Trending : ತನ್ನ ರೆಸ್ಯೂಮ್​ ಅನ್ನು ಕೇಕ್​ ಮೇಲೆ ಮುದ್ರಿಸಿ ‘ನೈಕ್​’ಗೆ ಕಳಿಸಿದ ಯುವತಿ

Resume on the cake : ಈ ಕೇಕ್​ ಮೂಲಕವಾದರೂ ನಾನ್ಯಾರೆಂಬುದನ್ನು ಈ ಕಂಪೆನಿಯವರು ಪತ್ತೆ ಹಚ್ಚಲಿ. ಇನ್ನು ಈ ಕಂಪೆನಿಯಲ್ಲಿ ಕೆಲಸ ಗಿಟ್ಟಿಸಬೇಕೆಂದೇ ನಾನು ಈ ಸೃಜನಶೀಲ ಉಪಾಯವನ್ನು ಹೂಡಿದ್ದು ಎಂದಿದ್ದಾಳೆ ಯುವತಿ.

Trending : ತನ್ನ ರೆಸ್ಯೂಮ್​ ಅನ್ನು ಕೇಕ್​ ಮೇಲೆ ಮುದ್ರಿಸಿ ‘ನೈಕ್​’ಗೆ ಕಳಿಸಿದ ಯುವತಿ
ಕೇಕ್​ ಮೇಲೆ ರೆಸ್ಯೂಮ್ ಪ್ರಿಂಟ್
Follow us
TV9 Web
| Updated By: ಶ್ರೀದೇವಿ ಕಳಸದ

Updated on: Sep 26, 2022 | 1:26 PM

Trending : ಸಾಕಷ್ಟು ಅಂಕ ಗಳಿಸಿಬಿಟ್ಟರೆ ಕೆಲಸ ಸಿಗುತ್ತದೆ ಎಂಬ ಕಾಲ ಇದಲ್ಲ. ಈಗೇನಿದ್ದರೂ ಕೌಶಲದ ಕಾಲ. ಪ್ರತಿಭೆ, ಅಂಕಪಟ್ಟಿ, ಪದವಿಗಳ ಜೊತೆಗೆ ಕಂಪೆನಿಯ ಉತ್ಪಾದಕತೆಯ ನಿರೀಕ್ಷೆಗೆ ತಕ್ಕಂತೆ ನಿಮ್ಮಲ್ಲಿರುವ ಕೌಶಲಗಳು ಪೂರಕವಾಗಿವೆಯೇ ಎಂಬುದು ಮುಖ್ಯ. ಕೆಲಸ ಗಿಟ್ಟಿಸಬೇಕೆಂದರೆ ಮೊದಲ ಹಂತದಲ್ಲಿ ರೆಸ್ಯೂಮ್​ ತಯಾರಿ ಮಾಡಿಕೊಂಡಿರಬೇಕು. ಈ ರೆಸ್ಯೂಮ್​ನಿಂದಲೇ ಕಂಪೆನಿಯವರ ಗಮನ ಸೆಳೆಯಬೇಕಿರುವುದು. ಸಾವಿರಾರು ರೆಸ್ಯೂಮ್​ ಮಾದರಿಗಳು ಅಂತರ್ಜಾಲದಲ್ಲಿ ಲಭ್ಯ. ಆದರೂ ಇವ್ಯಾವೂ ಕೂಡ ಉತ್ತರ ಕೆರೋಲಿನಾದ ಯುವತಿಗೆ ಹಿಡಿಸಲಿಲ್ಲವೆನ್ನಿಸುತ್ತದೆ. ತಾನು ನೈಕ್​ ಕಂಪೆನಿಯಲ್ಲಿ ಕೆಲಸ ಗಿಟ್ಟಿಸಲೇಬೇಕು ಎಂಬ ಛಲದಿಂದ ಆಕೆ ತನ್ನ ರೆಸ್ಯೂಮ್​ ಅನ್ನು ಕಂಪೆನಿಗೆ ಕಳುಹಿಸಲು​ ಅದ್ಭುತ ಆಲೋಚನೆ ಮಾಡಿದ್ದಾಳೆ.

ತಾನು ಇತರರಿಗಿಂತ ಭಿನ್ನ ಎಂದು ಗಮನಸೆಳೆಯಲು ಉತ್ತರ ಕೆರೋಲಿನಾದ ಯುವತಿ ಕಾರ್ಲಿ ಪಾವ್ಲಿನಾಕ್​ ಬ್ಲ್ಯಾಕ್​ಬರ್ನ್​ ಹೀಗೊಂದು ಈ ಉಪಾಯ ಕಂಡುಕೊಂಡಿದ್ದಾರೆ. ಲಿಂಕ್​ಡಿನ್​ನ ತನ್ನ ಖಾತೆಯಲ್ಲಿ ಈಕೆ ಪೋಸ್ಟ್ ಹಾಕುತ್ತಿದ್ದಂತೆ ವೈರಲ್ ಆಗಿದೆ. ರೆಸ್ಯೂಮ್​ ಅನ್ನು ಇ ಮೇಲ್​ನಲ್ಲಿ ಕಳಿಸುವುದು ಸಾಮಾನ್ಯವಾದ ವಿಧಾನ. ಆದರೆ ಈಕೆ ತನ್ನ ರೆಸ್ಯೂಮ್​ ಅನ್ನು ಕೇಕ್​ ಮೇಲೆ ಮುದ್ರಿಸಿ ಕಂಪೆನಿಗೆ ಕಳಿಸಿದ್ಧಾರೆ. ತಾನೇಕೆ ಹೀಗೆ ಅಸಾಂಪ್ರದಾಯಿಕವಾದ ನಡೆಯನ್ನು ಆಯ್ದುಕೊಂಡಿದ್ದೇನೆ? ಎನ್ನುವುದನ್ನು ಪೋಸ್ಟ್​ನಲ್ಲಿ ವಿವರಿಸಿದ್ದಾಳೆ.

‘ಈ ಕಂಪೆನಿಯ ತಂಡವೊಂದು ಸದ್ಯ ಯಾವುದೇ ಸ್ಥಾನಗಳನ್ನು ಭರ್ತಿ ಮಾಡಿಕೊಳ್ಳುತ್ತಿಲ್ಲ. ಹಾಗಾಗಿ ಈ ಕೇಕ್​ ಮೂಲಕವಾದರೂ ನಾನು ಯಾರೆಂದು ಅವರು ಪತ್ತೆ ಹಚ್ಚುವಂತಾಗಲಿ. ಅಷ್ಟೊಂದು ದೊಡ್ಡ ಪಾರ್ಟಿಗೆ ನಾನು ಕಳಿಸುತ್ತಿರುವ ಈ ಕೇಕ್​ ಸೂಕ್ತವಾಗಿದೆ ಎನ್ನಿಸಿತು ಮತ್ತು ಈ ಕೇಕ್​ ಐಡಿಯಾಗಿಂತ ಒಳ್ಳೆಯ ಉಪಾಯ ಬೇರೊಂದಿಲ್ಲ ಎನ್ನಿಸಿತು.’ ಎಂದಿದ್ದಾಳೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ನೈಕ್​ ಕಂಪೆನಿಯಲ್ಲಿ ಕೆಲಸ ಗಿಟ್ಟಿಸಬೇಕೆಂದೇ ಈ ಸೃಜನಶೀಲ ಉಪಾಯವನ್ನು ಹೂಡಿರುವುದಾಗಿ ಹೇಳಿಕೊಂಡಿದ್ದಾಳೆ. ‘ನನ್ನ ಸ್ನೇಹಿತನೊಬ್ಬ ಈ ಕಂಪೆನಿಯ ತಂಡಕ್ಕೆ ತನ್ನನ್ನು ಶಿಫಾರಸು ಮಾಡಿದ್ದ. ಎಲ್ಲರಂತೆ ಇ ಮೇಲ್​ ಕಳಿಸುವ ಬದಲಾಗಿ ತಾನು ಕೇಕ್ ಮೇಲೆ ರೆಸ್ಯೂಮ್ ಮುದ್ರಿಸಿದ್ದೆನಷ್ಟೇ.’ ಎಂದಿದ್ದಾಳೆ.

ಕಂಪೆನಿಯ ಕಾರ್ಪೊರೇಟ್​ ಮುಖ್ಯ ಕಚೇರಿಯಲ್ಲಿ ಯಾವಾಗ ಪಾರ್ಟಿ ನಡೆಯುತ್ತದೆ ಎಂಬುದನ್ನು ತಿಳಿದುಕೊಂಡೇ ಈಕೆ ಈ ಉಪಾಯಕ್ಕೆ ತೆರೆದುಕೊಂಡಿದ್ದಾಳೆ. ಈಕೆಯ ಈ ಉಪಾಯಕ್ಕೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಇದೊಂದು ಅತ್ಯಂತ ಅದ್ಭುತ ಐಡಿಯಾ, ಸೃಜನಶೀಲ ಆಲೋಚನೆ, ಈ ಪರಿಕಲ್ಪನೆ ಬಹಳ ಸುಂದರವಾಗಿದೆ ಎಂದು ಕೆಲವರು ಶ್ಲಾಘಿಸಿದರೆ, ಇನ್ನೂ ಕೆಲವರು, ಇದೆಲ್ಲಾ ಗಿಮಿಕ್​ ಎಂದಿದ್ದಾರೆ.

ಈಕೆಯನ್ನು ಸಂದರ್ಶನಕ್ಕೆ ಕರೆದರೆ ಸಂದರ್ಶಕರು ಏನೆಲ್ಲಾ ಪ್ರಶ್ನೆಗಳನ್ನು ಕೇಳಬಹುದು? ಕೇಕ್​ ಯಾವುದರಿಂದ ಮಾಡಲ್ಪಟ್ಟಿದೆ ಎಂಬುದೇ ಮೊದಲ ಪ್ರಶ್ನೆಯಾಗಿರುತ್ತದೆ ಎಂದು ಮತ್ತೊಬ್ಬರು ತಮಾಷೆ ಮಾಡಿದ್ದಾರೆ.

ರೆಸ್ಯೂಮ್​ ಕಳಿಸುವ ಈ ಕೌಶಲ ನಿಮಗೆ ಮೆಚ್ಚುಗೆಯಾಯಿತೆ? ನಿಮ್ಮ ತಲೆಯಲ್ಲಿ ಈಗ ಏನೆಲ್ಲಾ ಐಡಿಯಾ ಹೊಳೆಯುತ್ತಿರಬಹುದು. ಏನೇ ಆಗಲಿ ಸೃಜನಶೀಲತೆ ನಿಮ್ಮಲ್ಲಿ ಹರಿಯುತ್ತಿರಲಿ.

ಮತ್ತಷ್ಟು ಟ್ರೆಂಡಿಂಗ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ