AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

70ರ ವ್ಯಕ್ತಿ ಹೆಂಡತಿಯೆದುರು ‘ಅರೇಬಿಕ್ ಕುತು’ ನೃತ್ಯ ಮಾಡಿದ ವಿಡಿಯೋ ವೈರಲ್

Arabic Kuthu : ‘ನಿಮ್ಮೊಳಗಿನ ಮಗುವನ್ನು ಸದಾ ಜೀವಂತವಾಗಿರಿಸಿಕೊಂಡರೆ ನಿಮ್ಮ ಸುತ್ತಮುತ್ತಲಿನದೆಲ್ಲ ಖುಷಿಯಿಂದ ಕೂಡಿರುತ್ತದೆ. 70ರ ನನ್ನ ಅಪ್ಪ 10ರಂತೆ. ನೋಡಿ ನನ್ನ ಅಪ್ಪ ಅಮ್ಮ.’ ಮಗಳು ಹಾಕಿದ ವಿಡಿಯೋ ವೈರಲ್.

70ರ ವ್ಯಕ್ತಿ ಹೆಂಡತಿಯೆದುರು ‘ಅರೇಬಿಕ್ ಕುತು’ ನೃತ್ಯ ಮಾಡಿದ ವಿಡಿಯೋ ವೈರಲ್
holesome Video Of Elderly Man Dancing For His Wife On Arabic Kuthu
TV9 Web
| Updated By: ಶ್ರೀದೇವಿ ಕಳಸದ|

Updated on:Nov 08, 2022 | 12:53 PM

Share

Viral Video : ಉತ್ಸಾಹ ಎನ್ನುವುದು ಪರಸ್ಪರ ಹೊಮ್ಮುವಂಥದ್ದು. ವಯಸ್ಸು ಏರುತ್ತಿದ್ದಂತೆ ನನಗೆ ನೀ ನಿನಗೆ ನಾ ಎನ್ನುವುದು ಗಂಡಹೆಂಡತಿಯಲ್ಲಿ ಅನಿವಾರ್ಯವಾಗುತ್ತಿದ್ದಂತೆ ಆಗಾಗ ಸಣ್ಣಸಣ್ಣ ಖುಷಿಗಾಗಿ ಉಪಾಯಗಳನ್ನು ಹೂಡಲೇಬೇಕಾಗುತ್ತದೆ. ಈಗ ನೋಡಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ಈ 70ರ ಅಜ್ಜ, ತನ್ನ ಹೆಂಡತಿಗಾಗಿ  ಬೀಸ್ಟ್​ ಸಿನೆಮಾದ ಅರೇಬಿಕ್​ ಕುತಿ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಮಿಲಿಯನ್​ ಜನ ನೋಡಿ ಖುಷಿಪಡುತ್ತಿದ್ದಾರೆ.

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!
View this post on Instagram

A post shared by Shruthi Vasudevan? (@optimistic_chatterbox)

ವಿನಂತಿಯ ಮೇರೆಗೆ ಈ ವಿಡಿಯೋ ಅಪ್​ಲೋಡ್ ಮಾಡಲಾಗುತ್ತಿದೆ. ‘ನಿಮ್ಮೊಳಗಿನ ಮಗುವನ್ನು ಸದಾ ಜೀವಂತವಾಗಿರಿಸಿಕೊಂಡರೆ ನಿಮ್ಮ ಸುತ್ತಮುತ್ತಲಿನ ವಾತಾವರಣ ತಾನಾಗಿಯೇ ಖುಷಿಯಿಂದ ಕೂಡಿರುತ್ತದೆ. 70ರ ನನ್ನ ಅಪ್ಪ 10ರಂತೆ. ನೋಡಿ ನನ್ನ ಅಪ್ಪ ಅಮ್ಮ.’ ಎಂಬ ಒಕ್ಕಣೆಯನ್ನು ಮಗಳು ಶ್ರುತಿ ವಾಸುದೇವನ್​ ಈ ವಿಡಿಯೋಗೆ ಬರೆದು ಅಪ್​ಲೋಡ್ ಮಾಡಿದ್ಧಾರೆ.

ನೆಟ್ಟಿಗರಂತೂ ಚಪ್ಪಾಳೆ ತಟ್ಟುತ್ತಲೇ ಇದ್ಧಾರೆ. ಈತನಕ 11 ಮಿಲಿಯನ್​ಗಿಂತಲೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ. 7 ಲಕ್ಷಕ್ಕೂ ಹೆಚ್ಚು ಜನರು ಇದನ್ನು ಇಷ್ಟಪಟ್ಟಿದ್ದಾರೆ. ಅನೇಕರು ಖುಷಿಯಿಂದ ಪ್ರತಿಕ್ರಿಯಿಸಿದ್ದಾರೆ. ‘ಎಂಥ ಚೆಂದದ ವಿಡಿಯೋ ಇದು, ನನ್ನ ಈ ದಿನವನ್ನು ಸಮರ್ಪಕವಾಗಿಸಿತು’ ಎಂದಿದ್ದಾರೆ ಒಬ್ಬರು. ‘ಕಪಲ್​ ಗೋಲ್​ ಎಂದರೆ ಹೀಗಿರಬೇಕು‘ ಎಂದಿದ್ದಾರೆ ಇನ್ನೊಬ್ಬರು.

ಅಂತೂ ನೃತ್ಯ ಮನಸ್ಸನ್ನು ಉಲ್ಲಸಿತಗೊಳಿಸಿ ಸಂಬಂಧವನ್ನು ಮಧುರಗೊಳಿಸುತ್ತದೆ ಎನ್ನುವಲ್ಲಿ ಎರಡು ಮಾತಿಲ್ಲ ಅಲ್ಲವೆ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:49 pm, Tue, 8 November 22

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?