Viral Video : ಶಾಲಾಬಾಲಕಿಯ ಬ್ಯಾಗಿನೊಳಗೆ ಅಡಗಿ ತರಗತಿಗೆ ಹಾಜರಾಗಿದ್ದ ಈ ನಾಗರಾಜ

Kobra in School Bag : ಹತ್ತನೇ ಕ್ಲಾಸಿನಲ್ಲಿ ಓದುತ್ತಿರುವ ಈ ಮಧ್ಯಪ್ರದೇಶದ ಹುಡುಗಿಗೆ ಶಾಲೆಗೆ ಹೋಗುವಾಗ ಬ್ಯಾಗಿನಲ್ಲಿ ಏನೋ ಚಲಿಸಿದಂಥ ಅನುಭವವಾಗಿದೆ. ಮುಂದೇನಾಯಿತೆಂದು ಈ ವಿಡಿಯೋ ನೋಡಿ.

Viral Video : ಶಾಲಾಬಾಲಕಿಯ ಬ್ಯಾಗಿನೊಳಗೆ ಅಡಗಿ ತರಗತಿಗೆ ಹಾಜರಾಗಿದ್ದ ಈ ನಾಗರಾಜ
ವಿದ್ಯಾರ್ಥಿಯ ಬ್ಯಾಗಿನಿಂದ ನಾಗರಹಾವನ್ನು ಹೊರ ಓಡಿಸುತ್ತಿರುವ ಶಿಕ್ಷಕ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Sep 26, 2022 | 3:16 PM

Viral Video : ಕಮೋಡ್​, ಬಕೆಟ್​, ಸಿಲಿಂಡರ್, ಕೈಚೀಲಗಳು, ಪಾತ್ರೆ, ಹಾಸಿಗೆ, ಕೊಡ, ದಿಂಬು, ಶೂಸು… ಹೀಗೆ ಎಲ್ಲೆಂದರಲ್ಲಿ ಅಡಗಿ ಕುಳಿತುಕೊಳ್ಳುವುದು ಹಾವುಗಳ ಸ್ವಭಾವ. ಎಲ್ಲೇ ಕುಳಿತರೂ ಸಹಜವಾಗಿ ಕಣ್ಣಿಗೆ ಕಾಣದಂಥ ಜಾಗದಲ್ಲಿ ನಮ್ಮಿಂದ ಮರೆಮಾಚಿಕೊಂಡೇ ಕುಳಿತುಕೊಳ್ಳುವ ಚಾಣಾಕ್ಷತನ ಅದರಲ್ಲೂ ನಾಗರಹಾವುಗಳಿಗೆ ಬಹಳ ಚೆನ್ನಾಗಿಯೇ ಸಿದ್ಧಿಸಿದೆ. ಹಾಗಾಗಿಯೇ ಸಾಕಷ್ಟು ಜನರು ಹಾವುಕಡಿತಕ್ಕೆ ಒಳಗಾಗುವುದು. ಇದೀಗ ವೈರಲ್ ಆಗಿರುವ ಈ ನಾಗರಹಾವಿನ ವಿಡಿಯೋ ಗಮನಿಸಿ. ಶಾಲಾಬಾಲಕಿ ಎಂದಿನಂತೆ ಶಾಲೆಗೆ ಬಂದಿದ್ದಾಳೆ. ಬರುವಾಗಲೇ ಆಕೆಗೆ ಅನುಮಾನ ಉಂಟಾಗಿದೆ. ಸದ್ಯ ದಾರಿಯಲ್ಲಿ ಈಕೆ ಬ್ಯಾಗಿನ ಝಿಪ್ ತೆಗೆದು ಪರೀಕ್ಷಿಸಲು ಹೋಗಿಲ್ಲ!

कक्षा 10 की छात्रा कु. उमा रजक के बैग से, घर से स्कूल आकर जैसे ही बैग खोला तो छात्रा को कुछ आभाष हुआ तो शिक्षक से शिकायत की, कि बस्ते में अंदर कुछ है, छात्रा के बैग को स्कूल के बाहर ले जाकर खोला तो बैग के अंदर से एक नागिन बाहर निकली, यह घटना दतिया जिले के बड़ोनी स्कूल की है। pic.twitter.com/HWKB3nktza

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಮಧ್ಯಪ್ರದೇಶದ ಶಾಜಾಪುರದ ಬದೋನಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಮನೆಯಿಂದ ಶಾಲೆಗೆ ಹೊರಡುವಾಗ ಉಮಾ ರಾಜಕ್ ಎಂಬ 10ನೇ ತರಗತಿಯ ವಿದ್ಯಾರ್ಥಿನಿಗೆ ತನ್ನ ಬ್ಯಾಗಿನಲ್ಲಿ ಏನೋ ಚಲಿಸಿದಂಥ ಅನುಭವವಾಗಿದೆ. ಸಂಭಾಳಿಸಿಕೊಂಡು ಹಾಗೇ ಶಾಲೆಗೆ ಬಂದಿದ್ದಾಳೆ. ನಂತರ ಶಿಕ್ಷಕರಿಗೆ ತಿಳಿಸಿದ್ದಾಳೆ. ಅವರು ಬ್ಯಾಗ್​ ಸಮೇತ ಹೊರಬಂದಿದ್ದಾರೆ. ಪುಸ್ತಕಗಳನ್ನೆಲ್ಲಾ ಹೊರತೆಗೆಯಲು ನೋಡಿದಾಗ ಅಡಗಿ ಕುಳಿತಿರುವುದು ಹಾವು ಎಂದು ಗೊತ್ತಾಗಿದೆ. ಎಷ್ಟೇ ಜೋರಾಗಿ ಎಸೆದರೂ ಅಡಗಿಕೊಂಡ ನಾಗರಾಜ ಬ್ಯಾಗಿನಿಂದ ಮಾತ್ರ ಹೊರಬರಲು ಬಿಲ್​ಕುಲ್​ ಒಪ್ಪಿಲ್ಲ! ಕೆಲ ಪ್ರಯತ್ನಗಳ ನಂತರ ಅಂತೂ ಬ್ಯಾಗಿನಿಂದ ಹೊರಹರಿದು ಹೋಗಿದ್ದಾನೆ.

ಹಾವು ಸಣ್ಣದಿರಬಹುದು ಎಂದು ಅಲ್ಲಿ ನೆರೆದವರೆಲ್ಲ ಭಾವಿಸಿದ್ದರು. ಆದರೆ ಅದು ದೊಡ್ಡ ನಾಗರಹಾವೇ ಆಗಿತ್ತು. ಸದ್ಯ ಯಾರ ಮೇಲೂ ದಾಳಿ ಮಾಡಲು ಆ ನಾಗರಹಾವು ಮುಂದಾಗಿಲ್ಲ ಮತ್ತು ಅಲ್ಲಿದ್ದವರೆಲ್ಲ ಅದರ ಮೇಲೆ ದಾಳಿ ಮಾಡಲೂ ಹೋಗಿಲ್ಲ. ಪರಸ್ಪರ ಅಪಾಯದಿಂದ ಪಾರಾಗಿದ್ದಾರೆ.

ನಾಗರಹಾವು ಒಮ್ಮೆ ಬಾಯಿತೆರೆದರೆ, 20 ಜನರನ್ನು ತನ್ನ ವಿಷದಿಂದ ಕೊಲ್ಲುವ ಭಯಂಕರ ಶಕ್ತಿ ಹೊಂದಿದೆ!

ನಿಮಗೀಗ ನಾಗರಹಾವಿನ ಘಟನೆಗಳು ಕಣ್ಮುಂದೆ ಬರುತ್ತಿವೆಯೇ? ಹುಷಾರು.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 3:13 pm, Mon, 26 September 22