Viral Video : ಚಲಿಸುವ ಕಲ್ಯಾಣ ಮಂಟಪ; ಬಂತೈ ಬಂತೈ ಮನೆಗೇ ಬಂತೈ, ವಧುವರರು ತಯಾರೇ?

Marriage Hall On Wheels : ಈ ಮೊಬೈಲ್​ ಕಲ್ಯಾಣ ಮಂಟಪವು 200 ಜನರಿಗೆ ಮೀಸಲಾಗಿದೆ. 40/30 ಚದರ ಅಡಿಗಳನ್ನು ಹೊಂದಿರುವ ಇದು ಆಧುನಿಕ ಒಳಾಂಗಣ ವಿನ್ಯಾಸವನ್ನೂ ಹೊಂದಿದೆ. ಎಸಿ, ಲೈಟ್​, ಫರ್ನಿಚರ್ಸ್, ಡೈನಿಂಗ್​ ವ್ಯವಸ್ಥೆ ಎಲ್ಲವೂ ಇಲ್ಲಿದೆ.

Viral Video : ಚಲಿಸುವ ಕಲ್ಯಾಣ ಮಂಟಪ; ಬಂತೈ ಬಂತೈ ಮನೆಗೇ ಬಂತೈ, ವಧುವರರು ತಯಾರೇ?
ಚಲಿಸುವ ಕಲ್ಯಾಣ ಮಂಟಪ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Sep 26, 2022 | 4:14 PM

Viral Video : ‘ಮದುವೆ ಮಾಡಿನೋಡು ಮನೆ ಕಟ್ಟಿ ನೋಡು‘ ಈ ಹಳೆಯ ಗಾದೆ ಈಗಲೂ ಹಸಿಹಸಿಯಾಗಿಯೇ ಇದೆ. ಏಕೆಂದರೆ ಈ ಎರಡೂ ಸಂಗತಿಗಳು ನೀರಿಳಿಸಿಬಿಡುತ್ತವೆ. ಮದುವೆಯನ್ನು ಸರಳಗೊಳಿಸಬೇಕು ಎಂದು ಎಷ್ಟೆಲ್ಲ ನವನವೀನ ಪರಿಕಲ್ಪನೆಗಳನ್ನು ರೂಪಿಸಿದರೂ ಮನೆಮಂದಿಯೆಲ್ಲಾ ಹೈರಾಣುಗೊಳ್ಳುವುದು ಇನ್ನೂ ನಿಂತಿಲ್ಲ. ಆದರೂ ಈ ಸಂಗತಿಗಳನ್ನು ಹಗೂರಗೊಳಿಸಲು ಸಾಕಷ್ಟು ಅನ್ವೇಷಣೆಗಳು ಚಾಲ್ತಿಯಲ್ಲಿ ಇದ್ದೇ ಇರುತ್ತವೆ. ಇದೀಗ ಮದುವೆಗೆ ಸಂಬಂಧಿಸಿ ಒಂದು ಹೊಸ ಪರಿಕಲ್ಪನೆಗೆ ಖ್ಯಾತ ಉದ್ಯಮಿ ಆನಂದ ಮಹೀಂದ್ರಾ ವಾಹ್​​ ಎಂದಿದ್ದಾರೆ. ಈ ವಿಡಿಯೋ ನೋಡಿ ಕಲ್ಯಾಣ ಮಂಟಪವೇ ನೀವಿದ್ದಲ್ಲಿ ಬರುತ್ತದೆ! ಟ್ವಿಟರ್​ ನಲ್ಲಿ ಅವರು ಪೋಸ್ಟ್ ಮಾಡುತ್ತಿದ್ದಂತೆ ವೈರಲ್ ಆಗುತ್ತಿದೆ.

ಮೊಬೈಲ್​ ವಾಶ್​ರೂಮ್, ಮೊಬೈಲ್​ ಕ್ಲಿನಿಕ್, ಮೊಬೈಲ್​ ಸ್ಟೋರ್ಸ್​ ಹೀಗೆ ಇದ್ದಲ್ಲಿಗೇ ಎಲ್ಲವೂ ಚಲಿಸುವಂಥ ಕಾಲದಲ್ಲಿ ಹೊಸದಾದ ಸೇರ್ಪಡೆ ಈ ಮೊಬೈಲ್​ ಮ್ಯಾರೇಜ್ ಹಾಲ್​.  ‘ಈ ಪರಿಕಲ್ಪನೆಯನ್ನು ವಿನ್ಯಾಸ ಮಾಡಿದ ವ್ಯಕ್ತಿಯನ್ನು ಭೇಟಿಮಾಡಲು ನಾನು ಇಚ್ಛಿಸುತ್ತೇನೆ. ಸೃಜನಶೀಲತೆ ಮತ್ತು ವಿಚಾರಪೂರ್ಣತೆಯಿಂದ ಇದು ಕೂಡಿದೆ. ದೂರದ ಪ್ರದೇಶಗಳಿಗೆ ಅನುಕೂಲಕಾರಿಯಾಗಿದೆ ಮತ್ತು ಪರಿಸರಸ್ನೇಹಿಯೂ ಆಗಿದೆ. ಜನಸಂಖ್ಯೆ ಹೆಚ್ಚಿರುವಂಥ ದೇಶಗಳಲ್ಲಿ ಈ ಮಾದರಿ ಅನುಕೂಲ’ ಎಂಬ ನೋಟ್​ನೊಂದಿಗೆ ಈ ವಿಡಿಯೋ ಹಂಚಿಕೊಂಡಿದ್ದಾರೆ ಆನಂದ.

ಈ ಮೊಬೈಲ್​ ಕಲ್ಯಾಣ ಮಂಟಪವು 200 ಜನರಿಗೆ ಮೀಸಲಾಗಿದೆ. 40/30 ಚದರ ಅಡಿಗಳನ್ನು ಹೊಂದಿರುವ ಇದು ಆಧುನಿಕ ಒಳಾಂಗಣ ವಿನ್ಯಾಸವನ್ನೂ ಹೊಂದಿದೆ. ಎಸಿ, ಲೈಟ್​, ಫರ್ನಿಚರ್ಸ್, ಡೈನಿಂಗ್​ ವ್ಯವಸ್ಥೆ ಎಲ್ಲವೂ ಇಲ್ಲಿದೆ. ಹಾಗಾಗಿ ನೆಟ್ಟಗರು ಈ ಪರಿಕಲ್ಪನೆಯನ್ನು ಬಹುವಾಗಿ ಮೆಚ್ಚಿದ್ದಾರೆ.

ನಮ್ಮ ಸುತ್ತಮುತ್ತಲೂ ಇಂಥ ಅನೇಕ ಅಪರೂಪದ ಸಂಗತಿ, ವಿಚಾರ, ಘಟನೆಗಳು ನಡೆಯುತ್ತಲೇ ಇರುತ್ತವೆ. ಆದರೆ ನಮಗೆ ಅವುಗಳ ಕಡೆಗೆ ಗಮನ ಕಡಿಮೆಯೇ. ಆದರೆ ಒಮ್ಮೆ ಅಂತರ್ಜಾಲದಲ್ಲಿ ಇಂಥ ಆವಿಷ್ಕಾರಗಳ ಪ್ರದರ್ಶನವಾಯಿತೋ ಆಗಲೇ ನಾವೂ ವಾಹ್​, ಕ್ಯಾ ಬಾತ್​ ಹೈ ಎನ್ನುತ್ತೇವೆ. ಏಕೆಂದರೆ ನಾವು ಮಲಗಿದಾಗ ಬಿಟ್ಟು ಉಳಿದೆಲ್ಲ ಸಮಯದಲ್ಲಿಯೂ ಮೊಬೈಲ್​ನಲ್ಲಿಯೇ ಕಣ್ಣು ನೆಟ್ಟಿರುತ್ತೇವಲ್ಲ!

ಈ ವಿಷಯ ಬಿಡಿ, ನಿಮ್ಮ ಮನೆಯ ಮದುವೆಗಳಿಗೂ ಈ ಐಡಿಯಾ ಚೆನ್ನಾಗಿದೆಯಲ್ಲವಾ? ಈಗಲೇ ಬುಕ್ ಮಾಡಿ ಮತ್ತೆ!

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:12 pm, Mon, 26 September 22