ರಸ್ತೆಯಲ್ಲಿ ಬಸ್ ನಿಲ್ಲಿಸಿ ಚಿಕನ್ ತರಲು ಅಂಗಡಿಗೆ ಹೋದ ಲಂಡನ್ ಡ್ರೈವರ್ ವಿಡಿಯೋ ವೈರಲ್; ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ
Chicken : ದುಡಿಯುವ ವರ್ಗದ ಪಾಡು ಇದು, ಹೀಗೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕುವುದನ್ನು ನಿಲ್ಲಿಸಿ. ಇಷ್ಟು ಸಣ್ಣ ವಿಷಯಕ್ಕೆ ಈಗವನು ಕೆಲಸ ಕಳೆದುಕೊಂಡ ಪಾಪ... ಎನ್ನುತ್ತಿದೆ ಕೆಲವೇ ಕೆಲ ನೆಟ್ಮಂದಿ.
Viral Video : ನಮಗೆ ಏನು ಬೇಕೋ ಅದನ್ನು ಪಡೆದುಕೊಳ್ಳಲು ನಾವು ತಕ್ಷಣವೇ ಹೊರಟು ನಿಲ್ಲುತ್ತೇವೆ. ಆದರೆ ಸಾರ್ವಜನಿಕರ ಜವಾಬ್ದಾರಿ ಹೊತ್ತ ಡ್ರೈವರ್ಗಳು? ಮೊನ್ನೆಯಷ್ಟೇ ದೆಹಲಿಯಲ್ಲಿ ಬಸ್ ಡ್ರೈವರ್ ಒಬ್ಬ ನಡುರಸ್ತೆಯಲ್ಲಿ ಬಸ್ ನಿಲ್ಲಿಸಿ ಕಾಫಿ ಕುಡಿಯಲು ಹೋದ ವಿಡಿಯೋ ವೈರಲ್ ಆಗಿದ್ದನ್ನು ನೋಡಿದಿರಿ. ಇದೀಗ ಈ ಬಸ್ ಡ್ರೈವರ್ ನಡುರಸ್ತೆಯಲ್ಲಿ ಬಸ್ ನಿಲ್ಲಿಸಿ ಚಿಕನ್ ತರಲು ಅಂಗಡಿಗೆ ಹೋಗಿದ್ದಾನೆ. ಏನಿದು ಇಂಗ್ಲೆಂಡಿನಲ್ಲಿಯೂ ಹೀಗೆಯೇ? ಸರಿಯೇ ಹೀಗೆ ಮಾಡಿದ್ದು ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.
ಇದನ್ನೂ ಓದಿView this post on Instagram
ಈ ವಿಡಿಯೋ ಅನ್ನು ಡಿಸೆಂಬರ್ 22ರಂದು ಹಂಚಿಕೊಳ್ಳಲಾಗಿದೆ. ಈತನಕ ಸುಮಾರು 25,000 ಜನರು ಇಷ್ಟಪಟ್ಟಿದ್ದಾರೆ. ಅಂಗಡಿ ಕಂಡಕೂಡಲೇ, ಬಸ್ಸಿನಲ್ಲಿ ಎಲ್ಲರನ್ನೂ ಹೀಗೆ ನಡುರಸ್ತೆಯಲ್ಲಿ ಬಿಟ್ಟು ಈ ಡ್ರೈವರ್ ಓಡಿಬಿಟ್ಟಿದ್ಧಾನೆ. ಹಿಂದಿರುವ ಗಾಡಿಗಳು ಮತ್ತು ಬಸ್ಸಿನಲ್ಲಿರುವ ಪ್ರಯಾಣಿಕರು ವಾಪಾಸು ಬರುವವರೆಗೂ ಅವನಿಗಾಗಿ ಕಾದಿದ್ದಾರೆ. ನಂತರ ಯಥಾಪ್ರಕಾರ ಬಸ್ಸಿನೊಂದಿಗೆ ಸಾಗಿದ್ದಾನೆ.
ಇದನ್ನೂ ಓದಿ : ಪಡೆದ ಮೊದಲ ಮುತ್ತು! ಅಬ್ಬಾ ಈ ಪುಟ್ಟಣ್ಣನಿಗೆ ಇಷ್ಟೊಂದು ಖುಷಿ ಆಯಿತೆ?
ಇದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಬಾರದಿತ್ತು ಪಾಪ ಅವನ ಕೆಲಸ ಹೋಯಿತು ಎಂದಿದ್ದಾರೆ ಒಬ್ಬರು. ಹೀಗೆಲ್ಲ ವರ್ತಿಸಬಹುದೇ? ಅವನಿಗೆ ಕೆಲಸ ಹೋಗಿದ್ದು ಒಳ್ಳೆಯದೇ ಆಯಿತು ಎಂದಿದ್ದಾರೆ ಹಲವರು. ಓಹೋ ಒಬ್ಬನೇ ತಿನ್ನಬೇಕೆಂದು ಹೀಗೆ ಮಾಡಿದನೋ ಏನೋ ಎಂದಿದ್ದಾರೆ ಕೆಲವರು. ಬಸ್ ಡ್ರೈವರ್ ಕೂಡ ಮನುಷ್ಯನೇ. ಹೀಗೆಲ್ಲ ವಿಡಿಯೋ ಮಾಡುವುದನ್ನು ಮತ್ತು ಪೋಸ್ಟ್ ಮಾಡುವುದನ್ನು ನಿಲ್ಲಿಸಿ ಎಂದಿದ್ದಾರೆ ಒಬ್ಬರು.
ಇದನ್ನೂ ಓದಿ : ಜಿಮ್ಪ್ರಿಯೆ! ಮದುವೆಯಲ್ಲಿ ಪುಲ್ಅಪ್ಸ್ ತೆಗೆದ ವಧುವಿನ ವಿಡಿಯೋ ವೈರಲ್
ದುಡಿಯುವ ವರ್ಗದ ಬವಣೆ ಇದು. ಇದರಲ್ಲಿ ಅಂಥಾ ತಪ್ಪು ಹುಡುಕುವಂಥದ್ದು ಏನೂ ಇಲ್ಲ. ಅವರಿಗೂ ನಮ್ಮ ಹಾಗೆ ಸಂಸಾರ, ಕುಟುಂಬದ ಜವಾಬ್ದಾರಿಗಳು ಇರುತ್ತವೆ. ಉಳಿದವರು ಸಹಕರಿಸಬೇಕಾಗುತ್ತದೆ ಎಂದಿದ್ದಾರೆ ಹಲವರು. ಆದರೆ ಅನೇಕರು ಡ್ರೈವರ್ ಬಗ್ಗೆ ತಮಾಷೆ ಮಾಡಿದ್ದೇ ಹೆಚ್ಚು. ಪಾಪ ಅವನು ಡಬಲ್ ಶಿಫ್ಟ್ ಮಾಡಿರಬೇಕು. ಹಸಿವಾಗಿದ್ದರಿಂದ ಹೀಗೆ ಮಾಡಿರಲು ಸಾಧ್ಯವಿದೆ ಎಂದು ಅವನ ನಡೆಯನ್ನು ಅನುಮೋದಿಸಿದ್ದಾರೆ ಕೆಲವರು.
ಇದರಲ್ಲಿ ನನಗಂತೂ ಏನೂ ತಪ್ಪು ಕಂಡಿಲ್ಲ. ಹಸಿವಾಗಿದೆ ಇಳಿದು ಹೋಗಿದ್ದಾನೆ ಎಂದಿದ್ದಾರೆ ಇನ್ನೂ ಒಬ್ಬರು. ಇಷ್ಟು ಸಣ್ಣ ವಿಷಯಕ್ಕೆ ಕೆಲಸದಿಂದ ತೆಗೆಯುವುದು ಬೇಕಿರಲಿಲ್ಲ ಎಂದಿದ್ಧಾರೆ ಹಲವರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 1:34 pm, Thu, 12 January 23