1971ರಲ್ಲಿ 2 ಮಸಾಲೆ ದೋಸೆ, 2 ಕಾಫಿಗೆ 2 ರೂಪಾಯಿ! ದೆಹಲಿಯ ರೆಸ್ಟೋರೆಂಟ್ ಬಿಲ್ ವೈರಲ್

Delhi : ಇದು ದೆಹಲಿಯ ಮೋತಿ ಮಹಲ್​ ರೆಸ್ಟೋರೆಂಟ್​ ಬಿಲ್​. ಇಂದು ದೆಹಲಿಯಲ್ಲಿ ಒಂದು ಸಾದಾ ದೋಸೆಗೆ ರೂ. 92 ಬೇಕು. ಅಂದರೆ, ಐವತ್ತು ವರ್ಷಗಳಲ್ಲಿ ನಮ್ಮ ಕೊಳ್ಳುವ ಶಕ್ತಿ ಹೆಚ್ಚಾಗಿದೆಯಂತಲ್ಲವೆ!?

1971ರಲ್ಲಿ 2 ಮಸಾಲೆ ದೋಸೆ, 2 ಕಾಫಿಗೆ 2 ರೂಪಾಯಿ! ದೆಹಲಿಯ ರೆಸ್ಟೋರೆಂಟ್ ಬಿಲ್ ವೈರಲ್
1971ರ ಮೋತಿ ಮಹಲ್​ ರೆಸ್ಟೋರೆಂಟ್​ನ ಬಿಲ್
Follow us
| Updated By: ಶ್ರೀದೇವಿ ಕಳಸದ

Updated on:Jan 17, 2023 | 1:00 PM

Viral : ಇಂದು ಸಾಧಾರಣ ಹೋಟೆಲ್​ನಲ್ಲಿ ಒಂದು ಮಸಾಲೆ ದೋಸೆ ತಿನ್ನಬೇಕೆಂದರೆ ರೂ. 60 ಖರ್ಚಾಗುತ್ತದೆ. ಆದರೆ 1971ರಲ್ಲಿ? ಇದೀಗ ವೈರಲ್ ಆಗುತ್ತಿರುವ ದೆಹಲಿಯ ಮೋತಿ ಮಹಲ್​ ರೆಸ್ಟೋರೆಂಟ್​ನ ಬಿಲ್ ವಿವರ ನೋಡಿ. 51 ವರ್ಷಗಳ ಹಿಂದೆ ಎರಡು ಮಸಾಲೆ ದೋಸೆ ಮತ್ತು ಎರಡು ಕಾಫಿಗೆ ಕೇವಲ ರೂ. 2.16 ನೆಟ್ಟಿಗರಂತೂ ಈ ಬಿಲ್​ ನೋಡಿ, ಅದೇ ಕಾಲ ವಾಪಸ್ ಮರಳಬಾರದೆ ಎಂದು ಕೇಳಿಕೊಳ್ಳುತ್ತಿದ್ದಾರೆ.

ಹಲವಾರು ವರ್ಷಗಳಿಂದ ದಕ್ಷಿಣ ಮತ್ತು ಉತ್ತರ ಭಾರತದ ತಿಂಡಿತಿನಿಸುಗಳಿಗೆ ಹೆಸರುವಾಸಿಯಾದ ಈ ರೆಸ್ಟೋರೆಂಟ್​ ರಾಜಧಾನಿಯ ತಿಂಡಿಪ್ರಿಯರ ಸ್ವರ್ಗ. ಇಲ್ಲಿ ಕೈಗೆಟಕುವ ದರದಲ್ಲಿ ರುಚಿಯಾದ ತಿಂಡಿಗಳು ಲಭ್ಯ. ಇದೀಗ ವೈರಲ್ ಆಗಿರುವ ಈ ಬಿಲ್​ ಅನ್ನು 2017ರ ಫೆಬ್ರವರಿಯಲ್ಲಿ ಟ್ವೀಟ್ ಮಾಡಲಾಗಿದ್ದು ಇದು ಮತ್ತೀಗ ವೈರಲ್ ಆಗುತ್ತಿದೆ.

ಇದನ್ನೂ ಓದಿ : ನೇಪಾಳ ವಿಮಾನ ದುರಂತಕ್ಕೂ ಮುನ್ನ ಕೊನೆಯ ಟಿಕ್​ಟಾಕ್​ ಮಾಡಿದ ಗಗನಸಖಿಯ ವಿಡಿಯೋ ವೈರಲ್

ಇಂಡಿಯನ್ ಹಿಸ್ಟರಿ ವಿತ್​ ವಿಷ್ಣು ಶರ್ಮಾ ಎಂಬ ಖಾತೆಯಲ್ಲಿ ಈ ಪೋಸ್ಟ್ ಹಂಚಿಕೊಳ್ಳಲಾಗಿದೆ. ಇಂದು ದೆಹಲಿಯ ರೆಸ್ಟೋರೆಂಟ್​ನಲ್ಲಿ ಒಂದು ಸಾದಾ ದೋಸೆಗೆ ರೂ. 92 ಖರ್ಚಾಗುತ್ತದೆ. ಐವತ್ತು ವರ್ಷಗಳಲ್ಲಿ ಕೊಳ್ಳುವ ಶಕ್ತಿ ಹೆಚ್ಚಾಗಿದೆ ಎಂಬುದನ್ನು ಇದು ತೋರಿಸುತ್ತದೆ. ಈ ಪೋಸ್ಟ್​ ನೋಡಿದ ನೆಟ್ಟಿಗರು, ಇಲ್ಲಿ ಇನ್ನೂ ಮಸಾಲೆದೋಸೆ ಸಿಗುತ್ತದೆಯೇ ಎಂದು ಕೇಳಿದ್ಧಾರೆ.

ಇದನ್ನೂ ಓದಿ : ಊಟದ ಬಿಲ್ ಕೇಳಿದ್ದಕ್ಕೆ ಹೋಟೆಲ್‌ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದ ರೌಡಿಗಳ ಬಂಧನ!

ಪಂಜಾಬಿ ರೆಸ್ಟೋರೆಂಟ್​ 1971ರಲ್ಲಿ ಎರಡು ರೂಪಾಯಿಗೆ ಇಷ್ಟೆಲ್ಲ ತಿಂಡಿ ಸರ್ವ್ ಮಾಡುತ್ತಿತ್ತೇ!? ಅಚ್ಚರಿಯಾಗುತ್ತಿದೆ ಎಂದಿದ್ದಾರೆ ಒಬ್ಬರು. ಇದನ್ನು ನೋಡಿದ ನೀವು ನಿಮ್ಮೂರಲ್ಲಿ ನಿಮ್ಮ ಬಾಲ್ಯಕಾಲದಲ್ಲಿ ಯಾವೆಲ್ಲ ಹೋಟೆಲ್​ನಲ್ಲಿ ಎಷ್ಟು ರೂಪಾಯಿಗೆಲ್ಲ ತಿಂಡಿ ತಿನಿಸುಗಳು ಸಿಗುತ್ತಿದ್ದವು ಎಂಬುದನ್ನು ನೆನಪಿಸಿಕೊಳ್ಳುತ್ತಿರಬಹುದು.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 12:59 pm, Tue, 17 January 23

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ