ಹಿಮನಾಡಿನ ಈ ಬಿಲ್ಲುಗಾರ್ತಿ ಉರಿಬಾಣವನ್ನು ಕಾಳ್ಬೆರಳಿನಿಂದ ಹೊಡೆದಾಗ

Archer : ಎಂಥ ಗುರಿ! ಹೆಣ್ಣು ಎಂದರೆ ಹೀಗಿರಬೇಕು, ಜಾಣತನವೂ ಮಾದಕತೆಯೂ ಸಾಧನೆಯೂ... ಒರಿಸ್ಸಾ ಕೆಲ್ಲಿ ತಲೆಕೆಳಗಾಗಿ ನಿಂತು ಕಾಲ್ಬೆರಳಿನಿಂದ ಬಾಣ ಹೊಡೆಯುವ ರೀತಿಗೆ ನೆಟ್ಟಿಗರು ಶರಣಾಗುತ್ತಿದ್ಧಾರೆ.

ಹಿಮನಾಡಿನ ಈ ಬಿಲ್ಲುಗಾರ್ತಿ ಉರಿಬಾಣವನ್ನು ಕಾಳ್ಬೆರಳಿನಿಂದ ಹೊಡೆದಾಗ
ಬಿಲ್ಲುಗಾರ್ತಿ ಒರಿಸ್ಸಾ ಕೆಲ್ಲಿ
Follow us
TV9 Web
| Updated By: Digi Tech Desk

Updated on:Jan 12, 2023 | 11:19 AM

Viral Video : ಸಾಮಾಜಿಕ ಜಾಲತಾಣಗಳಲ್ಲಿ ಈ ಹಿಮಗಾಲದ್ದೇ ಹಾವಳಿ. ಅನೇಕರು ಸಾಹಸಮಯ ಪ್ರದರ್ಶನಗಳನ್ನು ವಿಡಿಯೋ ಮಾಡಿ ಅಪ್​ಲೋಡ್ ಮಾಡುತ್ತ ಬದುಕಿಗೆ ಉತ್ಸಾಹವನ್ನು ತುಂಬಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಹಿಮನೀರಿನಲ್ಲಿ ಸ್ನಾನ ಮಾಡಿ ಮಳುಗು ಹೊಡೆದು ಕಾಫಿ ಕುಡಿದ ತರುಣಿಯ ವಿಡಿಯೋ ವೈರಲ್ ಆಗಿದ್ದನ್ನು ನೋಡಿರಬಹುದು. ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ, ಈ ತರುಣಿ ಹಿಮನಾಡಿನಲ್ಲಿ ಬಿಲ್ಲುಗಾರಿಕೆ ಮಾಡುತ್ತಿದ್ದಾಳೆ. ಅಂಥಾ ಏನು ವಿಶೇಷ ಇದೆ ಇದರಲ್ಲಿ ಎಂದು ಯೋಚಿಸುತ್ತಿದ್ದೀರಾ? ಈ ವಿಡಿಯೋ ನೋಡಿ, ವಾವ್​! ಎಂಬ ಉದ್ಗಾರ ಬಾರದೇ ಇರದು ನಿಮ್ಮಿಂದ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Orissa Kelly ? (@orissakelly)

ಒರಿಸ್ಸಾ ಕೆಲ್ಲಿ ಎಂಬ ಬಿಲ್ಲು ಪರಿಣತಿ ಹೊಂದಿದ ಈಕೆ ಬಾಣಕ್ಕೆ ಲೈಟರ್​ನಿಂದ ಬೆಂಕಿ ಹೊತ್ತಿಸುತ್ತಾಳೆ. ನಂತರ ಹ್ಯಾಂಡ್​ಸ್ಟ್ಯಾಂಡ್​ ಮೇಲೆ ತಲೆಕೆಳಗಾಗಿ ನಿಲ್ಲುತ್ತಾಳೆ. ಕಾಲಬೆರಳಿನಲ್ಲಿ ಹಿಡಿದುಕೊಂಡ ಬಾಣವನ್ನು ಗುರಿ ಇಟ್ಟು ಹೊಡೆಯುತ್ತಾಳೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಈಕೆಯ ಜಾಣ್ಮೆಯನ್ನು ನೋಡಿದ ನೆಟ್ಟಿಗರು ಬೆರಗಾಗುತ್ತಿದ್ದಾರೆ.

ಇದನ್ನೂ ಓದಿ : ರಾಮೆನ್​ ಥಣ್ಣಗಾಗಿದ್ದಾನೆ! ಚಮಚ ಸಮೇತ ಹಿಮಗಟ್ಟಿದ ನೂಡಲ್ಸ್​ ವಿಡಿಯೊ ವೈರಲ್

ಈಗಾಗಲೇ ಈ ವಿಡಿಯೋ ಅನ್ನು ಮೂರು ಮಿಲಿಯನ್​ ಜನರು ನೋಡಿದ್ದಾರೆ. ಕತ್ತಲೆಯಲ್ಲಿ ನನ್ನ ಕಾಲುಗಳಿಗೆ ಸಾಕ್ಸ್ ಹಾಕಿಕೊಳ್ಳುವಲ್ಲಿ ಗೊಂದಲವಾಗುತ್ತದೆ. ಆದರೆ ಈಕೆ ಮಾತ್ರ ಅದ್ಭುತ! ಎಂದಿದ್ದಾರೆ ಒಬ್ಬರು. ಹೆಣ್ಣು ಎಂದರೆ ಹೀಗಿರಬೇಕು ಎಂದು ಕೆಲವರು ಹೇಳಿದ್ಧಾರೆ. ಜಾಣ್ಮೆಯೊಂದಿಗೆ ಉನ್ಮಾದವೂ ನಿಮ್ಮಲ್ಲಿ ಮೇಳೈಸಿದೆ ಎಂದಿದ್ದಾರೆ ಮತ್ತೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 11:04 am, Thu, 12 January 23

ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ