AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮಾರ್ವೆಲ್ ಸಿನೆಮಾ ನೋಡುತ್ತಿರುವ ಈ ಅಜ್ಜಿಯನ್ನು ನಾವೆಲ್ಲಾ ಸೇರಿ ಕಾಪಾಡಬೇಕಿದೆ’

Marvel Movies : ಹಣ್ಣಣ್ಣು ಈ ಅಜ್ಜಿ ಮಕ್ಕಳು ನೋಡುವ ಸಿನೆಮಾಗಳನ್ನು ನೋಡುತ್ತ ನೋಟ್ಸ್​ ಮಾಡಿಕೊಳ್ಳುವ ಖಯಾಲಿಗೆ ಬಿದ್ದಿದ್ದಾಳೆ. ನೆಟ್ಟಿಗರೆಲ್ಲಾ ತಮಾಷೆ ಮಾಡುತ್ತಿದ್ದಾರೆ. ನಿಮಗೂ ನಗು ಬರುತ್ತದೆಯಾ ಓದಿದ ಮೇಲೆ? ವಿಡಿಯೋ ನೋಡಿ.

‘ಮಾರ್ವೆಲ್ ಸಿನೆಮಾ ನೋಡುತ್ತಿರುವ ಈ ಅಜ್ಜಿಯನ್ನು ನಾವೆಲ್ಲಾ ಸೇರಿ ಕಾಪಾಡಬೇಕಿದೆ’
Viral video shows an elderly woman watching Marvel movies
TV9 Web
| Edited By: |

Updated on:Nov 10, 2022 | 1:04 PM

Share

Viral : ಯಾವ ಯಾವ ವಯಸ್ಸಿನಲ್ಲಿ ಯಾರ್ಯಾರಿಗೆ ಎಂಥ ಸಿನೆಮಾಗಳು ಬೇಕೋ ಅಂಥವುಗಳನ್ನು ನೋಡುವುದು ಸಾಮಾನ್ಯ. ಆದರೆ ಹಣ್ಣಣ್ಣು ಅಜ್ಜಿಯೊಬ್ಬಳು ಮಾರ್ವೆಲ್​ ಸಿನೆಮಾಗಳ ಹುಚ್ಚು ಹಿಡಿಸಿಕೊಂಡಿದ್ದು ಯಾಕೆ? ಅಚ್ಚರಿಯಾಗುತ್ತಿದೆಯಾ? ನೆಟ್ಟಿಗರಿಗೂ ನಗು ಮತ್ತು ಕುತೂಹಲ ತಡೆಯಲಾಗುತ್ತಿಲ್ಲ. ಈಕೆ ಈ ಸಿನೆಮಾಗಳನ್ನು ನೋಡುತ್ತಿರುವುದಷ್ಟೇ ಅಲ್ಲ ನೋಟ್​ ಕೂಡ ಮಾಡಿಕೊಳ್ಳುತ್ತಿದ್ದಾಳೆ. ನಂತರ ತನ್ನ ಮೊಮ್ಮಕ್ಕಳೊಂದಿಗೆ ಈ ಕುರಿತು ಚರ್ಚಿಸುವ ಇರಾದೆ ಆಕೆಯದು. ನೋಡಿ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!
View this post on Instagram

A post shared by LADbible (@ladbible)

ಏಕೆಂದರೆ Gen Z ಅಂದರೆ ಈಗಿನ ಪೀಳಿಗೆಯ ಮಕ್ಕಳು ಮಾರ್ವೆಲ್​ ಸೀರೀಸ್​ನ ಭಯಂಕರ ಅಭಿಮಾನಿಗಳು. ಅಪ್ಪಟ ಮನರಂಜನೆ, ಸಾಹಸಪ್ರಧಾನ​ ವಿಷಯಗಳನ್ನು ಈ ಸಿನೆಮಾಗಳು ಹೊಂದಿರುತ್ತವೆ. ಆದರೆ ಇಂಥ ಸಿನೆಮಾಗಳನ್ನು ಅಜ್ಜಿ ಯಾಕೆ ಇಷ್ಟೊಂದು ತನ್ಮಯರಾಗಿ ನೋಡಲು ಶುರು ಮಾಡಿದ್ದಾಳೆ ಎನ್ನುವುದೇ ಪ್ರಶ್ನೆ.

ಈತನಕ 4 ಮಿಲಿಯನ್ ಜನರು ಈ ವಿಡಿಯೋ ನೋಡಿದ್ದಾರೆ. ಎಂಥಾ ಮುದ್ದಾದ ಅಜ್ಜಿ ಇವರು, ನೋಟ್ಸ್​ ಕೂಡ ತೆಗೆದುಕೊಳ್ಳುತ್ತಿದ್ದಾರೆ ಎಂದಿದ್ದಾರೆ. ಹುಚ್ಚು ಹಿಡಿದಿದೆಯಾ ಈ ಅಜ್ಜಿಗೆ ಎಂದು ತಮಾಷೆ ಮಾಡಿದ್ದಾರೆ ಕೆಲವರು.

ವಯಸ್ಸಾದಂತೆ ಜಗತ್ತಿನಿಂದ ದೂರವಾಗುತ್ತಿದ್ದೇನೆ ಎಂಬ ಆತಂಕ, ಭಯ ಕಾಡುವುದು ಸಾಮಾನ್ಯ. ಜಗತ್ತಷ್ಟೇ ಅಲ್ಲ, ತನ್ನ ಸುತ್ತಮುತ್ತಲಿನವರೊಂದಿಗೆ, ಸ್ವಂತದವರೊಂದಿಗೆ ಕೂಡ. ಆಗ ಗೊಣಗಾಟ, ಕೋಪ, ಕಿರಿಕಿರಿ ಮತ್ತು ಮೌನದೊಂದಿಗೆ ವಯಸ್ಸಾದವರು ಆಗಾಗ ತಮ್ಮ ಅಸಹಾಯಕತೆ, ನೋವನ್ನು ವ್ಯಕ್ತಪಡಿಸುತ್ತಿರುತ್ತಾರೆ. ಆದರೆ ಈ ಅಜ್ಜಿ ಹಾಗೆಲ್ಲ ಮಾಡದೆ, ಎಳೆಯರೊಂದಿಗೆ ಮನಸ್ಸು, ಆಲೋಚನೆಯನ್ನು ಜೋಡಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾಳೆ. ಹೀಗಾದರೂ ಮೊಮ್ಮಕ್ಕಳೊಂದಿಗೆ ಮಾತನಾಡಬಹುದಲ್ಲ ಎಂಬ ಆಸೆ ಇರಬಹುದು. ಇದರಲ್ಲಿ ನಗುವ ವಿಷಯ ಏನೂ ಇಲ್ಲ. ಇದು ಹೃದಯಕ್ಕೆ ಸಂಬಂಧಿಸಿದ್ದು.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:56 pm, Thu, 10 November 22

ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ