Sign In

By signing in or creating an account, you agree with Associated Broadcasting Company's Terms & Conditions and Privacy Policy.

831224 ಹೀಗೆಂದರೆ ಏನು? ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ ಈ ಸೈಬರ್ ಟರ್ಮ್​

Love : ಆನ್​ಲೈನ್​ ಜಗತ್ತಿನ ಮೂಲಕ ಪ್ರೇಮದ ಶಾಶ್ವತತೆಗೆ ಹಂಬಲಿಸುತ್ತಿದೆ ಇಂದಿನ ಯುವಪೀಳಿಗೆ. ಎಲ್ಲವೂ ಸಂಕೇತಮಯ. ಈಗ ಪ್ರಚಲಿತದಲ್ಲಿರುವ ಈ ಸೈಬರ್​ ಟರ್ಮ್​ 831224. ಇಲ್ಲಿ ಒಂದೊಂದು ಸಂಖ್ಯೆಗೂ ನಿರ್ದಿಷ್ಟ ಅರ್ಥವಿದೆ.

831224 ಹೀಗೆಂದರೆ ಏನು? ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ ಈ ಸೈಬರ್ ಟರ್ಮ್​
Viral Cyber Term 831 224 Means ‘I Love You Today Tomorrow Forever
Follow us
TV9 Web
| Updated By: ಶ್ರೀದೇವಿ ಕಳಸದ

Updated on:Jan 11, 2023 | 3:19 PM

Viral : ಯಾರ ಮೇಲಾದರೂ ಪ್ರೇಮ ಉಂಟಾದಾಗ ಅದನ್ನು ವ್ಯಕ್ತಪಡಿಸುವುದೇ ದೊಡ್ಡ ಸರ್ಕಸ್. ಏಕೆಂದರೆ ಪರಿಣಾಮ ಏನಾಗಬಹುದು, ಅತ್ತಕಡೆಯಿಂದ ಏನು ಪ್ರತಿಕ್ರಿಯೆ ಬರಬಹುದು ಎಂಬ ಆತಂಕದಲ್ಲಿ ಅನುಭವಿಸುವ ಆ ಘಳಿಗೆಗಳು ಇವೆಯಲ್ಲ, ನಿಜಕ್ಕೂ ಪ್ರಾಣ ಹಿಂಡಿಬಿಡುತ್ತವೆ. ಆದರೂ ಮನಸ್ಸು ಕೇಳೀತೇ? ಪ್ರೇಮನಿವೇದನೆಯಾಗಿಯೇ ಬಿಡುತ್ತದೆ. ಆದರೆ ಬದುಕಿನಲ್ಲಿ ಎಷ್ಟು ಸಲ ಪ್ರೇಮ ಉಂಟಾದರೂ ಅದು ಕೇಳುವುದು ಬದ್ಧತೆಯನ್ನೇ. ಹಾಗಾಗಿ ಆಯಾ ಕಾಲಕ್ಕೆ ತಕ್ಕಂತೆ ಪರಸ್ಪರ ಪ್ರೇಮಿಗಳಿಗೆ ನಾನು ನಿನ್ನನ್ನು ಯಾವಾಗಲೂ ಪ್ರೀತಿಸುತ್ತೇನೆ ಎಂಬ ಭಾವವನ್ನು ಉಂಟು ಮಾಡುವ ಸಂಕೇತವೊಂದು ಅವರಿಬ್ಬರ ಮಧ್ಯೆ ಇರಬೇಕಾಗುತ್ತದೆ. ಪೀಳಿಗೆಯ ತಿಳಿವಳಿಕೆ, ಸೃಜನಶೀಲತೆ, ತಂತ್ರಜ್ಞಾನದ ಸಾಧ್ಯತೆಗಳಿಗೆ ತಕ್ಕಂತೆ ಟರ್ಮಿನಾಲಜಿಗಳು ಹುಟ್ಟಿಕೊಳ್ಳುತ್ತಲೇ ಇರುತ್ತವೆ. ಈಗಿನದು ಅಂತರ್ಜಾಲ ಕಾಲ. ಹಾಗಿದ್ದರೆ ಇ-ಕಾಲದಲ್ಲಿ ಪ್ರೀತಿ ಎನ್ನುವ ಪದ ಹುಟ್ಟುಹಾಕಿದ ಬಿರುಗಾಳಿ ಎಂಥದ್ದು? ಅದು 831224. ಅಂದರೆ?

831224 ಹೀಗೆಂದರೆ ನಾನು ನಿನ್ನನ್ನು ಇಂದು, ನಾಳೆ ಮತ್ತು ಎಂದೆಂದಿಗೂ ಪ್ರೀತಿಸುತ್ತೇನೆ ಎಂದರ್ಥ. ಅದು ಹೇಗೆ? ಏನಾದರೂ ನಿಮ್ಮ ಊಹೆಗೆ ನಿಲುಕುತ್ತಿದೆಯಾ? ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಭಾರೀ ವೈರಲ್ ಆಗುತ್ತಿದೆ. ಸ್ನ್ಯಾಪ್​ಚಾಟ್​, ವಾಟ್ಸಪ್​, ಫೇಸ್​ಬುಕ್, ಟ್ವಿಟರ್, ಇನ್​ಸ್ಟಾಗ್ರಾಂ ಮತ್ತು ಟಿಕ್​ಟಾಕ್​ನಲ್ಲಿ 831 ಎಂದರೆ ಐ ಲವ್ ಯೂ ಎಂದರ್ಥ (Cyber Term).

ಇದನ್ನೂ ಓದಿ : ವಧುವನ್ನು ಎತ್ತಿಕೊಂಡು ಮಂಟಪದಿಂದ ಇಳಿಯುತ್ತಿರುವಾಗ ಆಯತಪ್ಪಿ ಬಿದ್ದ ವರನ ವಿಡಿಯೋ ವೈರಲ್

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
831 - I Love You - ನಾನು ನಿನ್ನನ್ನು ಪ್ರೀತಿಸುತ್ತೇನೆ.
831224 - I love you today, tomorrow, forever.
ಇಲ್ಲಿ ಒಂದೊಂದು ಸಂಖ್ಯೆಯೂ ನಿರ್ದಿಷ್ಟವಾದ ಅರ್ಥವನ್ನು ಹೊಂದಿದೆ.
831 - I Love You ಈ ವಾಕ್ಯದಲ್ಲಿ ಒಟ್ಟು ಎಂಟು ಅಕ್ಷರಗಳಿವೆ.
3 - I Love You ಈ ವಾಕ್ಯದಲ್ಲಿರುವ ಪದಗಳ ಒಟ್ಟು ಸಂಖ್ಯೆ.
1 - 831 ಇದಕ್ಕೇ ಒಂದೇ ಅರ್ಥವಿದೆ.
224 - ಈ ಸಂಖ್ಯೆಗಳನ್ನು ರೊಮ್ಯಾಂಟಿಕ್​ ಕ್ಷಣಗಳ ಬಗ್ಗೆ ಶಾಶ್ವತಭಾವ ವ್ಯಕ್ತಪಡಿಸಲು ಇರುವಂಥ ಸಂಖ್ಯೆಗಳು.
2 = ಇಂದು
2 = ನಾಳೆ
4 = ಎಂದೆಂದಿಗೂ

ಇದನ್ನೂ ಓದಿ : ‘ಬೀಡಿ ಜಲೈಲೆ ಜಿಗರ್ ಸೆ ಪಿಯಾ’ ಹಾಡಿಗೆ ನರ್ತಿಸಿದ ಪಾಕಿಸ್ತಾನಿ ದಂಪತಿಯ ವಿಡಿಯೋ ವೈರಲ್

ಆನ್​ಲೈನ್​ ಜಗತ್ತಿನಲ್ಲಿ ಸಂಕೇತಗಳ ಮೂಲಕ ಪ್ರೀತಿ, ಪ್ರೇಮದ ಶಾಶ್ವತತೆಗೆ ಹಂಬಲಿಸುತ್ತಿದೆ ಇಂದಿನ ಯುವಪೀಳಿಗೆ. ನೋಟ, ಮಾತು, ಭೇಟಿಗಾಗಿ ಸಮಯವಿಲ್ಲ. ಆದರೆ ಶಾಶ್ವತದತ್ತ ಹಾತೊರೆತ ಮಾತ್ರ ಇದ್ದಿದ್ದೇ. ಆದರೆ ಈ ಹಂಬಲಕ್ಕೆ ಅಡ್ಡಗಾಲು ಹಾಕುವುದು ಮಾತ್ರ ನಾವೇ ಸೃಷ್ಟಿಸಿಕೊಂಡ ಜೀವನಶೈಲಿ! ಹಾಗಾಗಿ ಇದಕ್ಕೆ ಪರಿಹಾರವನ್ನೂ ನಾವೇ ಕಂಡುಕೊಳ್ಳಬೇಕು. ಪರಸ್ಪರ ಪ್ರೇಮಿಗಳು 831224 ಟೆಕ್ಸ್ಟ್ ಕಳಿಸುತ್ತಿದ್ದರೆ ತಮ್ಮ ಪ್ರೇಮದ ಬಗ್ಗೆ ಭದ್ರಭಾವ ನೆಲೆಸುತ್ತದೆ ಎಂಬ ಅಂಬೋಣ ಇರಬಹುದು.

ಇದನ್ನೂ ಓದಿ : ವಿಮಾನದಲ್ಲಿ ಸಹಪ್ರಯಾಣಿಕನೊಂದಿಗೆ ಶರ್ಟ್ ಬಿಚ್ಚಿ ಹೊಡೆದಾಟಕ್ಕಿಳಿದ ಯುವಕನ ವಿಡಿಯೋ ವೈರಲ್

ಇತ್ತೀಚಿಗೆ 5201314 ಎಂಬ ಸಂಖ್ಯೆಯೂ ವೈರಲ್ ಆಗಿತ್ತು, ನಾನು ನಿನ್ನನ್ನು ಜೀವಮಾನವಿಡೀ ಪ್ರೀತಿಸುತ್ತೇನೆ.

ಇದನ್ನು ಓದಿದ ನೀವು ನಿಮ್ಮ ಹರೆಯ, ಯೌವನದಲ್ಲಿ ಇಂಥ ಸಂಕೇತಗಳನ್ನು ಹುಟ್ಟುಹಾಕಿದ್ದನ್ನು ಮತ್ತು ಚಾಲ್ತಿಯಲ್ಲಿದ್ದುದನ್ನು ನೆನಪಿಸಿಕೊಳ್ಳುತ್ತಿದ್ಧೀರಲ್ಲವೆ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 3:06 pm, Wed, 11 January 23