ಒದೆಸಿಕೊಂಡವಳು ಮುಂದೆ ಹೋದಳು ಒದ್ದವಳು ಹಿಂದೆ ಬಿದ್ದಳು; ಇನ್​ಸ್ಟಂಟ್​ ಕರ್ಮ ಎಂದ ನೆಟ್ಟಿಗರು

Girl Falls Off Bike : ಪ್ರಯಾಣಿಸುವುದು ಖುಷಿಗಾಗಿ. ನಮ್ಮ ಪಾಡಿಗೆ ನಾವು ಹೋಗುತ್ತಿರಬೇಕು. ಸುಮ್ಮನೇ ಹೋಗುತ್ತಿದ್ದವರನ್ನು ತಡವಿದರೆ ಏನಾಗುತ್ತದೆ ಈ ವಿಡಿಯೋ ನೋಡಿ.

ಒದೆಸಿಕೊಂಡವಳು ಮುಂದೆ ಹೋದಳು ಒದ್ದವಳು ಹಿಂದೆ ಬಿದ್ದಳು; ಇನ್​ಸ್ಟಂಟ್​ ಕರ್ಮ ಎಂದ ನೆಟ್ಟಿಗರು
Girl Falls Off Bike After Kicking Another Rider
Follow us
TV9 Web
| Updated By: Digi Tech Desk

Updated on:Nov 09, 2022 | 12:29 PM

Viral Video : ಉಪದ್ವ್ಯಾಪ ಮಾಡಬೇಕು ಆದರೆ ಹೀಗೆ ಪ್ರಾಣಕ್ಕೆ ಕುತ್ತು ತರುವಂಥವುಗಳನ್ನು ಮಾಡಬಾರದು ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿ. ಈ ಯುವತಿ ಬೈಕ್​ನ ಹಿಂದೆ ಕುಳಿತು ಸವಾರಿ ಮಾಡುತ್ತಿದ್ದಾಳೆ. ಪಕ್ಕದಲ್ಲಿ ಬಂದ ಬೈಕ್​ಗೆ ಕಾಲಿನಿಂದ ಒದೆಯುತ್ತಾಳೆ. ಆದರೆ ಆ ಒದೆತಕ್ಕೆ ತಾನೇ ಬ್ಯಾಲೆನ್ಸ್​ ಕಳೆದುಕೊಂಡು ರಸ್ತೆ ಬೀಳುತ್ತಾಳೆ. ಹಿಂದಿನಿಂದ ಬರುತ್ತಿರುವ ಕಾರು ಇದನ್ನು ವಿಡಿಯೋ ಮಾಡಿಕೊಂಡಿದೆ. ಅಕಸ್ಮಾತ್ ಆ ಕಾರು ನಿಯಂತ್ರಣ ಕಳೆದುಕೊಂಡು ಆಕೆಯ ಮೇರೆ ಹರಿದಿದ್ದರೆ?

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

ಈ ವಿಡಿಯೋ ಅನ್ನು ರೆಡ್ಡಿಟ್​ನಲ್ಲಿ ಹಂಚಿಕೊಳ್ಳಲಾಗಿದೆ. ನಂತರ ಟ್ವಿಟರ್​ನಲ್ಲಿ. ನೆಟ್ಟಿಗರು ಈಕೆಯನ್ನು ಸರಿಯಾಗಿ ಬೈದಿದ್ದಾರೆ. ಇಂಥ ಹುಚ್ಚಾಟದ ಪರಿಣಾಮ ಏನಾಗುತ್ತದೆ ಎನ್ನುವುದನ್ನು ಸ್ವತಃ ಕಂಡುಕೊಂಡಳಲ್ಲ ಒಳ್ಳೆಯದೇ ಆಯಿತು ಎಂದಿದ್ದಾರೆ. ದೇವರೇ ನಿನಗೆ ಧನ್ಯವಾದ ತಕ್ಷಣವೇ ಅವಳ ಕರ್ಮದ ಫಲವನ್ನು ಕೊಟ್ಟಿದ್ದೀಯಾ ಎಂದಿದ್ದಾರೆ ಇನ್ನೂ ಒಬ್ಬರು. ಇನ್ನಾದರೂ ಇಂಥವುಗಳಿಂದ ದೂರವಿರುವುದನ್ನು ಈ ಯುವತಿ ಕಲಿತರೆ ಸಾಕು ಎಂದಿದ್ದಾರೆ ಮಗದೊಬ್ಬರು. ದೇವರಿದ್ದಾನೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ ಎಂದಿದ್ದಾರೆ ಇನ್ನೂ ಒಬ್ಬರು. ಅವಳ ಬೆನ್ನಿಗಿರುವ ಬ್ಯಾಗ್​ ಅವಳನ್ನು ಕಾಪಾಡಿದೆ ಸದ್ಯ ಎಂದಿದ್ದಾರೆ ಮತ್ತೊಬ್ಬರು.

ಪ್ರಯಾಣಿಸುವುದು ನಮ್ಮ ಖುಷಿಗಾಗಿ ಇನ್ನೊಬ್ಬರನ್ನು ತಡುವಲು ಖಂಡಿತ ಅಲ್ಲ. ಹೀಗೇನಾದರೂ ಮಾಡಿದರೆ ಅಪಾಯ ಯಾರಿಗೆ?

ನಿಮಗೇನು ಅನ್ನಿಸಿತು ಈ ವಿಡಿಯೋ ನೋಡಿ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 11:48 am, Wed, 9 November 22