‘ನಾ ಬರದಿದ್ದರೆ ಶಾಲೆಯೇನು ಮುಚ್ಚಿ ಹೋಗುವುದಿಲ್ಲ’ ಉತ್ತರ ಪ್ರದೇಶದ ಬಾಲಕನ ರಜಾಚೀಟಿ ವೈರಲ್
Uttar Pradesh : ‘ಜ್ವರ ನನ್ನನ್ನು ಸುಡುತ್ತಿದೆ, ಮೂಗು ಒಂದೇ ಸಮ ಇಳಿಯುತ್ತಿದೆ, ನಾಲ್ಕು ದಿನ ರಜೆ ಕೊಡಿ ಸಾರ್’ ಬುಂದೇಲುಖಂಡದ ಈ ಪೋರನ ನೇರವಂತಿಕೆಗೆ ನೆಟ್ಟಿಗರು ಭಲೇ ಎನ್ನುತ್ತಿದ್ದಾರೆ.
Viral : ನಾವೆಲ್ಲರೂ ಚಿಕ್ಕಂದಿನಿಂದಲೂ ರಜಾಚೀಟಿಯನ್ನು ಬರೆಯುತ್ತ ಬಂದಿದ್ದೇವೆ. ನಮ್ಮ ನಮ್ಮ ತಿಳಿವಳಿಕೆಗೆ ತಕ್ಕಂತೆ ಬರೆಯುವ ಕ್ರಮ ಕೂಡ ಬದಲಾಗುತ್ತಾ ಬಂದಿದೆ. ಇದೀಗ ಉತ್ತರ ಪ್ರದೇಶದ ಶಾಲಾಬಾಲಕನೊಬ್ಬ ಬರೆದ ರಜಾಚೀಟಿ ವೈರಲ್ ಆಗುತ್ತಿದೆ. ಐಎಎಸ್ ಅಧಿಕಾರಿ ಅರ್ಪಿತ್ ವರ್ಮಾ ಈ ರಜಾ ಚೀಟಿಯನ್ನು ಟ್ವೀಟ್ ಮಾಡಿದ್ದಾರೆ. ಇದನ್ನು ಬರೆದ ವಿದ್ಯಾರ್ಥಿಯ ಹೆಸರು ಕಲುವಾ.
छुट्टी के लिए आवेदन पत्र! ?? pic.twitter.com/RVgTX5pdM1
ಇದನ್ನೂ ಓದಿ— Arpit Verma IAS (@arpit_verma13) April 29, 2022
ತನಗೆ ಯಾಕೆ ರಜೆ ಬೇಕು ಮತ್ತು ತನ್ನ ಪರಿಸ್ಥಿತಿ ಏನು ಎಂಬುದನ್ನು ಈ ಚೀಟಿಯಲ್ಲಿ ಅವನು ವಿವರಿಸಿದ್ದಾನೆ. ಅವನು ಬರೆದ ರೀತಿ ಬಹಳ ಪ್ರಾಮಾಣಿಕ ಮತ್ತು ನೇರವಂತಿಕೆಯಿಂದ ಕೂಡಿದೆ. ‘ನಾನು ಜ್ವರ ಮತ್ತು ನೆಗಡಿಯಿಂದ ಬಳಲುತ್ತಿದ್ದೇನೆ. ಹಾಗಾಗಿ ನನಗೆ ನಾಲ್ಕು ದಿನಗಳ ರಜೆ ಬೇಕು. ನಾನು ಶಾಲೆಗೆ ಬರದಿದ್ದರೆ ಶಾಲೆ ಏನು ಮುಚ್ಚಿಹೋಗುವುದಿಲ್ಲ’ ಎನ್ನುವುದು ಈ ರಜಾಚೀಟಿಯ ಸಾರಾಂಶ.
10,000 ಜನರು ಈ ಪೋಸ್ಟ್ ಅನ್ನು ಮೆಚ್ಚಿದ್ದಾರೆ. 1,200ಕ್ಕಿಂತಲೂ ಹೆಚ್ಚು ಜನ ರೀಟ್ವೀಟ್ ಮಾಡಿದ್ದಾರೆ. ಕಲುವಾ ಹೇಳಿದ್ದು ಸರಿ ಇದೆ, ಯಾರು ಬರದಿದ್ದರೂ ಯಾವ ಶಾಲೆಯೂ ಮುಚ್ಚುವುದಿಲ್ಲ ಎಂದಿದ್ದಾರೆ ಒಬ್ಬರು. ನೀನೇ ಬುಂದೇಲಖಂಡದ ಮಗ ಎಂದರೆ! ಎಂದಿದ್ದಾರೆ ಮಗದೊಬ್ಬರು. ಉತ್ತರಪ್ರದೇಶವರು ಯಾವಾಗಲೂ ಹೀಗೇ ನೇರ ಎಂದಿದ್ದಾರೆ ಇನ್ನೊಬ್ಬರು.
ನೀವು ಎಂದಾದರೂ ಹೀಗೆ ರಜಾಚೀಟಿ ಬರೆದಿದ್ದ ನೆನಪಿದೆಯಾ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 6:31 pm, Wed, 9 November 22