ಬೈಕ್​ ಚಕ್ರದೊಳಗೆ ಸಿಲುಕಿಕೊಂಡ ಕೋತಿ; ರಕ್ಷಿಸಿದ ಉತ್ತರ ಪ್ರದೇಶದ ಸ್ಥಳೀಯರು

Monkey gets stuck in wheel : ಬೈಕ್​ ಸವಾರ ತನ್ನ ಪಾಡಿಗೆ ತಾ ವೇಗದಲ್ಲಿ, ಕೋತಿಯೂ ತನ್ನ ಪಾಡಿಗೆ ತಾ ರಸ್ತೆಯಲ್ಲಿ. ಇಬ್ಬರೂ ಚಲಿಸುತ್ತಿದ್ದಾರೆ. ಆಗ ಕೋತಿ ಚಕ್ರದೊಳಗೆ ಸಿಲುಕಿಬಿಟ್ಟಿದೆ. ನಂತರ ಸ್ಥಳೀಯರು ಹೇಗೋ ಇದನ್ನು ಬದುಕಿಸಿದ್ದಾರೆ.

ಬೈಕ್​ ಚಕ್ರದೊಳಗೆ ಸಿಲುಕಿಕೊಂಡ ಕೋತಿ; ರಕ್ಷಿಸಿದ ಉತ್ತರ ಪ್ರದೇಶದ ಸ್ಥಳೀಯರು
Monkey gets stuck in wheel of speeding bike in Uttar Pradeshs Badosarai rescued later
Follow us
TV9 Web
| Updated By: ಶ್ರೀದೇವಿ ಕಳಸದ

Updated on:Nov 09, 2022 | 12:25 PM

Viral : ಪಾಪ ಕೋತಿಗಾದರೂ ಏನು ಗೊತ್ತಿತ್ತು, ಅತ್ತ ಬೈಕ್​ ಸವಾರನಿಗಾದರೂ ಏನು ಗೊತ್ತಿತ್ತು? ಅವನ ವೇಗದಲ್ಲಿ ಅವ ಹೋಗುತ್ತಿದ್ದ, ಕೋತಿ ತನ್ನ ಪಾಡಿಗೆ ತಾನು ರಸ್ತೆ ದಾಟುತ್ತಿತ್ತು. ಆದರೆ ಅಪಘಾತವೆಂದರೆ ಹೇಳಿಕೇಳಿ ಆಗುವಂಥದ್ದೇ? ಹೀಗೆ ಅವರವರ ಪಾಡಿಗೆ ಹೊರಟಾಗಲೇ ಸಂಭವಿಸುವಂಥದ್ದು. ವೇಗವಾಗಿ ಬಂದ ಬೈಕ್​ನ ಮುಂದಿನ ಚಕ್ರದೊಳಗೆ ರಸ್ತೆ ದಾಟುತ್ತಿದ್ದ ಈ ಕೋತಿ ಸಿಲುಕಿಕೊಂಡುಬಿಟ್ಟಿದೆ. ಎಷ್ಟೋ ಹೊತ್ತಿನ ತನಕ ಇದು ನರಳಿದೆ. ಸ್ಥಳೀಯರು ಸೇರಿದ ಚಕ್ರದೊಳಗಿನಿಂದ ಅದನ್ನು ಪಾರುಮಾಡಲು ಶ್ರಮವಹಿಸಿದ್ದಾರೆ.

ಈ ಘಟನೆ ಉತ್ತರಪ್ರದೇಶದ ಬದೋಸರಾಯ್‌ನಲ್ಲಿ ನಡೆದಿದೆ. ಹಗಲಿನಲ್ಲಿಯೇ ಇಂಥ ಅವಘಡ ನಡೆದಿರುವುದು. ಸದ್ಯ ಬೈಕ್​ ಸವಾರ ಬ್ರೇಕ್ ಹಾಕಿದ್ದಾನೆ. ಆದರೆ ಹೀಗೆ ಚಕ್ರದೊಳಗೆ ಸಿಲುಕಿಕೊಂಡುಬಿಟ್ಟಿದೆ. ನಂತರ ಸ್ಥಳೀಯರೆಲ್ಲರೂ ಸೇರಿ ಉಪಾಯದಿಂದ ಅದನ್ನು ಚಕ್ರದಿಂದ ಬಿಡಿಸಿದ್ದಾರೆ. ಅಷ್ಟೊತ್ತನಕ ಅದು ಎಷ್ಟು ನೋವನ್ನು ಅನುಭವಿಸಿತೋ ಏನೋ.

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

ಬೈಕ್ ಸವಾರಿ ವಿಚಿತ್ರ ಉತ್ಸಾಹ ತರುತ್ತದೆ ನಿಜ. ಆದರೆ ಮನುಷ್ಯರಿಗಾದರೆ ದೂರದಿಂದಲೇ ಗ್ರಹಿಸಿ ಸರಿದಾರು. ಕೆಲವೊಮ್ಮೆ ಪ್ರಾಣಿಗಳಿಗೆ ಈ ಬಗ್ಗೆ ಅರಿವಾಗುವುದಿಲ್ಲ. ಹಾಗಾಗಿ ಮನುಷ್ಯರು ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಚಲಿಸುವುದು ಒಳ್ಳೆಯದು.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:25 pm, Wed, 9 November 22