ವಿಜ್ಞಾನವನ್ನು ಹೀಗೆ ಕಲಿಸುವ ಇಂಥ ಯುವಶಿಕ್ಷಕರು ಬೇಕು ಎನ್ನುತ್ತಿರುವ ನೆಟ್ಟಿಗರು
Teacher : ವಿಜ್ಞಾನದಂಥ ವಿಷಯಗಳನ್ನು ಮಕ್ಕಳ ಕೈಗೆ ಸುಲಿದ ಬಾಳೆಹಣ್ಣಿನಂತೆ ಕೈಗಿಡುವ ಇಂಥ ಯುವ ಶಿಕ್ಷಕರು ನಮ್ಮ ಮಕ್ಕಳಿಗೆ ಬೇಕಿದೆ. ಇಂಗ್ಲಿಷ್ ಗೊತ್ತಿದ್ದ ಮಾತ್ರಕ್ಕೆ ಪಟಪಟನೆ ಪಠ್ಯವನ್ನು ಓದಿ ಮುಂದಿನ ಕ್ಲಾಸಿಗೆ ಓಡಿಹೋಗುವ ಶಿಕ್ಷಕರಲ್ಲ.
Viral Video : ಶಿಕ್ಷಕ ವೃತ್ತಿಯೆನ್ನುವುದು ಎಲ್ಲಕ್ಕಿಂತ ಶ್ರೇಷ್ಠ. ಸಂಬಳಕ್ಕಾಗಿ ಮಾಡುವ ವೃತ್ತಿಗಳಂತೆ ಅದು ಅಲ್ಲವೇ ಅಲ್ಲ. ಮಕ್ಕಳ ಭವಿಷ್ಯಕ್ಕಾಗಿ ತಮ್ಮನ್ನೇ ತಾವು ಅಡವಿಟ್ಟುಕೊಂಡು ಮಾಡುವಂಥ ಪ್ರೀತಿಯ ವೃತ್ತಿಯದು. ಹೀಗೆ ಗ್ರಹಿಸಿ ತೊಡಗಿಕೊಳ್ಳುವ ಅನೇಕ ಶಿಕ್ಷಕರು ನಮ್ಮ ನಡುವೆ ಇನ್ನೂ ಇದ್ದಾರೆ ಎನ್ನುವುದೇ ಬದುಕಿನ ಬಗ್ಗೆ ಎಷ್ಟೋ ಭರವಸೆಯನ್ನು ಕೊಡುತ್ತದೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ.
He is a real hardcore teacher and not the ones who just want to shine speaking English. pic.twitter.com/BMj2zAIEog
ಇದನ್ನೂ ಓದಿ— Deepak Prabhu (@ragiing_bull) November 8, 2022
ದೀಪಕ್ ಪ್ರಭು ಎನ್ನುವವರು ಈ ವಿಡಿಯೋ ಟ್ವೀಟ್ ಮಾಡಿದ್ದಾರೆ. ವಿಜ್ಞಾನದಂಥ ಕಠಿಣ ವಿಷಯಗಳನ್ನು ಮಕ್ಕಳಿಗೆ ಹೇಗೆ ಆಸಕ್ತಿಕರವಾಗಿ ತಿಳಿಸಿಕೊಡಬೇಕು ಎನ್ನುವುದನ್ನು ಈ ಶಿಕ್ಷಕರನ್ನು ನೋಡಿ ಕಲಿಯಬೇಕು. ಈ ವಿಡಿಯೋದಲ್ಲಿ ಭೌತಶಾಸ್ತ್ರವನ್ನು ಪ್ರಯೋಗದ ಮೂಲಕ ಪಾಠ ಮಾಡುತ್ತಿರುವುದನ್ನು ಗಮನಿಸಿ. ವಕ್ರೀಭವನ ಪ್ರಕ್ರಿಯೆಯನ್ನು ಸರಳ ಪ್ರಯೋಗದ ಮೂಲಕ ವಿವರಿಸುತ್ತಿದ್ದಾರೆ.
ಇವರ ಶ್ರದ್ಧೆ, ಪ್ರೀತಿ, ಉತ್ಸಾಹ ಮತ್ತು ಗಂಭೀರತೆಯನ್ನು ನೋಡಿದ ನೆಟ್ಟಿಗರು ಇವರ ಆಸ್ಥೆಯನ್ನು ಶ್ಲಾಘಿಸುತ್ತಿದ್ದಾರೆ. ಹೀಗೆ ಪಾಠ ಮಾಡುವ ಶಿಕ್ಷಕರ ಸಂತತಿ ಹೆಚ್ಚಬೇಕು ಎಂದು ಆಶಿಸುತ್ತಿದ್ದಾರೆ. ಅದರಲ್ಲೂ ಯುವಜನತೆ ಈ ವೃತ್ತಿಗೆ ಬರಬೇಕು ಎಂದು ಹಾರೈಸುತ್ತಿದ್ದಾರೆ. 80,000ಕ್ಕಿಂತಲೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ. ಇಂಗ್ಲಿಷ್ ಬರುತ್ತದೆ ಎಂದಮಾತ್ರಕ್ಕೆ ಬಡಬಡಿಸಿ ಹೋಗುವ ಅದೆಷ್ಟೋ ಶಿಕ್ಷಕರು ನಮ್ಮ ನಡುವೆ ಇದ್ದಾರೆ. ಆದರೆ ಇವರು ಮಾತ್ರ ಅಪರೂಪದಲ್ಲಿ ಅಪರೂಪ. ಇವರಿಗೆ ಒಳ್ಳೆಯದಾಗಲಿ ಎಂದಿದ್ದಾರೆ ಹಲವರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 2:38 pm, Thu, 10 November 22