ಬೈಕ್​ ಸ್ಟಿಕರ್​; ಯುಪಿಎಸ್​ಸಿ ಆಕಾಂಕ್ಷಿಗಳಿಗೆ ಹಾರೈಸಲು ಹೀಗೊಂದು ಉಪಾಯ ಕಂಡುಕೊಂಡ ಐಎಎಸ್​ ಅಧಿಕಾರಿ

UPSC : ಐಎಎಸ್​ ಅಧಿಕಾರಿ ಅವನೀಶ ಶರಣ ಅವರ ಈ ನಡೆಗೆ, ‘ಕಷ್ಟಪಟ್ಟು ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಅನೇಕರಿಗೆ ನಿಮ್ಮ ಈ ಸ್ಪಂದನೆ ಶಕ್ತಿ ನೀಡುವಲ್ಲಿ ಎರಡು ಮಾತಿಲ್ಲ, ದೇವರು ನಿಮ್ಮನ್ನು ಚೆನ್ನಾಗಿಟ್ಟಿರಲಿ’ ಎಂದಿದ್ದಾರೆ ನೆಟ್ಟಿಗರು.

ಬೈಕ್​ ಸ್ಟಿಕರ್​; ಯುಪಿಎಸ್​ಸಿ ಆಕಾಂಕ್ಷಿಗಳಿಗೆ ಹಾರೈಸಲು ಹೀಗೊಂದು ಉಪಾಯ ಕಂಡುಕೊಂಡ ಐಎಎಸ್​ ಅಧಿಕಾರಿ
IAS Awanish Sharan shares about a bike sticker netizens react
Follow us
TV9 Web
| Updated By: ಶ್ರೀದೇವಿ ಕಳಸದ

Updated on:Nov 08, 2022 | 10:42 AM

Viral : ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವುದೆಂದರೆ ಎಷ್ಟು ಕಷ್ಟ ಎನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವುದೇ. ಅನೇಕ ಪ್ರಯತ್ನಗಳ ನಂತರವೂ ಅಲ್ಲಿ ಫಲ ಸಿಗುವ ಬಗ್ಗೆ ಖಚಿತತೆ ಇರುವುದಿಲ್ಲ. ಆದರೂ ಆಕಾಂಕ್ಷಿಗಳು ಈ ಸವಾಲನ್ನು ದಿಟ್ಟವಾಗಿ ತೆಗೆದುಕೊಳ್ಳಲೇಬೇಕು. ಐಎಎಸ್​ ಅಧಿಕಾರಿ ಅವನೀಶ ಶರಣ್​ ತಮ್ಮ ಬೈಕ್​ ಮೇಲೆ ಸ್ಟಿಕರ್ ಅಂಟಿಸಿಕೊಂಡು ಪೋಸ್ಟ್ ಮಾಡಿದ ಫೋಟೋ ಇದೀಗ ವೈರಲ್ ಆಗುತ್ತಿದೆ. UPSC-Aspirants ಎಂಬ ಸ್ಟಿಕರ್ ಮೂಲಕ ಯುಪಿಎಸ್​ಸಿ ಅಭ್ಯರ್ಥಿಗಳಿಗೆ ಶುಭ ಹಾರೈಸಿದ್ದಾರೆ. ನೆಟ್ಟಿಗರು ಇದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ.

ಸಾಮಾನ್ಯವಾಗಿ ಬೈಕ್​ಗಳ ಮೇಲೆ ತಮ್ಮ ಅಥವಾ ಕುಟುಂಬಸ್ಥರ ಹೆಸರುಗಳನ್ನು ಅಥವಾ ಇನ್ನೇನೋ ಟ್ಯಾಗ್​​ಲೈನ್​ಗಳನ್ನು ಬೈಕ್​ಗಳ ಮೇಲೆ ಅಂಟಿಸಿಕೊಂಡಿರುವುದನ್ನು ನೋಡಿರುತ್ತೀರಿ. ಆದರೆ ಐಎಎಸ್​ ಅಧಿಕಾರಿ ಅವನೀಶ ಶರಣ್ ತಮ್ಮ ಬೈಕಿಗೆ ಅಂಟಿಸಿಕೊಂಡ ಈ ಸ್ಟಿಕರ್​ ನೆಟ್ಟಿಗರನ್ನು ಕುತೂಹಲಕ್ಕೆ ಬೀಳಿಸಿದೆ. ಜೊತೆಗೆ ಯುಪಿಎಸ್​ಸಿ ಅಭ್ಯರ್ಥಿಗಳಿಗೆ ಶಕ್ತಿ ಮತ್ತು ಪ್ರೋತ್ಸಾಹವನ್ನು ನೀಡಿದೆ.

ಛತ್ತೀಸ್​ಗಢ ಕೇಡರ್​ನಲ್ಲಿರುವ ಈ ಅಧಿಕಾರಿಗಳ ಈ ನಡೆಯನ್ನು ಕೆಲವರು ಶ್ಲಾಘಿಸಿದ್ದಾರೆ. ಆಗಾಗ ಅವನೀಶ ಸಾಮಾಜಿಕ ಜಾಲತಾಣದಲ್ಲಿ ಆಕಸ್ತಿಕರ ಮತ್ತು ಪ್ರೇರಣಾದಾಯಕ ವಿಷಯಗಳನ್ನು ಪೋಸ್ಟ್​ ಮಾಡುವ ಮೂಲಕ ಜನಜನಿತರಾಗಿದ್ದಾರೆ.

ಇದೊಂದು ಸಕಾರಾತ್ಮಕ ನಡೆ, ಕೆಲವರು ಮಾತ್ರ ಇತರರ ಬಗ್ಗೆ ಯೋಚಿಸುತ್ತಾರೆ ಎಂದಿದ್ದಾರೆ ಒಬ್ಬರು. ಪೇಪರ್​ ಕೊಟ್ಟುಬಿಡಿ ಎಂದು ಹಗೂರಾಗಿ ಮಾತನಾಡಿದ್ದಾರೆ ಇನ್ನೂ ಒಬ್ಬರು. ಕಷ್ಟಪಟ್ಟು ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಅನೇಕರಿಗೆ ನಿಮ್ಮ ಈ ಸ್ಪಂದನೆ ಶಕ್ತಿ ನೀಡುವಲ್ಲಿ ಎರಡು ಮಾತಿಲ್ಲ, ದೇವರು ನಿಮ್ಮನ್ನು ಚೆನ್ನಾಗಿಟ್ಟಿರಲಿ ಎಂದಿದ್ದಾರೆ ಮತ್ತೊಬ್ಬರು.

ಇಂದು ಒಟ್ಟಾರೆಯಾಗಿ ಬೇಕಿರುವುದು ಪರಸ್ಪರ ಒಳಿತನ್ನು ಹಾರೈಸುವ ವಿಶಾಲ ಮನೋಭಾವ.

ನಿಮಗೇನು ಅನ್ನಿಸಿತು ಈ ಪೋಸ್ಟ್​ ನೋಡಿ?

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 10:42 am, Tue, 8 November 22

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್