ಐಎಎಸ್​ ಅಧಿಕಾರಿಯ ತಲೆಮುಟ್ಟಿ ಆಶೀರ್ವದಿಸಿದ ಹಿರಿಯ ಮಹಿಳೆ

IAS Officer : ಎಂಥ ಅಪರೂಪದ ದೃಶ್ಯ ಇದು. ಕೆಲವರು ಮಾತ್ರ ಹೀಗೆ ಹೃತ್ಪೂರ್ವಕವಾದ ಆಶೀರ್ವಾದಗಳನ್ನು ಪಡೆಯುತ್ತಾರೆ ಎಂದಿದ್ದಾರೆ ಒಬ್ಬರು. ನಿಮ್ಮೊಳಗಿನ ಉತ್ತಮ ಮನುಷ್ಯ ಹೀಗೆ ಸದಾ ಜೀವಂತವಾಗಿರಲಿ ಎಂದು ಮತ್ತೊಬ್ಬರು ಹೇಳಿದ್ದಾರೆ.

ಐಎಎಸ್​ ಅಧಿಕಾರಿಯ ತಲೆಮುಟ್ಟಿ ಆಶೀರ್ವದಿಸಿದ ಹಿರಿಯ ಮಹಿಳೆ
IAS officer shares pic of elderly woman blessing him at his office
Follow us
TV9 Web
| Updated By: ಶ್ರೀದೇವಿ ಕಳಸದ

Updated on:Nov 08, 2022 | 5:23 PM

Viral : ಐಎಎಸ್ ಅಧಿಕಾರಿಯೊಬ್ಬರನ್ನು ಅವರ ಕಚೇರಿಯಲ್ಲಿ ಹಿರಿಯ ಮಹಿಳೆಯೊಬ್ಬರು ಅವರನ್ನು ಆಶೀರ್ವದಿಸಿದ ಫೋಟೋ ಇದೀಗ ವೈರಲ್ ಆಗುತ್ತಿದೆ. 31,000ಕ್ಕಿಂತಲೂ ಹೆಚ್ಚು ಜನರು ಈ ಫೋಟೋ ಟ್ವೀಟ್ ಅನ್ನು ಇಷ್ಟಪಟ್ಟಿದ್ದಾರೆ. ಅನೇಕರು ಇದನ್ನು ರೀಟ್ವೀಟ್ ಮಾಡಿದ್ದಾರೆ. ನೆಟ್ಟಿಗರು ಈ ಹೃದಯಸ್ಪರ್ಶಿಯಾದ ಗಳಿಗೆಗಳನ್ನು ಪ್ರಶಂಸಿಸುತ್ತಿದ್ದಾರೆ.

ಕೇರಳದ ಆಲೆಪ್ಪಿಯ ಜಿಲ್ಲಾಧಿಕಾರಿ ಕೃಷ್ಣ ತೇಜ ಅವರು ಸೋಮವಾರದಂದು ಇದನ್ನು ಟ್ವೀಟ್ ಮಾಡಿದ್ದಾರೆ. ಕಾರ್ಯನಿಮಿತ್ತ ಇವರ ಕಚೇರಿಗೆ ಬಂದ ಈ ಮಹಿಳೆ ಹೊರಡುವಾಗ ಹೀಗೆ ಆಶೀರ್ವದಿಸಿದ್ದಾರೆ. ಪ್ರತಿಯಾಗಿ ತಲೆ ತಗ್ಗಿಸಿ ಗೌರವ ಸೂಚಿಸಿದ್ದಾರೆ ಅಧಿಕಾರಿ. ಅವರ ಸಹಾಯಕರು ಈ ಫೋಟೋ ತೆಗೆದಿದ್ದಾರೆ.

ನೆಟ್ಟಿಗರು ಈ ಫೋಟೋ ನೋಡಿ ತಮ್ಮ ಪ್ರೀತಿ ವ್ಯಕ್ತಪಡಿಸಿದ್ದಾರೆ. ಎಂಥ ಅಪರೂಪದ ದೃಶ್ಯ ಇದು. ಕೆಲವರು ಮಾತ್ರ ಹೀಗೆ ಹೃತ್ಪೂರ್ವಕವಾದ ಆಶೀರ್ವಾದಗಳನ್ನು ಪಡೆಯುತ್ತಾರೆ ಎಂದಿದ್ದಾರೆ ಒಬ್ಬರು. ನಿಮ್ಮೊಳಗಿನ ಉತ್ತಮ ಮನುಷ್ಯ ಹೀಗೆ ಸದಾ ಜೀವಂತವಾಗಿರಲಿ ಎಂದು ಮತ್ತೊಬ್ಬರು ಹೇಳಿದ್ದಾರೆ. ಕೃಷ್ಣ ಅವರು ಉತ್ತಮ ಮತ್ತು ಪ್ರಾಮಾಣಿಕ ವ್ಯಕ್ತಿ ಅವರಿಗೆ ಒಳ್ಳೆಯದಾಗಲಿ ಎಂದಿದ್ದಾರೆ ಮಗದೊಬ್ಬರು.

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ 

Published On - 5:23 pm, Tue, 8 November 22