ಉತ್ತರಪ್ರದೇಶದ ಶಾಲಾ ಬಸ್ಸಿನಲ್ಲಿ ಹೆಬ್ಬಾವು ಪತ್ತೆ, ವಿಡಿಯೋ ವೈರಲ್

Python in School Bus : ಉತ್ತರ ಪ್ರದೇಶದ ರಾಯಬರೇಲಿಯ ಶಾಲಾ ಬಸ್ಸಿನಲ್ಲಿ ಹೆಬ್ಬಾವೊಂದು ಕಾಣಿಸಿಕೊಂಡಿದೆ. ಅರಣ್ಯ ರಕ್ಷಣಾ ಇಲಾಖೆಯು ಅದನ್ನು ಕಾಡಿಗೆ ಸುರಕ್ಷಿತವಾಗಿ ಮರಳಿಸಿದೆ.

ಉತ್ತರಪ್ರದೇಶದ ಶಾಲಾ ಬಸ್ಸಿನಲ್ಲಿ ಹೆಬ್ಬಾವು ಪತ್ತೆ, ವಿಡಿಯೋ ವೈರಲ್
Huge Python Crawls Inside School Bus In UP Rescued By Forest Officials
Follow us
TV9 Web
| Updated By: ಶ್ರೀದೇವಿ ಕಳಸದ

Updated on:Oct 17, 2022 | 11:36 AM

Viral Video : ಸುಮ್ಮನೆ ಕುಳಿತಿರುತ್ತೀರಿ. ಇದ್ದಕ್ಕಿದ್ದ ಹಾಗೆ ನಿಮ್ಮ ಬಳಿ ಹಲ್ಲಿಯೋ, ಜೇಡವೋ, ಜಿರಳೆಯೋ ಕಾಣಿಸಿಕೊಂಡರೆ ನಿಮಗೇನೆನ್ನಿಸುತ್ತದೆ? ಕಿರಿಕಿರಿ ಅಥವಾ ಭಯದಿಂದ ಮಾರುದ್ದ ದೂರ ಸರಿಯುತ್ತೀರಿ ತಾನೆ? ಅದೇ ಹಾವು ಕಾಣಿಸಿಕೊಂಡರೆ ಓಡಿಯೇ ಬಿಡುತ್ತೀರಿ. ದೊಡ್ಡ ಗಾತ್ರದ ಹೆಬ್ಬಾವು ಕಂಡರಂತೂ… ಹೇಳುವುದೇ ಬೇಡ. ಇದೀಗ ಉತ್ತರ ಪ್ರದೇಶದ ಲಕ್ನೋದಲ್ಲಿರುವ ಶಾಲಾ ಬಸ್ಸಿನಲ್ಲಿ ಹೆಬ್ಬಾವೊಂದು ನುಸುಳಿದ ವಿಡಿಯೋ ವೈರಲ್ ಆಗಿದೆ. ವಿಡಿಯೋ ನೋಡಿಯೇ ಆತಂಕವಾಗುತ್ತಿದೆ ಇನ್ನು…

‘ಭಾನುವಾರದಂದು ರಾಯಬರೇಲಿಯ ರಯಾನ್ ಇಂಟರ್ನ್ಯಾಷನಲ್ ಸ್ಕೂಲ್​ ಬಸ್ಸಿನಲ್ಲಿ ನಡೆದ ಘಟನೆಯಾಗಿದೆ. ಬಸ್ಸಿನಲ್ಲಿ ಈ ಹೆಬ್ಬಾವು ಕಾಣಿಸಿಕೊಂಡಾಗ ಸಹಜವಾಗಿ ಆತಂಕವಾಗಿದೆ. ಅರಣ್ಯ ಇಲಾಖೆಯ ರಕ್ಷಣಾ ತಂಡಕ್ಕೆ ಸುದ್ದಿ ಮುಟ್ಟಿಸಿದ ನಂತರ ಸುಮಾರು ಒಂದು ತಾಸಿನತನಕ ಕಾರ್ಯಾಚರಣೆ ನಡೆಸಲಾಗಿದೆ. ಅರಣ್ಯ ಸಿಬ್ಬಂದಿ ಹೆಬ್ಬಾವನ್ನು ಸುರಕ್ಷಿತವಾಗಿ ಕಾಡಿಗೆ ತಲುಪಿಸಿದೆ. ಯಾವುದೇ ರೀತಿಯ ಅವಘಡ ಸಂಭವಿಸಿಲ್ಲ’ ಎಂದಿದ್ದಾರೆ ಸಿಟಿ ಮ್ಯಾಜಿಸ್ಟ್ರೇಟ್ ಪಲ್ಲವಿ ಮಿಶ್ರಾ.

ಸದ್ಯ ಭಾನುವಾರವಾದ್ದರಿಂದ ಶಾಲೆಗೆ ರಜೆ. ಮಕ್ಕಳು ಬಸ್ಸಿನಲ್ಲಿದ್ದಾಗ ಇದು ಕಾಣಿಸಿಕೊಂಡಿದ್ದರೆ ಏನು ಗತಿ ಎಂದು ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ. ಎಂಥಾ ದೊಡ್ಡ ಹಾವು ಇದು, ಎಷ್ಟು ಕಷ್ಟಪಟ್ಟಿರಬೇಕು ಅರಣ್ಯ ಸಿಬ್ಬಂದಿ ಇದನ್ನು ಹಿಡಿಯಲು ಎಂದಿದ್ದಾರೆ ಕೆಲವರು.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 11:32 am, Mon, 17 October 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ