Viral Video: ವಧು-ವರ ನೃತ್ಯ ಮಾಡುತ್ತಿದ್ದಾಗ ಬೆಂಕಿ ಹಚ್ಚಿಯೇ ಬಿಟ್ಟರು!

ಮದುವೆಯಾದ ಖುಷಿಯಲ್ಲಿ ವಧು ವರ ಆಲಿಂಗನ ಮಾಡಿಕೊಂಡು ಡಾನ್ಸ್ ಮಾಡುತ್ತಿದ್ದಾಗ ಸ್ನೇಹಿತರು ಬೆಂಕಿ ಹಚ್ಚಿ ಅಚ್ಚರಿ ಮೂಡಿಸಿದರು. ಇದೇನು ಎಂದು ಅರ್ಥೈಸಲು ವಿಡಿಯೋ ನೋಡಿ.

Viral Video: ವಧು-ವರ ನೃತ್ಯ ಮಾಡುತ್ತಿದ್ದಾಗ ಬೆಂಕಿ ಹಚ್ಚಿಯೇ ಬಿಟ್ಟರು!
ಸುತ್ತಲೂ ಬೆಂಕಿ, ನಡುವೆ ವಧು-ವರನ ನೃತ್ಯ
Follow us
TV9 Web
| Updated By: Rakesh Nayak Manchi

Updated on: Oct 16, 2022 | 1:04 PM

ಮದುವೆಯ ಪ್ರತಿ ಕ್ಷಣ ಮತ್ತು ಆಚರಣೆಯನ್ನು ವಧು-ವರರು ಸಹ ಆನಂದಿಸುತ್ತಾರೆ. ಏಕೆಂದರೆ ಈ ದಿನ ಇಬ್ಬರಿಗೂ ಬಹಳ ವಿಶೇಷವಾಗಿದೆ. ಇದೇ ಖುಷಿಗೆ ನವಜೋಡಿ ನೃತ್ಯ ಮಾಡುವುದು ಇತ್ಯಾದಿಗಳನ್ನು ಪ್ರದರ್ಶಿಸುತ್ತಾರೆ. ಇನ್ನೂ ಕೆಲವರು ಜನರನ್ನು ಅಚ್ಚರಿಗೊಳಿಸುವಂತೆ ಮಾಡುತ್ತಾರೆ. ಇದೇ ಕಾರಣಕ್ಕೆ ಮದುವೆಗೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಪಡೆಯುತ್ತವೆ. ಇದೀಗ ಮದುವೆಗೆ ಸಂಬಂಧಿಸಿದ ಮತ್ತೊಂದು ವಿಡಿಯೋ ವೈರಲ್ ಆಗುತ್ತಿದ್ದು, ಬೆಂಕಿಯ ನಡುವೆ ನವೊಜೋಡಿಯೊಂದು ಪರಸ್ಪರ ಆಲಿಂಗನ ಮಾಡಿಕೊಂಡು ನೃತ್ಯದಲ್ಲಿ ತೊಡಗಿಕೊಳ್ಳುವುದನ್ನು ನೋಡಬಹುದು.

ವಿಡಿಯೋದಲ್ಲಿ, ವಧು ಮತ್ತು ವರ ಪರಪಸ್ಪರ ಕೈ ಹಿಡಿದು ಆಲಿಂಗನ ಮಾಡಿಕೊಂಡು ಅತ್ತಿಂದ ಇತ್ತ, ಇತ್ತಿಂದ ಅತ್ತ ನೃತ್ಯ ಮಾಡುತ್ತಿರುತ್ತಾರೆ. ಈ ವೇಳೆ ಇಬ್ಬರು ಸ್ನೇಹಿತರು ವಧುವರನ ಸುತ್ತಲೂ ಹೃದಯದ ಆಕಾರದಲ್ಲಿ ಬೆಂಕಿ ಹತ್ತಿಕೊಳ್ಳುವ ದ್ರವವನ್ನು ಸಿಂಪಡಿಸಿ ಬೆಂಕಿ ಹಚ್ಚುವುದನ್ನು ನೋಡಬಹುದು. ಇದನ್ನು ನೋಡಿದ ಅತಿಥಿಗಳು ಆಶ್ಚರ್ಯಗೊಳ್ಳುತ್ತಾರೆ. ಈ ವಿಡಿಯೋ ಅರೇಬಿಯಾ ದೇಶದ್ದು ಎಂದು ಹೇಳಲಾಗುತ್ತಿದೆ.

ಈ ವೀಡಿಯೊವನ್ನು edi_musaku ಎಂಬ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, 53 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಒಂದಷ್ಟು ನೆಟ್ಟಿಗರು ವಿಡಿಯೋಗೆ ಕಾಮೆಂಟ್ ಮತ್ತು ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ. ಒಬ್ಬ ಬಳಕೆದಾರ, ‘ಯಾವುದೇ ಅಹಿತಕರ ಘಟನೆ ಈ ಸಂತೋಷದಾಯಕ ಸಂದರ್ಭದಲ್ಲಿ ಸಂಭವಿಸಬಹುದಿತ್ತು’ ಎಂದು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರರು, ‘ಇಂದಿನ ದಿನಗಳಲ್ಲಿ ಜನರು ತಮ್ಮ ಮದುವೆಯನ್ನು ವಿಶೇಷವಾಗಿಸಲು ಏನೂ ಮಾಡುತ್ತಾರೆ ಎಂದು ತಿಳಿದಿಲ್ಲ’ ಎಂದಿದ್ದಾರೆ. ‘ಅಂತಹ ಸ್ನೇಹಿತರನ್ನು ಮದುವೆಗೆ ಆಹ್ವಾನಿಸದಿದ್ದರೆ ಒಳ್ಳೆಯದು’ ಎಂದು ಇನ್ನೊಬ್ಬ ಬಳಕೆದಾರ ಹೇಳಿಕೊಂಡಿದ್ದಾರೆ.

View this post on Instagram

A post shared by Edi Musaku (@edi_musaku)

ಮತ್ತಷ್ಟು ವೈರಲ್ ವಿಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ