‘ದೇವರನ್ನು ನಂಬಿ’ ಐಎಎಸ್ ಆಫೀಸರ್ ಅವನೀಶರಿಗೆ ನೆಟ್ಟಿಗರಿಂದ ಪ್ರಶ್ನೆಗಳ ಬಿರುಮಳೆ
My Plan and God‘s Plan : ಒಪ್ಪತ್ತು ಕೂಳಿಗೆ ಗತಿ ಇಲ್ಲದೆ, ಹಸಿವಿನಿಂದ ಸಾಯುವ ಬಡವರ ಬಗ್ಗೆ ಏನು ಹೇಳುತ್ತೀರಿ? ಇದು ದೇವರು ಅವರಿಗಾಗಿ ರೂಪಿಸಿದ ಪರಿಪೂರ್ಣ ಯೋಜನೆಯೆ? ನೆಟ್ಟಿಗರೊಬ್ಬರ ನೇರಬಾಣ.
Trending : ಐಎಎಸ್ ಅಧಿಕಾರಿ ಅವನೀಶ ಶರಣ ಆಗಾಗ ಟ್ವೀಟ್ ಮಾಡುವ ಮೂಲಕ ನೆಟ್ಟಿಗರ ಗಮನ ಸೆಳೆಯುತ್ತಿರುತ್ತಾರೆ. ಇತ್ತೀಚೆಗೆ ಅವರು ಮಾಡಿದ ಪೋಸ್ಟ್ ಸಾಕಷ್ಟು ಜನರ ಮೆಚ್ಚುಗೆ ಗಳಿಸಿದೆ ಹಾಗೆಯೇ ಟೀಕೆಗೂ ಒಳಗಾಗಿದೆ. ಅವನೀಶ ಅಕ್ಟೋಬರ್14ರಂದು ಹಂಚಿಕೊಂಡಿರುವ ಈ ಪೋಸ್ಟ್ ಜೀವನದ ಕುರಿತಾಗಿ ಆಲೋಚಿಸುವ ವಿಧಾನ ಮತ್ತು ವಿಷಯಕ್ಕೆ ಸಂಬಂಧಿಸಿದ್ದಾಗಿದೆ. ‘ನನ್ನ ಯೋಜನೆ’ ಮತ್ತು ‘ದೇವರ ಯೋಜನೆ’ ಎಂಬ ಶೀರ್ಷಿಕೆ ಇಲ್ಲಿರುವ ರೇಖಾಚಿತ್ರಕ್ಕೆ ಇದೆ. ನನ್ನ ಯೋಜನೆ ಎನ್ನುವುದು ಯಾವಾಗಲೂ ಸರಳ ಮಾರ್ಗದಲ್ಲಿ ಯೋಚಿಸುವಂತಿರುತ್ತದೆ. ಆದರೆ ದೇವರ ಯೋಜನೆ ಮಾತ್ರ ಕಠಿಣ ಹಾದಿಯಿಂದ ಕೂಡಿರುತ್ತದೆ ಎನ್ನುವುದನ್ನು ಈ ಪೋಸ್ಟ್ ಸೂಚಿಸುತ್ತದೆ.
Life Lesson. pic.twitter.com/VuhyWaZ5Th
ಇದನ್ನೂ ಓದಿ— Awanish Sharan (@AwanishSharan) October 14, 2022
‘ನನ್ನ ಯೋಜನೆ’; ಇದು ಸರಳ ರೇಖೆಯ ಮೇಲೆ ನಡೆದುಕೊಂಡು ಗುರಿ ತಲುಪಬೇಕೆಂದುಕೊಂಡಿರುವುದನ್ನು ಸಾಂಕೇತಿಸುತ್ತದೆ. ಎರಡನೇ ಚಿತ್ರದಲ್ಲಿ ‘ದೇವರ ಯೋಜನೆ’; ಇದು ಹಳ್ಳ, ಕೊಳ್ಳ ದಿಣ್ಣೆಗಳನ್ನು ದಾಟಿಕೊಂಡು ಗುರಿ ತಲುಪಬೇಕಿರುವುದನ್ನು ಸಾಂಕೇತಿಸುತ್ತದೆ. ಇದರರ್ಥ ನಮ್ಮ ಯೋಜನೆ ಏನೇ ಇದ್ದರೂ ದೇವರ ಯೋಜನೆ ಭಿನ್ನವಾಗಿಯೇ ಇರುತ್ತದೆ. ನಮ್ಮ ಜೀವನವನ್ನು ದೇವರು ಪರಿಪೂರ್ಣವಾಗಿ ಯೋಜಿಸಿರುತ್ತಾನೆ. ದೇವರನ್ನು ನಂಬಿ ಎಂಬ ನೋಟ್ ಈ ರೇಖಾಚಿತ್ರದ ಕೆಳಗಿದೆ. ಇದೇ ಜೀವನ ಪಾಠ ಎಂದಿದ್ದಾರೆ ಅವನೀಶ.
ಸಾಕಷ್ಟು ನೆಟ್ಟಿಗರು ಇವರ ನೋಟವನ್ನು ಒಪ್ಪಿಕೊಂಡಿದ್ದಾರೆ. ಕೆಲವರು, ನನ್ನ ಜೀವನವನ್ನು ನಾನೇ ರೂಪಿಸಿಕೊಳ್ಳಬೇಕು, ದೇವರು ಯಾಕೆ ಇದೆಲ್ಲವನ್ನೂ ಯೋಜಿಸಬೇಕು? ಎಂದು ಪ್ರಶ್ನಿಸಿದ್ದಾರೆ. ದೇವರು ತನ್ನ ಪರಿಪೂರ್ಣ ಯೋಜನೆಯಲ್ಲಿ ನನ್ನನ್ನೂ ಸೇರಿಸಿಕೊಂಡಿದ್ದಾನೆ ಎಂದು ಭಾವಿಸುತ್ತೇನೆ ಎಂದು ಮತ್ತೊಬ್ಬರು ಹೇಳಿದ್ದಾರೆ. ನಮ್ಮ ಆಯ್ಕೆಯಂತೆ ನಮ್ಮ ಬದುಕಿರುತ್ತದೆ. ನಮ್ಮ ಬೌದ್ಧಿಕ ಸಾಮರ್ಥ್ಯದ ಮೇಲೆ ಇದು ಅವಲಂಬಿತವಾಗಿರುತ್ತದೆ ಎಂದಿದ್ದಾರೆ ಮಗದೊಬ್ಬರು.
ಒಪ್ಪತ್ತು ಕೂಳಿಗೆ ಗತಿ ಇಲ್ಲದೆ, ಹಸಿವಿನಿಂದ ಸಾಯುವ ಬಡವರ ಬಗ್ಗೆ ಏನು ಹೇಳುತ್ತೀರಿ? ಇದು ದೇವರು ಅವರಿಗಾಗಿ ರೂಪಿಸಿದ ಪರಿಪೂರ್ಣ ಬಗೆಯೇ ಇದು? ಎಂದು ವಾಸ್ತವವನ್ನು ಪ್ರಶ್ನಿಸಿದ್ದಾರೆ ಇನ್ನೊಬ್ಬರು.
ಈ ಪೋಸ್ಟ್ ನೋಡಿದ ನಿಮಗೆ ಏನೆನ್ನಿಸುತ್ತಿದೆ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 1:20 pm, Mon, 17 October 22