Viral Video: ಪೇಮೆಂಟ್ ಮಾಡುವ ವಿಧಾನ ನೋಡಿ ಕ್ಯಾಶಿಯರ್ ಶಾಕ್

ಗ್ರಾಹಕನ ಆನ್​ಲೈನ್ ಪೇಮೆಂಟ್ ವಿಧಾನವನ್ನು ನೋಡಿ ಕ್ಯಾಶಿಯರ್ ಶಾಕ್ ಆಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Viral Video: ಪೇಮೆಂಟ್ ಮಾಡುವ ವಿಧಾನ ನೋಡಿ ಕ್ಯಾಶಿಯರ್ ಶಾಕ್
ಪೇಮೆಂಟ್ ಮಾಡುವ ವಿಧಾನ ನೋಡಿ ಕ್ಯಾಶಿಯರ್ ಶಾಕ್
Follow us
TV9 Web
| Updated By: Rakesh Nayak Manchi

Updated on:Oct 16, 2022 | 12:13 PM

ಇಂದಿನ ಯುಗದಲ್ಲಿ ಜನರು ಎಲ್ಲವನ್ನೂ ಆನ್‌ಲೈನ್‌ನಲ್ಲಿ ಖರೀದಿಸುತ್ತಿದ್ದಾರೆ, ಶಾಪಿಂಗ್​ಗಾಗಿ ಮಾಲ್​ಗಳಿಗೆ ಹೋದರೆ ಅಲ್ಲೂ ಆನ್​ಲೈನ್​ ಮೂಲಕವೇ ಹಣ ಪಾವತಿ ಮಾಡುತ್ತಾರೆ. ಸದ್ಯ ಭಾರತದಲ್ಲಿ ಡಿಜಿಟಲ್ ಪೇಮೆಂಟ್ ಹೆಚ್ಚಾಗುತ್ತಿದೆ. Phone Pay, Google Pay ಅಥವಾ Paytm ಬಳಸಿ ಹಣ ಪಾವತಿ ಮಾಡುತ್ತಾರೆ. ಇದರ ಹೊರತಾಗಿ ಜನರು ಸಾಮಾನ್ಯವಾಗಿ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ ಕೂಡ ಬಳಕೆ ಮಾಡುತ್ತಾರೆ. ಇದಕ್ಕೆ ಸಂಬಂಧಿಸಿದ ವೀಡಿಯೋವೊಂದು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದರಲ್ಲಿ ಗ್ರಾಹಕನ ಪಾವತಿ ವಿಧಾನವನ್ನು ನೋಡಿ ಕ್ಯಾಶಿಯರ್ ಅಚ್ಚರಿಗೊಂಡಿದ್ದಾರೆ.

ವಿಡಿಯೋದಲ್ಲಿ, ಗ್ರಾಹಕ ಮುಖಕ್ಕೆ ಹಾಕಿದ್ದ ಮಾಸ್ಕ್ ಒಳಗೆ ಡೆಬಿಟ್ ಕಾರ್ಡ್​ ಅನ್ನು ಹೇಗೆ ಮರೆಮಾಡಿದ್ದಾನೆ ಮತ್ತು ಕೌಂಟರ್​ನಲ್ಲಿ ಯಾವ ರೀತಿ ಪಾವತಿ ಮಾಡುತ್ತಾನೆ ಎಂಬುದನ್ನು ನೋಡಬಹುದು. ಮಾಸ್ಕ್ ಒಳಗೆ ಕಾರ್ಡ್ ಇಟ್ಟು ಬಂದ ಗ್ರಾಹಕ ಕೆಲವೊಂದು ವಸ್ತುಗಳನ್ನು ಖರೀದಿಸಿ ಕ್ಯಾಶಿಯರ್ ಬಳಿ ಹೋಗುತ್ತಾನೆ. ಈ ವೇಳೆ ಕ್ಯಾಶಿಯರ್ ಯಂತ್ರವನ್ನು ನೀಡುತ್ತಾರೆ. ಅದರಂತೆ ಗ್ರಾಹಕ ಏನೋ ಜಾದೂ ಮಾಡುತ್ತಿದ್ದೇನೆ ಎಂಬಂತೆ ಪೋಸ್ ಕೊಟ್ಟು ಯಂತ್ರವನ್ನು ಎತ್ತಿಕೊಂಡು ನಮಸ್ಕಾರ ಮಾಡಿ ಬಾಯಿಗೆ ಹತ್ತಿರ ತಂದು ಸ್ಕ್ಯಾನ್ ಮಾಡುತ್ತಾನೆ. ಈ ವೇಳೆ ಯಂತ್ರದಿಂದ ಬಿಲ್ ಹೊರಗೆ ಬರುತ್ತದೆ. ಇದನ್ನು ಕಂಡ ಕ್ಯಾಶಿಯರ್ ಅಚ್ಚರಿಗೊಂಡು ಬೇರೊಬ್ಬನ ಬಳಿ ಸಂಗತಿಯನ್ನು ತಿಳಿಸುತ್ತಾನೆ.

ಈ ತಮಾಷೆಯ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಟ್ವಿಟರ್‌ನಲ್ಲಿ TheBest_Viral ಹೆಸರಿನ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ‘ದೇವರು ಯಾವಾಗಲೂ ಸಹಾಯ ಮಾಡುತ್ತಾನೆ’ ಎಂದು ಶೀರ್ಷಿಕೆ ಬರೆಯಲಾಗಿದೆ. ಕೇವಲ 30 ಸೆಕೆಂಡ್‌ಗಳ ಈ ವೀಡಿಯೋವನ್ನು ಇದುವರೆಗೆ 3 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದು, 79 ಸಾವಿರಕ್ಕೂ ಹೆಚ್ಚು ಜನರು ವಿಡಿಯೋವನ್ನು ಲೈಕ್ ಮಾಡಿದ್ದಾರೆ.

ಕೆಲವರು ಈ ವೀಡಿಯೋ ನೋಡಿ ನಗುತ್ತಿದ್ದರೆ ಇನ್ನು ಕೆಲವರು ಇದೊಂದು ತಮಾಷೆಯ ವಿಡಿಯೋ ಎಂದು ಹೇಳಿದ್ದಾರೆ. ಆದಾಗ್ಯೂ ಕೆಲವು ಬಳಕೆದಾರರು ಈ ಪಾವತಿ ವಿಧಾನವನ್ನು ನಂಬಬಾರದು ಎಂದು ಹೇಳುತ್ತಿದ್ದಾರೆ. ಏಕೆಂದರೆ ಅವರು ಯಂತ್ರದಲ್ಲಿ ಮೊತ್ತವನ್ನು ನಮೂದಿಸಿಲ್ಲ ಅಥವಾ ಅಂಗಡಿ ಮಾಲೀಕರು ಅವರ ಸರಕುಗಳ ಬಾರ್ ಕೋಡ್ ಅನ್ನು ಸ್ಕ್ಯಾನ್ ಮಾಡಿಲ್ಲ ಎಂದಿದ್ದಾರೆ.

ಮತ್ತಷ್ಟು ವೈರಲ್ ವಿಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Published On - 12:04 pm, Sun, 16 October 22