮೆಲೇ ಸೂಕ್ಶ್ಮತೆಯನ್ನು ಕಳೆದುಕೊಳ್ಳುತ್ತಿದ್ದೇವೋ? ನಮ್ಮ ಸುತ್ತಮುತ್ತಲೂ ನಡೆಯುತ್ತಿರುವುದರ ಗ್ರಹಿಕೆಯೇ ಇಲ್ಲದಷ್ಟು ದಪ್ಪ ಚರ್ಮದವರಾಗಿದ್ದೇವೋ? ಯಾಕೆ ಹೀಗೆಲ್ಲ? ಈ ವಿಷಯವಾಗಿ ನಿಮ್ಮ ಅಭಿಪ್ರಾಯ ತಿಳಿಸಿ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 3:18 pm, Thu, 8 June 23