ಅಪ್ಪನಿಗೆ ಕೆಲಸ ಸಿಕ್ಕಾಗ ಮಗಳು ಸಂಭ್ರಮಿಸಿದ ಪರಿ ಇದು

Father and Daughter Love : ‘ಕಣ್ಣು ಮುಚ್ಚಿಕೋ ಮಗಳೇ , ಹಾಂ ಈಗ ಕಣ್ಣುತೆರೆದು ನೋಡು’, ‘ಅರೆ! ಈ ಕಂಪೆನಿಯಲ್ಲಿ ನಿನಗೆ ಕೆಲಸ ಸಿಕ್ಕಿತಾ ಅಪ್ಪಾ?’ ಮನಸ್ಸನ್ನು ಆರ್ದ್ರಗೊಳಿಸುವ ಈ ವಿಡಿಯೋ ನೋಡಿ.

ಅಪ್ಪನಿಗೆ ಕೆಲಸ ಸಿಕ್ಕಾಗ ಮಗಳು ಸಂಭ್ರಮಿಸಿದ ಪರಿ ಇದು
This girls adorable reaction to fathers new job at Swiggy
Follow us
TV9 Web
| Updated By: ಶ್ರೀದೇವಿ ಕಳಸದ

Updated on:Oct 15, 2022 | 7:10 PM

Viral Video : ಕೊರೊನಾದ ಅನಿಶ್ಚಿತತೆ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದ ರೀತಿ ಅಷ್ಟಿಷ್ಟಲ್ಲ. ಸಾಕಷ್ಟು ಮನೆಗಳಲ್ಲಿ ಅನೇಕ ಸ್ಥಿತ್ಯಂತರಗಳನ್ನು ತಂದೊಡ್ಡಿತು. ಈಗೀಗ ನಿಧಾನ ಎಲ್ಲವೂ ಹಾದಿಗೆ ಬರುತ್ತಿದೆ. ಆದರೆ ಅದರ ಮಧ್ಯೆ ಉಂಟಾದ ನೋವು, ದುಃಖ… ಆದರೂ ನೋವ ನುಂಗಲೇಬೇಕು, ಮತ್ತೆ ಶಕ್ತಿ ತಂದುಕೊಳ್ಳಲೇಬೇಕು. ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋ ಬಹಳ ಹೃದಯಸ್ಪರ್ಶಿಯಾಗಿದೆ. ಹೆಣ್ಣುಮಕ್ಕಳಿಗೆ ಹೆಚ್ಚು ಆಪ್ತವೆನ್ನಿಸುವ ಜೀವ ಅಪ್ಪನೇ. ಆ ಸಂಬಂಧ, ಅನುಬಂಧವನ್ನು ವಿವರಿಸಲಾಗದು. ಈ ವಿಡಿಯೋದಲ್ಲಿ ಮಗಳು ಶಾಲೆಯಿಂದ ಬಂದು ಕಣ್ಣುಮುಚ್ಚಿಕೊಂಡು ನಿಲ್ಲುತ್ತಾಳೆ. ಅಪ್ಪ ಹೊಸ ಕೆಲಸದ ಸಮವಸ್ತ್ರವನ್ನು ತನ್ನ ಎದೆಗೆ ಹಿಡಿದುಕೊಂಡು, ತನಗೆ ಹೊಸ ಕೆಲಸ ಸಿಕ್ಕಿತೆಂದು ಸರ್​ಪ್ರೈಝ್​ ಕೊಡುತ್ತಾನೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by pooja avantika (@pooja.avantika.1987)

@pooja.avantika.1987 ಎಂಬ ಇನ್​ಸ್ಟಾಗ್ರಾಂ ಖಾತೆದಾರರು ಅಪ್​ಲೋಡ್ ಮಾಡಿದ ಈ ವಿಡಿಯೋ ಅನ್ನು ನೋಡಿದ ನೆಟ್ಟಿಗರು ಭಾವುಕರಾಗಿದ್ದಾರೆ. ಸ್ವಿಗ್ಗಿ ಕಂಪೆನಿಯಲ್ಲಿ ತನಗೆ ಕೆಲಸ ಸಿಕ್ಕಿದೆ ಎಂದು ಅಪ್ಪ ಹೇಳುವಾಗ ಮಗಳ ಮುಖದಲ್ಲಿನ ಆನಂದ ವಿವರಿಸಲಾಗದು. 8 ಲಕ್ಷಕ್ಕೂ ಹೆಚ್ಚು ಜನ ಈ ವಿಡಿಯೋ ವೀಕ್ಷಿಸಿದ್ದಾರೆ. ಸುಮಾರು 51,000 ಜನರು ಈ ವಿಡಿಯೋ ಇಷ್ಟಪಟ್ಟಿದ್ದಾರೆ.

‘ಇಂಥ ದೇವತೆಯಂಥ ಮಗಳನ್ನು ಪಡೆದ ನೀವು ಅದೃಷ್ಟವಂತರು’ ಎಂದಿದ್ದಾರೆ ಒಬ್ಬರು. ‘ನಿಮ್ಮ ಕುಟುಂಬ ಸಂತೋಷವಾಗಿರಲಿ ಎಂದು ಬಯಸುತ್ತೇನೆ’ ಎಂದು ಮತ್ತೊಬ್ಬರು ಹಾರೈಸಿದ್ದಾರೆ. ‘ಇದು ತುಂಬಾ ಮುದ್ದಾದ ವಿಡಿಯೋ. ನಿಮಗೆ ಒಳ್ಳೆಯದಾಗಲಿ ಅಣ್ಣಾ’ ಎಂದಿದ್ದಾರೆ ಮಗದೊಬ್ಬರು. ‘ದೇವರ ಆಶೀರ್ವಾದ ನಿಮ್ಮ ಕುಟುಂಬದ ಮೇಲೆ ಸದಾ ಇರಲಿ’ ಎಂದಿದ್ದಾರೆ ಇನ್ನೂ ಒಬ್ಬರು.

ಕೆಲಸವಿಲ್ಲದೆ ಕಳೆದ ದಿನಗಳ ಸಂಕಟ ಅನುಭವಿಸಿದವರಿಗೇ ಗೊತ್ತು ಅಲ್ಲವೆ?

ಇನ್ನು ಕುಟುಂಬ ಮತ್ತು ಇನ್ನ್ಯಾವ ಸಂಬಂಧಗಳಲ್ಲಿಯೂ ಪರಸ್ಪರರ ನೋವು ನಲಿವು ಸಂಕಟಗಳು ಎದೆಯಿಂದ ಎದೆಗೆ ಹೊಲಿದುಕೊಂಡಿರುತ್ತದೆ.

ಮತ್ತಷ್ಟು ವೈರಲ್​​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 6:47 pm, Sat, 15 October 22

ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್