Viral Video: ನನ್ನ ಕಿಡ್ನಾಪ್ ಮಾಡ್ತಿದ್ದಾರೆ, ಬಚಾವ್-ಬಚಾವ್; ಬಸ್ ನಿಲ್ಲಿಸದ ಚಾಲಕನ ವಿರುದ್ಧ ಪ್ರಯಾಣಿಕನ ಆಕ್ರೋಶ
ಬಸ್ ನಿಲ್ಲಿಸಲು ನಿರಾಕರಿಸಿದ ಚಾಲಕನನ್ನು ಅಪಹರಣಕಾರನನ್ನಾಗಿ ಮಾಡಿದ ಪ್ರಯಾಣಿಕನ ವಿಡಿಯೋ ವೈರಲ್ ಆಗುತ್ತಿದೆ.
ನೀವು ಎಂದಾದರೂ ಬಸ್ಸಿನಲ್ಲಿ ಪ್ರಯಾಣಿಸಿದ್ದರೆ ಈ ಘಟನೆಯನ್ನು ನೀವು ಗಮನಿಸಿರಬಹುದು. ಪ್ರಯಾಣಿಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಬಸ್ಸಿನಲ್ಲಿ ಇಳಿಯಲು ಬಯಸುತ್ತಾರೆ. ಇದು ಬಸ್ ನಿಲ್ದಾಣವಾಗಿದೆಯೇ ಅಥವಾ ಇಲ್ಲವೇ ಎಂದು ಪ್ರಯಾಣಿಕರು ಲೆಕ್ಕಿಸುವುದಿಲ್ಲ. ಇದರಿಂದಾಗಿ ಚಾಲಕ ಮತ್ತು ಪ್ರಯಾಣಿಕರ ನಡುವೆ ವಾಗ್ವಾದಗಳು ನಡೆಯುತ್ತವೆ. ಕೆಲವೊಮ್ಮೆ ತಾರಕಕ್ಕೇರಿ ಹಲ್ಲೆ ನಡೆಸಿದ ಪ್ರಸಂಗವೂ ನಡೆದಿದೆ. ಇಂತಹದ್ದೇ ಒಂದು ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದ್ದು, ಬಸ್ ನಿಲ್ಲಿಸಲು ನಿರಾಕರಿಸಿದ್ದಕ್ಕೆ ಪ್ರಯಾಣಿಕನೊಬ್ಬ ಚಾಲಕನನ್ನು ಅಪಹರಣಕಾರನಂತೆ ಜನರು ನೋಡುವಂತೆ ಮಾಡಿದ್ದಾನೆ. ವಿಡಿಯೋ ನೋಡಿದ ನೆಟ್ಟಿಗರು ಅಣ್ಣನ ಆತ್ಮವಿಶ್ವಾಸ ನೋಡಿ ಎಂದು ಹಾಸ್ಯವಾಗಿ ಹೇಳಿದ್ದಾರೆ.
ಈ ಘಟನೆ ಪುಣೆಯಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ. PMPAL (ಪುಣೆ ಮೆಟ್ರೋಪಾಲಿಟನ್ ಟ್ರಾನ್ಸ್‌ಪೋರ್ಟ್ ಕಾರ್ಪೊರೇಶನ್ ಲಿಮಿಟೆಡ್)ನ ಬಸ್ ಚಿಂಚವಾಡದಿಂದ ಬಾಳೆವಾಡಿಗೆ ಹೋಗುತ್ತಿತ್ತು. ಅದರಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿ ಬಸ್ ನಿಲುಗಡೆಗೆ ಮೊದಲು ಇಳಿಯಬೇಕಾಗಿತ್ತು. ಚಾಲಕನ ಬಳಿ ವಿನಂತಿಸಿಕೊಂಡಾಗ ಚಾಲಕ ನಿರಾಕರಿಸಿದ್ದಾನೆ. ಹೀಗಾಗಿ ಹಠಕ್ಕೆ ಬಿದ್ದ ಆ ವ್ಯಕ್ತಿ ಮರಾಠಿಯಲ್ಲಿ “ನನ್ನನ್ನು ಉಳಿಸಿ, ನನ್ನನ್ನು ಉಳಿಸಿ, ಚಾಲಕ ನನ್ನನ್ನು ಅಪಹರಿಸುತ್ತಿದ್ದಾನೆ, ಅವನು ನನ್ನನ್ನು ಬಸ್ಸಿನಿಂದ ಇಳಿಯಲು ಬಿಡುತ್ತಿಲ್ಲ” ಎಂದು ಕಿರುಚಾಡಲು ಆರಂಭಿಸಿದ್ದಾನೆ.
ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಒಬ್ಬ ವ್ಯಕ್ತಿ ಚಾಲಕನಿಗೆ ಬಾಗಿಲು ತೆರೆಯಲು ಕೇಳುತ್ತಾನೆ. ಆದರೆ ಚಾಲಕ ಅವನ ಮಾತನ್ನು ಕೇಳುವುದಿಲ್ಲ. ಈ ವೇಳೆ ವ್ಯಕ್ತಿ ಬಲವಂತವಾಗಿ ಬಾಗಿಲು ತೆರೆಯಲು ಗೇಟ್ ಬಟನ್ ಒತ್ತಲು ಮುಂದಾಗುತ್ತಾನೆ. ಇದಕ್ಕೆ ಚಾಲಕ ಪ್ರತಿರೋಧ ಒಡ್ಡುತ್ತಾನೆ. ಇಬ್ಬರ ನಡುವೆ ಚರ್ಚೆ ಶುರುವಾಗುತ್ತದೆ. ತನ್ನ ಮಾತನ್ನ ಕೇಳದ್ದಕ್ಕೆ ಆ ವ್ಯಕ್ತಿ ಇದ್ದಕ್ಕಿದ್ದಂತೆ ನನ್ನನ್ನು ಉಳಿಸಿ ಎಂದು ಜೋರಾಗಿ ಕೂಗಲು ಪ್ರಾರಂಭಿಸುತ್ತಾನೆ. ಆ ಮೂಲಕ ಬಸ್ ಚಾಲಕನನ್ನು ಅಪಹರಣಕಾರನನ್ನಾಗಿ ನೋಡುವಂತೆ ಮಾಡುತ್ತಾನೆ. ಪ್ರಯಾಣಿಕನ ಕಿರುಚಾಟ ನೋಡಿದ ಜನರು ಸುತ್ತಮುತ್ತಲೂ ಗುಂಪು ಸೇರುತ್ತಾರೆ.
satyamjoshi99 ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಎಲ್ಲಾ ಮೆಮರ್‌ಗಳು ದಯವಿಟ್ಟು ಗಮನಿಸಿ… ಸಹೋದರನ ವಿಶ್ವಾಸವನ್ನು ನೋಡಿ… ಉಳಿಸಿ… ಉಳಿಸಿ..!” ಎಂದು ಶೀರ್ಷಿಕೆ ಬರೆಯಲಾಗಿದೆ. ಅದರಂತೆ ವೈರಲ್ ಆದ ಈ ವಿಡಿಯೋವನ್ನು ನೂರಾರು ವೀಕ್ಷಣೆಗಳನ್ನು ಕಂಡಿದೆ. ಕೆಲವೊಂದು ಕಾಮೆಂಟ್ಗಳು ಕೂಡ ಬಂದಿವೆ.
#meme #alert all memers pay attention ...भावाचा कॉन्फीन्डन्स बघा …… ये वाचावा … वाचवा ….वाचवा ???#pune #PMT #PCMC #PMPL pic.twitter.com/dvlbNCSiNR
— Satyam Joshi | सत्यम जोशी (@satyamjoshi99) October 15, 2022
ಮತ್ತಷ್ಟು ವೈರಲ್ ವಿಡಿಯೋಗಳನ್ನು ಇಲ್ಲಿ ಕ್ಲಿಕ್ ಮಾಡಿ
Published On - 10:32 am, Sun, 16 October 22