ತನ್ನ ಮುಟ್ಟಿನ ಸಮಸ್ಯೆಯನ್ನು ಚರ್ಚಿಸಲು ಅಮೆರಿಕದ ರಾಜಕಾರಣಿಗೆ ಫೋನ್ ಮಾಡಿದ ಯುವತಿ; ವಿಡಿಯೋ ವೈರಲ್

Menstrual Cycle : ‘ನನ್ನ ವೈದ್ಯಕೀಯ ನಿರ್ಧಾರಗಳಿಗೆ ಸಂಬಂಧಿಸಿದಂತೆ ಸ್ಥಳೀಯ ರಾಜಕಾರಣಿಗಳೂ ಭಾಗಿಯಾಗಬೇಕೆಂದು ಇಚ್ಛಿಸುತ್ತೇನೆ, ಹಾಗಾಗಿ ಈ ಕರೆ ಮಾಡುತ್ತಿದ್ದೇನೆ’ ಎಂದು ಈ ಯುವತಿ ಫೋನ್ ಮಾಡಿದ್ದಾಳೆ.

ತನ್ನ ಮುಟ್ಟಿನ ಸಮಸ್ಯೆಯನ್ನು ಚರ್ಚಿಸಲು ಅಮೆರಿಕದ ರಾಜಕಾರಣಿಗೆ ಫೋನ್ ಮಾಡಿದ ಯುವತಿ; ವಿಡಿಯೋ ವೈರಲ್
Woman calls US politician to discuss about her menstrual cycle
Follow us
TV9 Web
| Updated By: ಶ್ರೀದೇವಿ ಕಳಸದ

Updated on:Nov 09, 2022 | 7:38 PM

Viral : ಅಮೆರಿಕದ ಯುವತಿಯೊಬ್ಬಳು ತನ್ನ ಅನಿಯಮಿತ ಋತುಚಕ್ರ ಮತ್ತು ಅಂಡಾಣು ಉತ್ಪತ್ತಿ ಸಮಯದಲ್ಲಿ  ಉಂಟಾಗುವ ಹೊಟ್ಟೆನೋವಿನ ಬಗ್ಗೆ ಸ್ಥಳೀಯ ರಾಜಕಾರಣಿಯೊಂದಿಗೆ ಚರ್ಚಿಸಬೇಕು ಮತ್ತು ಅದಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ನಿರ್ಧಾರವನ್ನು ತೆಗೆದುಕೊಳ್ಳಲು ಅವರ ಸಲಹೆ ಬೇಕು ಹಾಗಾಗಿ ಅವರೊಂದಿಗೆ ಒಮ್ಮೆ ಮಾತನಾಡಬೇಕೆಂದು ಅವರ ಕಚೇರಿಗೆ ಫೋನ್ ಮಾಡುತ್ತಾಳೆ. ಆ ವಿಡಿಯೋ ಇದೀಗ ವೈರಲ್ ಆಗಿದೆ.

ದಾರಾ ಫಾಯೆ ಎಂಬಾಕೆ ತನ್ನ ಈ ವಿಡಿಯೋ ಅನ್ನು ಟ್ವೀಟ್ ಮಾಡಿದ್ದಾರೆ. ಈಗಾಗಲೇ ಈ ವಿಡಿಯೋ 3 ಲಕ್ಷಕ್ಕೂ ಹೆಚ್ಚು ಜನರನ್ನು ತಲುಪಿದೆ. ನೆಟ್ಟಿಗರು ಈಕೆಯ ನಡೆಯನ್ನು ಶ್ಲಾಘಿಸುತ್ತಿದ್ದಾರೆ. ಇಂಡಿಪೆಂಡೆಂಟ್‌ ವರದಿಯ ಪ್ರಕಾರ, ‘2022 ರ ಮಧ್ಯಂತರ ಚುನಾವಣೆಯ ಮುನ್ನಾ ದಿನಗಳಲ್ಲಿ ಮಹಿಳೆಯರ ಸಂತಾನೋತ್ಪತ್ತಿ ಆರೋಗ್ಯದ ಕುರಿತು ಸ್ಥಳೀಯ ರಾಜಕಾರಣಿಗಳ ಗಮನ ಸೆಳೆಯಲು ಈಕೆ ಹೀಗೆ ಮಾಡಿದ್ದಾಳೆ.’

ದಾರಾ ಈ ವಿಡಿಯೋ ಅನ್ನು ಮೊದಲು ಹಂಚಿಕೊಂಡಿದ್ದು ಟಿಕ್​ಟಾಕ್​ನಲ್ಲಿ. ನಂತರ ಟ್ವೀಟ್ ಮಾಡಿದ್ದಾರೆ. ಆಕೆ ಫೋನ್ ಮಾಡಿದ್ದು ಕ್ಯಾಲಿಫೋರ್ನಿಯಾದ ಮೈಕ್ ಗಾರ್ಸಿಯಾ ಎಂಬ ರಾಜಕಾರಣಿಯ ಕಚೇರಿಗೆ. ಆದರೆ ಆಕೆ ನೇರವಾಗಿ ಅವರೊಂದಿಗೆ ಮಾತನಾಡಲು ಸಾಧ್ಯವಾಗದೆ, ಆಕೆಯ ಧ್ವನಿ ರೆಕಾರ್ಡೆಡ್​ ವಾಯಿಸ್ ಲಿಸ್ಟ್​ನಲ್ಲಿ ಸೇರ್ಪಡೆಯಾಗಿದೆ;

‘ಹಾಯ್, ನನ್ನ ಹೆಸರು ದಾರಾ. ನಾನು ನನ್ನ ಅನಿಯಮಿತ ಋತುಚಕ್ರದ ಬಗ್ಗೆ ಚರ್ಚಿಸಲು ಕರೆ ಮಾಡಿದ್ದೇನೆ. ಅಂಡಾಣು ಉತ್ಪತ್ತಿ ಸಮಯದಲ್ಲಿ ನಾನು ಬಹಳಷ್ಟು ನೋವನ್ನು ಅನುಭವಿಸುತ್ತೇನೆ. ‘ಲೈಫ್ ಆಫ್​ ಕನ್ಸೆಪ್ಷನ್ ಆ್ಯಕ್ಟ್​’ ಅನ್ನು ಅವರು ಬೆಂಬಲಿಸುವಲ್ಲಿ ಪ್ರಸ್ತುತ ರಾಜಕಾರಣಿಯು ಆಸ್ಥೆ ವಹಿಸುತ್ತಾರೆ ಎಂದು ಭಾವಿಸಿ ಫೋನ್ ಮಾಡುತ್ತಿದ್ದೇನೆ. ಅವರು ಪ್ರಮಾಣೀಕೃತ ಸ್ತ್ರೀರೋಗ ತಜ್ಞರು ಹೌದೋ ಅಲ್ಲವೋ ನನಗೆ ಗೊತ್ತಿಲ್ಲ. ಆದರೆ ಈ ಬಿಲ್​ ಅವನ್ನು ಅವರು ಬೆಂಬಲಿಸುತ್ತಾರೆ ಮತ್ತು ಅವರಿಗೆ ಈ ಬಗ್ಗೆ ಸಾಕಷ್ಟು ತಿಳಿವಳಿಕೆ ಇದೆ ಎಂದೇ ಭಾವಿಸಿದ್ದೇನೆ.’

ಈ ವಿಡಿಯೋ ನೋಡಿದ ನೆಟ್​ಮಂದಿ ಈಕೆಯ ನೇರವಂತಿಕೆ ಮತ್ತು ವಸ್ತುನಿಷ್ಠತೆಯನ್ನು ಹೊಗಳುತ್ತಿದ್ದಾರೆ. ಇದು ಒಳ್ಳೆಯ ಕಾನ್ಸೆಪ್ಟ್​ ನಾವೂ ಕೂಡ ಈ ಕ್ರಮವನ್ನು ಅನುಸರಿಸಬೇಕು. ಸ್ಥಳೀಯ ರಾಜಕಾರಣಿಗಳೊಂದಿಗೆ ಸಮಸ್ಯೆಗಳನ್ನು ಹಂಚಿಕೊಳ್ಳಬೇಕು ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ನೀವು ಮಿಂಚುತ್ತಿದ್ದೀರಿ! ಬಹುಶಃ ಅವರು ಈ ವಿಷಯದಲ್ಲಿ ಪರಿಣತರು ಎನ್ನಿಸುತ್ತದೆ. ನಿಮ್ಮ ಈ ನಡೆ ದಿಟ್ಟತೆಯಿಂದ ಕೂಡಿದೆ ಎಂದಿದ್ದಾರೆ ಮತ್ತೊಬ್ಬರು.

ನಿಮಗೆ ಏನನ್ನಿಸಿತು ಈಕೆಯ ನಡೆ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 7:37 pm, Wed, 9 November 22

ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ