AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೈಕಲ್​ ಸವಾರಿಯೊಂದಿಗೆ ಅಲ್ಕಾ ಯಾಜ್ಞಿಕ್, ಕುಮಾರ ಸಾನು ಹಾಡಿಗೆ ಅಭಿನಯಿಸಿದ ಯುವತಿಯ ವಿಡಿಯೋ ವೈರಲ್

Cycling : ಅದ್ಭುತ! ಕೈಬಿಟ್ಟು ಸೈಕಲ್​ ಓಡಿಸುವುದಲ್ಲದೆ, ಕ್ಯಾಮೆರಾ ಎದುರು ಹಾಡಿಗೆ ತಕ್ಕಂತೆ ಅಭಿನಯಿಸುವುದು ಬೇರೆ! ಮಿಲಿಯನ್​ಗಟ್ಟಲೆ ನೆಟ್ಟಿಗರು ಈ ವಿಡಿಯೋಗೆ ಫಿದಾ...

ಸೈಕಲ್​ ಸವಾರಿಯೊಂದಿಗೆ ಅಲ್ಕಾ ಯಾಜ್ಞಿಕ್, ಕುಮಾರ ಸಾನು ಹಾಡಿಗೆ ಅಭಿನಯಿಸಿದ ಯುವತಿಯ ವಿಡಿಯೋ ವೈರಲ್
ರೆಟ್ರೋ ಸವಾರಿ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Jan 11, 2023 | 6:40 PM

Viral Video : ರೆಟ್ರೋ ಸ್ಟೈಲ್​ನಲ್ಲಿ ಹೀಗೆ ಅಲಂಕರಿಸಿಕೊಂಡು ಸೈಕಲ್​ ಏರಿ, ಎರಡೂ ಕೈ ಬಿಟ್ಟು ಹಾಡೊಂದಕ್ಕೆ ಅಭಿನಯಿಸುತ್ತ ರಸ್ತೆಯಲ್ಲಿ ಹೀಗೆ ಪ್ರತ್ಯಕ್ಷವಾದರೆ ನೋಡಿದ ಯಾರಿಗೂ ಅಚ್ಚರಿಯೇ! ಈ ಯುವತಿ ಇದೀಗ ನೆಟ್ಟಿಗರ ಮನ ಕದ್ದಿದ್ದಾಳೆ. ಅಲ್ಕಾ ಯಾಜ್ಞಿಕ್ ಮತ್ತು ಕುಮಾರ್ ಸಾನು ಅವರ ಹಾಡಿನ ಹಿನ್ನೆಲೆಯನ್ನು ಈ ವಿಡಿಯೋದಲ್ಲಿ ಕೇಳಬಹುದಾಗಿದೆ. ಬಂಗಾರ ವರ್ಣದ ಅವಳ ದಿರಿಸು, ಜಡೆಗೆ ಹೆಣೆದ ಹೂಮಾಲೆ ಎಲ್ಲವೂ ಎಷ್ಟೊಂದು ಮನಾಕರ್ಷಕವಾಗಿದೆಯಲ್ಲ?

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by ? B_ush_ra? (@iamsecretgirl023)

ಆಪ್​ ಕಾ ಆನಾ ಹಾಡಿಗೆ ಈಕೆ ಅಭಿನಯಿಸಿದ್ದಾಳೆ. ಎರಡೂ ಕೈ ಬಿಟ್ಟು ಹೀಗೆ ರಸ್ತೆಯಲ್ಲಿ ಸೈಕಲ್​ ಓಡಿಸುತ್ತ, ಹಾಡಿನ ಭಾವಕ್ಕೆ ತಕ್ಕಂತೆ ಅಭಿನಯಿಸುವುದೆಂದರೆ ಸುಲಭದ ಮಾತೆ? ಇದು ಸೆಕೆಂಡುಗಳ ಲೆಕ್ಕದ ರೀಲ್​ ಆದರೂ ಇದರ ಹಿಂದೆ ಅದೆಷ್ಟು ಪರಿಶ್ರಮವಿರುತ್ತದೆ!

ಇದನ್ನೂ ಓದಿ : ಜಿಮ್​ಪ್ರಿಯೆ! ಮದುವೆಯಲ್ಲಿ ಪುಲ್​ಅಪ್ಸ್​ ತೆಗೆದ ವಧುವಿನ ವಿಡಿಯೋ ವೈರಲ್

ಡಿಸೆಂಬರ್ 25ರಂದು ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈತನಕ 3 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋ ಇಷ್ಟಪಟ್ಟಿದ್ಧಾರೆ. ನಾಲ್ಕು ಮಿಲಿಯನ್​ ಜನರು ಈ ವಿಡಿಯೋ ನೋಡಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ. ಆಹಾ ಇದು ಅದ್ಭುತವಾಗಿದೆ ಎಂದಿದ್ದಾರೆ ಅನೇಕರು. ಅದೆಷ್ಟು ಚೆನ್ನಾಗಿ ಸೈಕಲ್ ಬ್ಯಾಲೆನ್ಸ್ ಮಾಡುತ್ತೀರಿ, ಹಾಗೇ ಅಭಿನಯವನ್ನೂ ಎಂದು ಹಲವಾರು ಜನ ಶ್ಲಾಘಿಸಿದ್ದಾರೆ. ಕ್ಯಾಮೆರಾವಾಲಾಗೆ ಹ್ಯಾಟ್ಸ್ ಆಫ್​ ಎಂದಿದ್ದಾರೆ ಇನ್ನೂ ಕೆಲವರು. ಈ ಬ್ಯಾಲೆನ್ಸ್​ ನಿಮ್ಮ ಬದುಕಿನುದ್ದಕ್ಕೂ ಇರಲಿ, ಒಳ್ಳೆಯದಾಗಲಿ ಎಂದ ಹಾರೈಸಿದ್ಧಾರೆ ಅನೇಕರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 6:37 pm, Wed, 11 January 23

ಅರವಿಂದ ಲಿಂಬಾವಳಿ ಮತ್ತು ಜಿಎಂ ಸಿದ್ದೇಶ್ವರ ಸಭೆಗೆ ಗೈರು
ಅರವಿಂದ ಲಿಂಬಾವಳಿ ಮತ್ತು ಜಿಎಂ ಸಿದ್ದೇಶ್ವರ ಸಭೆಗೆ ಗೈರು
ಮುನಿರತ್ನ ಮೇಲಿರೋದು ಆರೋಪಗಳಲ್ಲ, ಎಫ್​ಐಅರ್ ಆಗಿದೆ: ಖರ್ಗೆ
ಮುನಿರತ್ನ ಮೇಲಿರೋದು ಆರೋಪಗಳಲ್ಲ, ಎಫ್​ಐಅರ್ ಆಗಿದೆ: ಖರ್ಗೆ
ಪರೀಕ್ಷೆ ಬರೆಯುವ ಆಸೆಗೆ ಪೋಷಕ ಮತ್ತು ಪತಿ ಮನೆಯವರಿಂದ ಆಕ್ಷೇಪಣೆ ಇಲ್ಲ
ಪರೀಕ್ಷೆ ಬರೆಯುವ ಆಸೆಗೆ ಪೋಷಕ ಮತ್ತು ಪತಿ ಮನೆಯವರಿಂದ ಆಕ್ಷೇಪಣೆ ಇಲ್ಲ
ತಾಳಿ ಕಟ್ಟಿದ ಮರುಕ್ಷಣವೇ ಪರೀಕ್ಷೆಗೆ ಹಾಜರಾದ ನವವಧು: ವಿಡಿಯೋ ನೋಡಿ
ತಾಳಿ ಕಟ್ಟಿದ ಮರುಕ್ಷಣವೇ ಪರೀಕ್ಷೆಗೆ ಹಾಜರಾದ ನವವಧು: ವಿಡಿಯೋ ನೋಡಿ
ಪರಮೇಶ್ವರ್ ಒಡೆತನದ ಶಿಕ್ಷಣ ಸಂಸ್ಥೆ ಸಮೂಹದ ಮೇಲೆ ಈಡಿ ದಾಳಿ ನಡೆದಿದೆ
ಪರಮೇಶ್ವರ್ ಒಡೆತನದ ಶಿಕ್ಷಣ ಸಂಸ್ಥೆ ಸಮೂಹದ ಮೇಲೆ ಈಡಿ ದಾಳಿ ನಡೆದಿದೆ
ಪರಮೇಶ್ವರ್ ಸಂಸ್ಥೆಗಳ ಮೇಲೆ ಇಡಿ ದಾಳಿ: ಡಿಸಿಎಂ ಡಿಕೆಶಿ ಹೇಳಿದ್ದೇನು ನೋಡಿ
ಪರಮೇಶ್ವರ್ ಸಂಸ್ಥೆಗಳ ಮೇಲೆ ಇಡಿ ದಾಳಿ: ಡಿಸಿಎಂ ಡಿಕೆಶಿ ಹೇಳಿದ್ದೇನು ನೋಡಿ
ಪುನರಾಭಿವೃದ್ಧಿಗೊಂಡ 103 ರೈಲ್ವೆ ನಿಲ್ದಾಣಗಳ ಉದ್ಘಾಟಿಸಿದ ಪ್ರಧಾನಿ ಮೋದಿ
ಪುನರಾಭಿವೃದ್ಧಿಗೊಂಡ 103 ರೈಲ್ವೆ ನಿಲ್ದಾಣಗಳ ಉದ್ಘಾಟಿಸಿದ ಪ್ರಧಾನಿ ಮೋದಿ
Video: ಪಾಕಿಸ್ತಾನದ ಗೃಹ ಸಚಿವ ಹಸನ್ ಮನೆಗೆ ಬೆಂಕಿ
Video: ಪಾಕಿಸ್ತಾನದ ಗೃಹ ಸಚಿವ ಹಸನ್ ಮನೆಗೆ ಬೆಂಕಿ
ಪೊಲೀಸ್ ಉನ್ನತ ಹುದ್ದೆಗೆ ನೇಮಕಗೊಂಡವರು ಹೆಚ್​ಎಂ ಭೇಟಿಯಾಗೋದು ಶಿಷ್ಟಾಚಾರ
ಪೊಲೀಸ್ ಉನ್ನತ ಹುದ್ದೆಗೆ ನೇಮಕಗೊಂಡವರು ಹೆಚ್​ಎಂ ಭೇಟಿಯಾಗೋದು ಶಿಷ್ಟಾಚಾರ
ಒಳ್ಳೆಯ ಕೆಲಸ ಮಾಡಿದವರನ್ನು ಅಭಿನಂದಿಸಲೇಬೇಕು: ಬಸನಗೌಡ ಯತ್ನಾಳ್
ಒಳ್ಳೆಯ ಕೆಲಸ ಮಾಡಿದವರನ್ನು ಅಭಿನಂದಿಸಲೇಬೇಕು: ಬಸನಗೌಡ ಯತ್ನಾಳ್