ಬೆಂಗಳೂರಿನ ಮೆಕ್​​ಡೊನಾಲ್ಡ್ಸ್​​ನಿಂದ ಹತ್ತು ಸೆಕೆಂಡುಗಳಲ್ಲಿ ಫುಡ್​ ಡೆಲಿವರಿ ಪಡೆದ ಕೆನಡಾದ ವ್ಯಕ್ತಿ

Food Delivery Agent : ಕೆನಡಾದ ಈ ವ್ಯಕ್ತಿ ಬೆಂಗಳೂರಿನಲ್ಲಿ ವಾಸಿಸುತ್ತಾರೆ. ತಡರಾತ್ರಿ ಮೆಕ್​ಡೊನಾಲ್ಡ್​ನಿಂದ ಏನಾದರೂ ತಿನ್ನಬೇಕು ಎನ್ನಿಸಿದೆ. ಅಲ್ಲಿ ಹೋದಾಗ ಮಳಿಗೆ ಮುಚ್ಚಿದೆ. ಆಗ ಇವರು ಮಾಡಿದ ಉಪಾಯವೇನು? ವಿಡಿಯೋ ನೋಡಿ.

ಬೆಂಗಳೂರಿನ ಮೆಕ್​​ಡೊನಾಲ್ಡ್ಸ್​​ನಿಂದ ಹತ್ತು ಸೆಕೆಂಡುಗಳಲ್ಲಿ ಫುಡ್​ ಡೆಲಿವರಿ ಪಡೆದ ಕೆನಡಾದ ವ್ಯಕ್ತಿ
ಸ್ವಿಗ್ಗಿ ಡೆಲಿವರಿ ಏಜೆಂಟ್​ ಸಂಜಯ್
Follow us
| Updated By: ಶ್ರೀದೇವಿ ಕಳಸದ

Updated on:Feb 09, 2023 | 5:10 PM

Viral Video : ಹೋಟೆಲ್ ಬೇಡವೆಂದರೆ ಫುಡ್​ ಆರ್ಡರ್ ಮಾಡುತ್ತೀರಿ. ಕೆಲವೊಮ್ಮೆ ನೀವೇ ಹೋಟೆಲ್​ಗೆ ಹೋಗಿ ಊಟ ಮಾಡುತ್ತೀರಿ. ಆದರೆ ರಾತ್ರಿ ಬಾಗಿಲು ಮುಚ್ಚುವ ಸಮಯದಲ್ಲಿ ನಿಮಗಿಷ್ಟವಾದ ಊಟ ತಿಂಡಿ ಬೇಕೆಂದರೆ ಏನು ಮಾಡುತ್ತೀರಿ? ಆರ್ಡರ್ ಮಾಡಿದರೂ ಅದು ನಿಮ್ಮನ್ನು ತಲುಪಲಾರದು ಎಂಬಂಥ ಸ್ಥಿತಿ ಇದ್ದಾಗ ಏನು ಮಾಡುತ್ತೀರಿ? ಕೆನಡಾದ ಈ ವ್ಯಕ್ತಿ ಹೀಗೊಂದು ಉಪಾಯ ಕಂಡುಕೊಂಡಿದ್ದಾರೆ. ಆದರೆ ಅದು ಯಾವಾಗಲೂ ಎಲ್ಲರಿಗೂ ವರ್ಕೌಟ್ ಆಗುತ್ತದೆ ಎಂದು ಹೇಳಲಾಗದು. ಇದೊಂಥರಾ ಅದೃಷ್ಟ ಎನ್ನಬಹುದು. ವೈರಲ್ ಆದ ಈ ವಿಡಿಯೋ ನೋಡಿ ತಿಳಿಯುತ್ತದೆ.

Drove to Koramangala for midnight McDonald’s, they said they were closed, but the pick-up window was full of delivery guys. What to do?

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಬೆಂಗಳೂರಿನ ಕೋರಮಂಗಲದಲ್ಲಿ ವಾಸಿಸುತ್ತಿರುವ ಕೆನಡಾದ ಪ್ರಜೆ ಕ್ಯಾಲೆಬ್​ ಫ್ರೈಸೆನ್ ಎಂಬುವವರಿಗೆ ತಡರಾತ್ರಿ ಹಸಿವಾಗಿದೆ. ಮೆಕ್​ಡೊನಾಲ್ಡ್ಸ್​ಗೆ (McDonald’s) ಹೋಗಿ ಏನಾದರೂ ಏನಾದರೂ ತಿನ್ನಬೇಕು ಎಂಬ ಆಸೆಯಾಗಿದೆ. ಅಲ್ಲಿ ಹೋದಾಗ ಮೆಕ್​ಡೊನಾಲ್ಡ್​ನ ಮಳಿಗೆ ಬಾಗಿಲು ಹಾಕಿತ್ತು. ಆದರೆ ಅಲ್ಲಿ ಡೆಲಿವರಿ ಏಜೆಂಟರುಗಳು ಜಮಾಯಿಸಿದ್ದನ್ನು ನೋಡಿದ ಕ್ಯಾಲೆಬ್​ ತಕ್ಷಣವೇ ಸ್ವಿಗ್ಗಿ ಆ್ಯಪ್​ ಮೂಲಕ ಆರ್ಡರ್​ ಮಾಡತೊಡಗಿದರು. ಆಹಾರ ತಲುಪಿಸಬೇಕಾದ ವಿಳಾಸದ ಜಾಗದಲ್ಲಿ ಮೆಕ್​ಡೊನಾಲ್ಡ್​ನ ವಿಳಾಸವನ್ನೇ ನೀಡಿದರು. ನಂತರ ಡೆಲಿವರಿ ಏಜೆಂಟ್​ ಎದುರಿಗೆ ಆಹಾರದ ಪೊಟ್ಟಣದೊಂದಿಗೆ ಅವರೆದುರು ಪ್ರತ್ಯಕ್ಷರಾದರು.

ಇದನ್ನೂ ಓದಿ : ವರ್ಷದ ಅಪ್ಪ ಪ್ರಶಸ್ತಿ ಈ ಅಪ್ಪನಿಗೇ! ವೈರಲ್ ಆದ ವಿಡಿಯೋ

ಅಂತೂ ಹತ್ತು ಸಕೆಂಡುಗಳೊಳಗೆ ಡೆಲಿವರಿ ಏಜೆಂಟ್​ ಆಹಾರದ ಪೊಟ್ಟಣವನ್ನು ಅಲ್ಲಿಯೇ ನಿಂತಿದ್ದ ಕ್ಯಾಬೆಲ್​ ಅವರಿಗೆ ತಲುಪಿಸಿದರು. ಇದನ್ನು ವಿಡಿಯೋ ಮಾಡಿಕೊಂಡ ಕ್ಯಾಬೆಲ್​ ಟ್ವಿಟರ್​ಗೆ ಅಪ್​ಲೋಡ್ ಮಾಡಿದ್ದಾರೆ. ಡೆಲಿವರಿ ಏಜೆಂಟ್​ ಸಂಜಯ್​ ಮಾತನಾಡಿದ ವಿಡಿಯೋ ತುಣು ಇದರಲ್ಲಿದೆ. ‘ಈ ಮೂರು ವರ್ಷದಲ್ಲಿ ನಾನು ಅತ್ಯಂತ ಕಡಿಮೆ ಅವಧಿಯಲ್ಲಿ ಆರ್ಡರ್ ತಲುಪಿಸಿದ್ದು ಇದೇ ಮೊದಲು ಎಂದಿದ್ದಾರೆ’ ಅವರು.

ಇದನ್ನೂ ಓದಿ : ಬುರ್ಖಾ ಧರಿಸಿ ಸ್ವಿಗ್ಗಿ ಬ್ಯಾಗ್​ನೊಂದಿಗೆ ಹೊರಟಿರುವ ಈ ಮಹಿಳೆಯ ಕಥೆ ಬೇರೆಯೇ ಇದೆ

ಈತನಕ ಈ ವಿಡಿಯೋ ಅನ್ನು 38,000 ಜನರು ನೋಡಿದ್ದಾರೆ. ಸುಮಾರು 465ಜನರು ಇಷ್ಟಪಟ್ಟಿದ್ದಾರೆ. ಅನೇಕರು ಎಮೊಟಿಕಾನ್​ಗಳ ಮೂಲಕ ಪ್ರತಿಕ್ರಿಯಿಸಿ ಇದೆಲ್ಲವೂ ಬೆಂಗಳೂರಿನಲ್ಲಿ ಮಾತ್ರ ನಡೆಯುತ್ತದೆ ಎಂದಿದ್ಧಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:47 pm, Thu, 9 February 23