ಹಗ್ಗದಾಟದಲ್ಲಿ ಗಿನ್ನೀಸ್ ವಿಶ್ವದಾಖಲೆ ಮಾಡಿದ ಬಲು ಎಂಬ ನಾಯಿ
Guinness World Record : ಜುಲೈ 12, 2022ರಂದು 30 ಸೆಕೆಂಡುಗಳಲ್ಲಿ 32 ಸಲ ಜಿಗಿದು ವಿಶ್ವದಾಖಲೆ ಮಾಡಿದ್ದಾರೆ ಜರ್ಮನಿ ಮೂಲದ ಬಲು ಎಂಬ ನಾಯಿ ಮತ್ತು ಅದರ ಪೋಷಕ. ಮುದ ಕೊಡುವಂತಿದೆ ಈ ವಿಡಿಯೋ.

Viral Video: ಮನುಷ್ಯರಷ್ಟೇ ಗಿನ್ನೀಸ್ ವಿಶ್ವದಾಖಲೆ ಮಾಡಬೇಕೆ? ನಾವೇನು ಕಡಿಮೆ ಎನ್ನುತ್ತಿದೆ ಬಲು (Balu) ಎಂಬ ನಾಯಿ. ಹಿಂಗಾಲುಗಳ ಮೇಲೆ ಅತೀ ಹೆಚ್ಚು ಜಿಗಿತಗಳಿಗಾಗಿ ಇದೀಗ ವಿಶ್ವದಾಖಲೆಯ ಪಟ್ಟಿಗೆ ಸೇರಿದೆ. ಇದರ ಪೋಷಕ ವೂಲ್ಫ್ಗ್ಯಾಂಗ್ ಲಾಯೆನ್ಬರ್ಗರ್ನೊಂದಿಗೆ ಇದು ಹಗ್ಗದಾಟ ಆಡುವುದನ್ನು ನೋಡುವುದೇ ಸ್ವರ್ಗ. ನೆಟ್ಟಿಗರೆಲ್ಲರೂ ಸ್ಫೂರ್ತಿಯಿಂದ ಕೂಡಿದ ಈ ವಿಡಿಯೋ ನೋಡುತ್ತ ಮೈಮರೆಯುತ್ತಿದ್ದಾರೆ. 30 ಸೆಕೆಂಡುಗಳಲ್ಲಿ 32 ಸಲ ಜಿಗಿದು ಈ ದಾಖಲೆಗೆ ಪಾತ್ರವಾಗಿದೆ ಬಲು.
ಜರ್ಮನಿ ಮೂಲದ ಬಲು ಮತ್ತು ಅದರ ಪೋಷಕ ಜುಲೈ 12 ರಂದು ಈ ದಾಖಲೆಯನ್ನು ನಿರ್ಮಿಸಿದ್ದಾರೆ. ಇವರಿಬ್ಬರೂ ಈ ಪ್ರಶಸ್ತಿಗಾಗಿ ಕಠಿಣವಾದ ತರಬೇತಿಯನ್ನು ಪಡೆದಿದ್ದಾರೆ. ಸತತ ಪ್ರಯತ್ನದ ಮೂಲಕ ಈ ಯಶಸ್ಸನ್ನು ಸಾಧಿಸಿದ್ದಾರೆ. ಈತನಕ ವಿಡಿಯೋ ಅನ್ನು 3 ಮಿಲಿಯನ್ ಜನರು ನೋಡಿದ್ದಾರೆ. 22,000ಕ್ಕೂ ಹೆಚ್ಚು ಜನರು ಈ ವಿಡಿಯೋ ಮೆಚ್ಚಿದ್ದಾರೆ. ನಿಮ್ಮಿಬ್ಬರಿಗೂ ಅಭಿನಂದನೆ ಎಂದಿದ್ದಾರೆ ನೆಟ್ಟಿಗರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ