ಏರ್ ಇಂಡಿಯಾ ವಿಮಾನದಲ್ಲಿ ಮದುವೆ ನಿವೇದನೆ ಮಾಡಿಕೊಂಡ ವ್ಯಕ್ತಿಯ ವಿಡಿಯೋ ವೈರಲ್

Air India : ತನ್ನ ಪಾಡಿಗೆ ತಾನು ಈಕೆ ಕಿಟಕಿ ಬದಿ ಕುಳಿತುಕೊಂಡಿರುತ್ತಾಳೆ. ಮಾಸ್ಕ್ ಹಾಕಿಕೊಂಡು ಬಂದ ವ್ಯಕ್ತಿಯೊಬ್ಬ ಪೋಸ್ಟರ್​ನೊಂದಿಗೆ ಬಂದು ಹೆಲೋ ಮ್ಯಾಡಮ್​ ಎನ್ನುತ್ತಾನೆ. ಮುಂದೆ? ವಿಡಿಯೋ ನೋಡಿ.

ಏರ್ ಇಂಡಿಯಾ ವಿಮಾನದಲ್ಲಿ ಮದುವೆ ನಿವೇದನೆ ಮಾಡಿಕೊಂಡ ವ್ಯಕ್ತಿಯ ವಿಡಿಯೋ ವೈರಲ್
ಏರ್ ಇಂಡಿಯಾದಲ್ಲಿ ಈ ವ್ಯಕ್ತಿ ಮದುವೆ ನಿವೇದನೆ ಮಾಡಿಕೊಂಡ ಕ್ಷಣಗಳು
Follow us
TV9 Web
| Updated By: ಶ್ರೀದೇವಿ ಕಳಸದ

Updated on:Jan 12, 2023 | 12:08 PM

Viral Video : ಪ್ರೇಮ ನಿವೇದನೆ, ಮದುವೆಯ ನಿವೇದನೆ ಅಥವಾ ಮದುವೆಯನ್ನೇ ವಿಮಾನದಲ್ಲಿಯೂ ಮಾಡಿಕೊಳ್ಳುವ ಸಾಕಷ್ಟು ವಿಡಿಯೋಗಳನ್ನು ಈಗಾಗಲೇ ನೋಡಿದ್ದೀರಿ. ಇದೀಗ ಇದೇ ಸಾಲಿಗೆ ಮತ್ತೊಂದು ವಿಡಿಯೋ ಸೇರುತ್ತಿದೆ. ಏರ್​ ಇಂಡಿಯಾದ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ವ್ಯಕ್ತಿಯೊಬ್ಬ ತನ್ನ ಪ್ರೇಯಸಿಗೆ ಮದುವೆಯ ನಿವೇದನೆ ಮಾಡಿಕೊಂಡಿದ್ದಾನೆ. ಈ ಹೃದಯಸ್ಪರ್ಶಿಯಾದ ವಿಡಿಯೋ ನೋಡಿದ ನೆಟ್ಟಿಗರು ಮಧುರ ಗಳಿಗೆಯಲ್ಲಿ ತೇಲುತ್ತಿದ್ಧಾರೆ.

ಈ ಪೋಸ್ಟ್​ ಅನ್ನು ಲಿಂಕ್ಡ್​ಇನ್​ನಲ್ಲಿ ಹಂಚಿಕೊಳ್ಳಲಾಗಿದೆ. ಮುಂಬೈ ಏರ್ ಇಂಡಿಯಾ ವಿಮಾನದಲ್ಲಿ ಈ ವ್ಯಕ್ತಿ ತನ್ನ ಗೆಳತಿಗೆ ತನ್ನ ಪ್ರೇಮ ನಿವೇದನೆ ಮಾಡಿಕೊಂಡಿದ್ದಾನೆ. ರಮೇಶ್​ ಕೊಟ್ನಾನಾ ಎಂಬುವವರುಈ ವಿಡಿಯೋ ಅನ್ನು ಅಪ್​ಲೋಡ್ ಮಾಡಿದ್ಧಾರೆ. 51 ಸೆಕೆಂಡುಗಳ ಈ ವಿಡಿಯೋ ಮನಸ್ಸನ್ನು ಆರ್ದ್ರಗೊಳಿಸುವಂತಿದೆ. ತನ್ನ ಪಾಡಿಗೆ ತಾನು ವಿಂಡೋ ಸೀಟ್​ನಲ್ಲಿ ಈಕೆ ಕುಳಿತುಕೊಂಡಿರುತ್ತಾಳೆ. ಪೋಸ್ಟರ್​ ಹಿಡಿದುಕೊಂಡು ಬಂದ ಆಕೆಯ ಪ್ರಿಯಕರ ಅವಳ ಗಮನ ಸೆಳೆಯುತ್ತಾನೆ. ಅಚ್ಚರಿಯಿಂದ ಆಕೆ ಅವನೆಡೆ ಎದ್ದು ಬಂದು ಅಪ್ಪಿಕೊಳ್ಳುತ್ತಾಳೆ. ಸಹಪ್ರಯಾಣಿಕರೆಲ್ಲ ಚಪ್ಪಾಳೆ ತಟ್ಟಿ ರಸಮಯ ಘಳಿಗೆಯನ್ನು ಮತ್ತಷ್ಟು ರಂಗೇರಿಸುತ್ತಾರೆ.

ಇದನ್ನೂ ಓದಿ : ಹಿಮನಾಡಿನ ಈ ಬಿಲ್ಲುಗಾರ್ತಿ ಉರಿಬಾಣವನ್ನು ಕಾಳ್ಬೆರಳಿನಿಂದ ಹೊಡೆದಾಗ

ಏರ್ ಇಂಡಿಯಾದ ಸಿಬ್ಬಂದಿಯೊಬ್ಬರು ಈ  ದೃಶ್ಯವನ್ನು ರೆಕಾರ್ಡ್ ಮಾಡಿಕೊಂಡಿದ್ದಾರೆ. ಮದುವೆಗಳು ಆಗ ಸ್ವರ್ಗದಲ್ಲಿ ನಡೆಯುತ್ತಿದ್ವು ಈಗ ವಿಮಾನದಲ್ಲಿ ಎಂದು ನೆಟ್ಟಿಗರು ಈ ಜೋಡಿಗೆ ಹಾರೈಸುತ್ತಿದ್ಧಾರೆ. ಇಂಥ ಸನ್ನಿವೇಶಗಳು ಆಗಾಗ ನಡೆಯುತ್ತಿರಲಿ. ಹೃದಯದಲ್ಲಿ ಪ್ರೇಮ ತುಂಬಿ ತುಳುಕುತ್ತಿರಲಿ ಎಂದು ಅನೇಕರು ಪ್ರತಿಕ್ರಿಯಿಸಿದ್ಧಾರೆ. ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:08 pm, Thu, 12 January 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ