ಮುಂಬೈನ ಕುರ್ಲಾ ರೈಲ್ವೆ ಪ್ಲ್ಯಾಟ್ಫಾರ್ಮ್ಗೆ ಈ ಆಟೋ ತಲುಪಿದ್ದು ಹೇಗೆ?
Auto-rickshaw Runs On Railway Platform: ಈ ವಿಡಿಯೋ ವೀಕ್ಷಿಸಿದ ನೆಟ್ಟಿಗರು, ಮಧ್ಯರಾತ್ರಿಯಲ್ಲಿ ರೈಲ್ವೇ ಪೊಲೀಸ್ ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿ ನಿದ್ದೆ ಮಾಡುತ್ತಿತ್ತೆ? ಎಂದು ಪ್ರಶ್ನಿಸಿದ್ದಾರೆ.
Viral Video : ಸಿನೆಮಾಗಳಲ್ಲಿ ಎಂಥ ರೀತಿಯ ಸಾಹಸಗಳನ್ನೂ ನೋಡಬಹುದು. ಆದರೆ ವಾಸ್ತವದಲ್ಲಿ? ಇತ್ತೀಚೆಗೆ ಮುಂಬೈನ ಕುರ್ಲಾ ರೈಲ್ವೇ ಸ್ಟೇಷನ್ನಿನ ಪ್ಲ್ಯಾಟ್ಫಾರ್ಮ್ ಗೆ ಆಟೋ ಬಂದ ವಿಡಿಯೋ ವೈರಲ್ ಆಗಿದೆ. ನೆಟ್ಟಿಗರು ಮಿಶ್ರಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ಈ ವಿಡಿಯೋ ಅನ್ನು ತಮಾಷೆಯಾಗಿ ಸ್ವೀಕರಿಸುತ್ತಿದ್ದಾರೆ. ಇನ್ನೂ ಕೆಲವರು ರೈಲ್ವೆ ಇಲಾಖೆಯ ಸಿಬ್ಬಂದಿಯ ನಿರ್ಲಕ್ಷ್ಯವನ್ನು ಪ್ರಶ್ನಿಸುತ್ತಿದ್ದಾರೆ. ಅಷ್ಟೇ ಅಲ್ಲ, ಪೊಲೀಸರನ್ನು ಟ್ಯಾಗ್ ಮಾಡಿ ವಿಡಿಯೋ ಕೂಡ ಹಂಚಿಕೊಂಡಿದ್ದಾರೆ.
When trains are late, we will get auto service directly on railway platforms.. Kurla station..
Credit goes to mumbai traffic police department.. pic.twitter.com/FbyoiPWoRt
— Thunder On Road (@thunderonroad) October 15, 2022
ಟ್ವೀಟ್ನ ದೂರಿನನ್ವಯ ಎಚ್ಚೆತ್ತುಕೊಂಡ ರೈಲ್ವೆ ಪೊಲೀಸರು, ಆಟೋ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ ಮತ್ತು ಆಟೋರಿಕ್ಷಾ ಅನ್ನು ವಶಪಡಿಸಿಕೊಂಡಿದ್ದಾರೆ. ನಂತರ ನ್ಯಾಯಾಲಯದ ಮುಂದೆ ಆರೋಪಿಯನ್ನು ಹಾಜರುಪಡಿಸಿದಾಗ ನ್ಯಾಯಾಲಯವು ಸೂಕ್ತ ಶಿಕ್ಷೆಯನ್ನು ವಿಧಿಸಿದೆ.
ಅಕ್ಟೋಬರ್ 12 ರಂದು ಈ ಘಟನೆ ನಡೆದಿದೆ. ಸ್ಟೇಷನ್ನಿನ ಹಿಂಭಾಗದ ಗೇಟ್ನಿಂದ ಆಟೋ ಪ್ರವೇಶಿಸಿದೆ. ಯಾವಾಗ ರೈಲು ನಿಲ್ದಾಣ ತಲುಪಲು ತಡವಾಗುತ್ತದೆಯೋ ಆಗ ಆಟೋಗಳು ಹೀಗೆ ಸಹಾಯ ಮಾಡುತ್ತವೆ ಎಂದು ನೆಟ್ಟಿಗರು ತಮಾಷೆಯಾಗಿ ಪ್ರತಿಕ್ರಿಯಿಸಿದ್ಧಾರೆ. ಸೆಕ್ಯೂರಿಟಿ ಎಲ್ಲಿ ಮಾಯವಾಗಿದ್ದರು? ಇದು ಸರ್ಕಾರದ ಅವ್ಯವಸ್ಥೆಯನ್ನು ತೋರಿಸುತ್ತದೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಒಂದು ದಿನ ಆಟೋವಾಲಾಗಳು ರೈಲ್ವೆ ಪ್ಲ್ಯಾಟ್ಫಾರ್ಮಿನ ಮೇಲೆಯೇ ಪಾರ್ಕ್ ಮಾಡುವ ಸಂದರ್ಭ ಬರಬಹುದು ಎಂದು ಮಗದೊಬ್ಬರು ಭವಿಷ್ಯ ನುಡಿದಿದ್ದಾರೆ.
ನಿಮಗೆ ಏನೆನ್ನಿಸುತ್ತಿದೆ ಈ ವಿಡಿಯೋ ನೋಡುತ್ತಿದ್ದಂತೆ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 12:36 pm, Mon, 17 October 22