Viral Video: ಕ್ಷೌರ ಮಾಡಲು ಬಂದವರ ಹಣೆಗೆ ಸಿಹಿ ಮುತ್ತು

ಕೇಶ ವಿನ್ಯಾಸಕನೊಬ್ಬ ತನ್ನ ಸೆಲೂನ್​ಗೆ ಬರುವ ಗ್ರಾಹಕರ ಹಣೆಗೆ ಮುತ್ತು ನೀಡುವ ಹಾಸ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿರನ್ನು ಮನರಂಜಿಸುತ್ತಿದೆ.

Viral Video: ಕ್ಷೌರ ಮಾಡಲು ಬಂದವರ ಹಣೆಗೆ ಸಿಹಿ ಮುತ್ತು
ಕ್ಷೌರ ಮಾಡಲು ಬಂದವರ ಹಣೆಗೆ ಸಿಹಿ ಮುತ್ತು
Follow us
TV9 Web
| Updated By: Rakesh Nayak Manchi

Updated on:Oct 16, 2022 | 1:58 PM

ವಾರ ಇಡೀ ಕೆಲಸದ ಒತ್ತಡದಲ್ಲಿದ್ದು ಇಂದು ಕೊಂಚ ರಿಲಾಕ್ಸ್ ಮೋಡ್​ಗೆ ಹೋಗಿರುತ್ತೀರಿ. ಈಗ ನಿಮ್ಮ ಮುಂದೆ ಇಡುತ್ತಿರುವ ಈ ವಿಡಿಯೋ ನಿಮ್ಮ ಮನಸ್ಸಿಗೆ ಇನ್ನಷ್ಟು ರಿಲಾಕ್ಸ್ ಮಾಡಲಿದೆ. ತಿಂಗಳಿಗೊಮ್ಮೆ ಕ್ಷೌರಿಕನ ಬಳಿಗೆ ಹೋಗುವುದು ಕೆಲವರಿಗೆ ವಾಡಿಕೆ. ಹೀಗೆ ಹೋದ ಗ್ರಾಹಕರಿಗೆ ಕ್ಷೌರಿಕ ಗ್ರಾಹಕರು ಹೇಳಿದಂತೆ ಕೇಶ ವಿನ್ಯಾಸ ಮಾಡುತ್ತಾರೆ. ಆದರೆ ಎಂದಾದರೂ ಮುತ್ತು ಕೊಟ್ಟು ಮನರಂಜಿಸುವುದನ್ನು ನೋಡಿದ್ದೀರಾ? ಇಂತಹ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಇದನ್ನು ನೋಡುತ್ತಿದ್ದಂತೆ ಗ್ರಾಹಕರ ಪ್ರತಿಕ್ರಿಯೆ ನೋಡಿ ನಿಮ್ಮ ಮುಖದಲ್ಲಿ ನಗು ತರಿಸುವುದರಲ್ಲಿ ಅನುಮಾನವೇ ಇಲ್ಲ.

ಮೂಲತಃ ವಿಡಿಯೋವನ್ನು ಬ್ರಿಯಾನ್ ಎಂಬ ಕೇಶ ವಿನ್ಯಾಸಕಿ ಹಂಚಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್​ನಲ್ಲಿ ಪ್ಯೂಬಿಟಿ ಎಂಬ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಎಂತಹ ಆರೋಗ್ಯಕರ ವಿಡಿಯೋ ಎಂದು ಶೀರ್ಷಿಕೆ ನೀಡಲಾಗಿದೆ. ಕಿರು ಕ್ಲಿಪ್​ನಲ್ಲಿ ಬ್ರಿಯಾನ್ ತನ್ನ ಗ್ರಾಹಕರ ಹಣೆಯ ಮೇಲೆ ಸಿಹಿ ಚುಂಬನ ನೀಡುವುದನ್ನು ಕಾಣಬಹುದು. ಕ್ಷೌರಿಕನ ಈ ಕ್ರಿಯೆಗೆ ಯಾವುದೇ ಗ್ರಾಹಕರು ಪ್ರತಿರೋಧವೊಡ್ಡಿಲ್ಲ, ಬದಲಾಗಿ ಅಚ್ಚರಿಯಿಂದ ನಗುವುದನ್ನು ವಿಡಿಯೋದಲ್ಲಿ ಕಾಣಬಹುದು.

View this post on Instagram

A post shared by Pubity (@pubity)

ಮತ್ತಷ್ಟು ವೈರಲ್ ವಿಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Published On - 1:58 pm, Sun, 16 October 22