ಬುರ್ಖಾ ಧರಿಸಿ ಸ್ವಿಗ್ಗಿ ಬ್ಯಾಗ್ನೊಂದಿಗೆ ಹೊರಟಿರುವ ಈ ಮಹಿಳೆಯ ಕಥೆ ಬೇರೆಯೇ ಇದೆ
Swiggy : ಈಕೆ ರಿಜ್ವಾನಾ. ಗಂಡ ಬಿಟ್ಟು ಹೋದ ನಂತರ ಲಕ್ನೋದ ಸಿಂಗಲ್ ರೂಮಿನಲ್ಲಿ ನಾಲ್ಕು ಮಕ್ಕಳೊಂದಿಗೆ ವಾಸವಾಗಿದ್ದಾಳೆ. ಈಕೆ ಸ್ವಿಗ್ಗಿ ಡೆಲಿವರಿ ಬ್ಯಾಗ್ ಹಾಕಿಕೊಂಡಿದ್ದರೂ ಈ ಕಂಪೆನಿಯ ಉದ್ಯೋಗಿಯಲ್ಲ. ಮತ್ತೆ?
Viral News : ನಿಮ್ಮ ಮನೆ ಬಾಗಿಲಿಗೆ ಬರುವ ಫುಡ್ ಡೆಲಿವರಿ ಏಜೆಂಟರುಗಳಲ್ಲಿ ಆಗಾಗ ಹೆಣ್ಣುಮಕ್ಕಳೂ ಬರುವುದುಂಟು. ಆಗ ಒಂದು ಕ್ಷಣ ಅವರನ್ನು ಮತ್ತೊಮ್ಮೆ ಹೊರಳಿ ನೋಡುತ್ತೀರಿ. ಮರುಕ್ಷಣವೇ ಅವರ ಬಗ್ಗೆ ಹೆಮ್ಮೆಯೂ ಉಂಟಾಗುತ್ತದೆ. ಕೊರೊನಾ ಅವಧಿಯಲ್ಲಿ ಹೆಣ್ಣುಮಕ್ಕಳು ಈ ಕ್ಷೇತ್ರದಲ್ಲಿ ತೊಡಗಿಕೊಳ್ಳುವ ಪ್ರಮಾಣ ಹೆಚ್ಚುತ್ತಾ ಹೋಯಿತು. ಆದರೆ ಇದೀಗ ಈ ಬುರ್ಖಾಧಾರಿ ಮಹಿಳೆ ಸ್ವಿಗ್ಗಿ ಫುಡ್ ಡೆಲಿವರಿ ಬ್ಯಾಗ್ ಹಾಕಿಕೊಂಡು ಹೊರಟಿರುವ ಫೋಟೋ ಮಾತ್ರ ನೆಟ್ಟಿಗರನ್ನು ಕುತೂಹಲಕ್ಕೆ ಈಡುಮಾಡುವಂತಿದೆ.
Someone clicked a picture of a burqa-clad woman, with a Swiggy backpack, walking down a road in Lucknow and posted it on social media.#Swiggy #Lucknow #burqa pic.twitter.com/3D4NzVQDXx
ಇದನ್ನೂ ಓದಿ— Ashish Rajput (@twittofalmighty) January 17, 2023
ಪರ್ವಾಗಿಲ್ಲ, ಬುರ್ಖಾ ಹಾಕಿಕೊಂಡಾದರೂ ಈ ಕ್ಷೇತ್ರದಲ್ಲಿ ಮಹಿಳೆಯರು ಹೀಗೆ ದಿಟ್ಟ ಹೆಜ್ಜೆ ಇಡುತ್ತಿದ್ದಾರೆ ಎಂದು ನೀವು ಅಂದುಕೊಂಡಿರುತ್ತೀರಿ. ಈ ಫೋಟೋ ನೋಡಿದ ಯಾರಿಗೂ ಹೀಗೆ ಅನ್ನಿಸುವುದು ಸಹಜ. ಆದರೆ ಈಕೆ ಸ್ವಿಗ್ಗಿ ಡೆಲಿವರಿ ಏಜೆಂಟ್ ಅಲ್ಲ ಮತ್ತು ಸ್ವಿಗ್ಗಿ ಕಂಪೆನಿಯ ಉದ್ಯೋಗಿಯೂ ಅಲ್ಲ; ಹಾಗಿದ್ದರೆ ಸ್ವಿಗ್ಗಿ ಬ್ಯಾಗ್ ಯಾಕೆ ಹಾಕಿಕೊಂಡಿದ್ದಾಳೆ?
ಇದನ್ನೂ ಓದಿ : ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಇದು ಶವದ ಪಾದವೇ?
ಈಕೆಯ ಹೆಸರು ರಿಜ್ವಾನಾ. ಈಕೆ ಸಾಮಾನ್ಯ ಗೃಹಿಣಿ. ಲಕ್ನೋದ ಜನತಾ ನಗರಿ ಕಾಲೊನಿಯ ಸಿಂಗಲ್ ರೂಮಿನಲ್ಲಿ ಮಕ್ಕಳೊಂದಿಗೆ ವಾಸವಾಗಿದ್ದಾಳೆ. ಈಕೆ ಹೊತ್ತುಕೊಂಡಿರುವ ಸ್ವಿಗ್ಗಿ ಬ್ರ್ಯಾಂಡಿನ ಬ್ಯಾಗಿನೊಳಗೆ ಹೋಟೆಲ್ಗಳಲ್ಲಿ ಫುಡ್ ಪಾರ್ಸೆಲ್ ಮಾಡಿ ಕೊಡುವ ಖಾಲೀ ಪ್ಲಾಸ್ಟಿಕ್ ಡಬ್ಬಿಗಳನ್ನು ಇಟ್ಟುಕೊಂಡಿದ್ಧಾಳೆ. ಏಕೆಂದರೆ, ಸ್ಥಳೀಯ ಹೋಟೆಲ್ಗಳಿಗೆ, ಮನೆಗಳಿಗೆ ಖಾಲೀ ಪಾರ್ಸೆಲ್ ಡಬ್ಬಿಗಳನ್ನು ಮಾರುವುದೇ ಈಕೆಯ ನಿತ್ಯದ ಕೆಲಸ.
ಇದನ್ನೂ ಓದಿ : ಟಾಮಿ ವೆಡ್ಸ್ ಜೈಲಿ; ಉತ್ತರ ಪ್ರದೇಶದಲ್ಲಿ ನಾಯಿಗಳ ಮದುವೆ; ವಿಡಿಯೋ ವೈರಲ್
‘ನಿತ್ಯವೂ ಬಳಸುವ ಬ್ಯಾಗ್ ಹರಿದಿದೆ. ಹಾಗಾಗಿ ಡಬ್ಬಿಗಳನ್ನು ಸಾಗಿಸಲು ಈ ಬ್ಯಾಗ್ ಅನುಕೂಲಕರವಾಗಿದೆ ಎಂದು ಐವತ್ತು ರೂಪಾಯಿ ಕೊಟ್ಟು ಖರೀದಿಸಿದೆ’ ಎಂದಿದ್ದಾಳೆ. ಈಕೆಯ ಗಂಡ ರಿಕ್ಷಾ ಡ್ರೈವರ್ ಆಗಿದ್ದ. ಆದರೆ ಮೂರು ವರ್ಷದ ಹಿಂದೆ ಈಕೆಯನ್ನು ನಾಲ್ಕು ಮಕ್ಕಳನ್ನು ಬಿಟ್ಟು ಹೋಗಿದ್ದಾನೆ. ಎರಡು ವರ್ಷಗಳ ಹಿಂದೆ ಹಿರಿಯ ಮಗಳನ್ನು ಮದುವೆ ಮಾಡಿ ಕೊಟ್ಟಿದ್ದಾಳೆ. ಇತ್ತೀಚೆಗೆ ಕಿರಿಯ ಮಗಳನ್ನು ಶಾಲೆಗೆ ಸೇರಿಸಿದ್ದಾಳೆ. ಮುಂದಿನ ವರ್ಷ ಮಗನನ್ನೂ ಶಾಲೆಗೆ ಸೇರಿಸುವ ಇರಾದೆ ಇದೆ.
ಇದನ್ನೂ ಓದಿ : 1971ರಲ್ಲಿ 2 ಮಸಾಲೆ ದೋಸೆ, 2 ಕಾಫಿಗೆ 2 ರೂಪಾಯಿ! ದೆಹಲಿಯ ರೆಸ್ಟೋರೆಂಟ್ ಬಿಲ್ ವೈರಲ್
ದಿನವೂ ಆರರಿಂದ ಏಳು ಕೀ.ಮೀ. ನಡೆದುಕೊಂಡೇ ಓಡಾಡುತ್ತಾಳೆ ರಿಜ್ವಾನಾ. ಹೆಚ್ಚಿಗೆ ಹಣ ಗಳಿಸಲೆಂದು ಈ ಕೆಲಸದೊಂದಿಗೆ ಮನೆಗೆಲಸವನ್ನೂ ಮಾಡುತ್ತಾಳೆ. ದಿನದ ಕೊನೆಯಲ್ಲಿ ಒಟ್ಟು 60ರಿಂದ 70 ರೂಪಾಯಿ ಉಳಿಸುತ್ತಾಳೆ. ಅಂತೂ ಸ್ವಿಗ್ಗಿ ಎನ್ನುವ ಬ್ರ್ಯಾಂಡ್ ನೇಮ್ ಈಕೆಯ ನಿಜಜೀವನದ ಕಥೆಯನ್ನು ಹೀಗೆ ಬಿಚ್ಚಿಟ್ಟಿತು. ಯಾವ ಬ್ರ್ಯಾಂಡ್ ಇರಲಿ ಬಿಡಲಿ ಈಕೆ ಹೀಗೆ ಮೈಬಗ್ಗಿಸಿ ದುಡಿದರೆ ಮಾತ್ರ ತನ್ನದು ಮತ್ತು ಕುಟುಂಬದ ಹೊಟ್ಟೆ ತುಂಬುವುದಂತೂ ಸತ್ಯ.
ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ ಓದಲು ಕ್ಲಿಕ್ ಮಾಡಿ
Published On - 4:20 pm, Tue, 17 January 23