Viral Video: ಮೈ ರೋಮ ನೆಟ್ಟಗಾಗುವಂತೆ ಮಾಡುತ್ತಿದೆ ಭೀಕರ ಅಪಘಾತದ ವಿಡಿಯೋ

ಭೀಕರ ಅಪಘಾತದಲ್ಲಿ ಚಾಲಕ ಕಾರಿನಿಂದ ಹೊರಗೆ ಎಸೆಯಲ್ಪಟ್ಟ ವಿಡಿಯೋ ಮೈ ರೋಮಗಳು ನೆಟ್ಟಗಾಗುವಂತೆ ಮಾಡುತ್ತಿದೆ. ಅವರು ಬದುಕುಳಿದಿದ್ದಾರೆ ಎಂದು ಮೂಲಗಳು ತಿಳಿಸಿವೆ, ಆದರೆ ಬದುಕುಳಿದಿರುವ ಬಗ್ಗೆ ಅನುಮಾನಿಸಿದ್ದಾರೆ.

Viral Video: ಮೈ ರೋಮ ನೆಟ್ಟಗಾಗುವಂತೆ ಮಾಡುತ್ತಿದೆ ಭೀಕರ ಅಪಘಾತದ ವಿಡಿಯೋ
ಭೀಕರ ಅಪಘಾತದ ದೃಶ್ಯ
Follow us
TV9 Web
| Updated By: Rakesh Nayak Manchi

Updated on:Oct 16, 2022 | 11:36 AM

ರಸ್ತೆಗಳಲ್ಲಿ ಯಾವಾಗಲೂ ಎಚ್ಚರಿಕೆಯಿಂದ ಚಾಲನೆ ಮಾಡಬೇಕು, ಇಲ್ಲವಾದರೆ ರಸ್ತೆ ಅಪಘಾತದಲ್ಲಿ ಜೀವ ಹಾನಿ ಸಂಭವಿಸಬಹುದು. ಇಂತಹ ಮನವಿಗಳನ್ನು ಪೊಲೀಸರು ಮತ್ತು ಸರ್ಕಾರದ ಕಡೆಯಿಂದ ಯಾವಾಗಲೂ ಮಾಡಲಾಗುತ್ತದೆ. ಇದರ ಹೊರತಾಗಿಯೂ ಕೆಲವರು ಅಜಾಗರೂಕತೆಯಿಂದ ವಾಹನ ಚಲಾಯಿಸಿ ತಮ್ಮ ಜೀವಕ್ಕೆ ಕುತ್ತು ತಂದುಕೊಳ್ಳುತ್ತಿದ್ದಾರೆ. ಅತಿವೇಗದ ಮೋಹ ಇರುವವರು ರಸ್ತೆಗಳಲ್ಲಿ ಅತಿವೇಗದಲ್ಲಿ ವಾಹನಗಳನ್ನು ಚಲಾಯಿಸುತ್ತಾರೆ. ಕೆಲವೊಮ್ಮೆ ಇಂತಹ ಚಾಲನೆಯಲ್ಲಿ ನಡೆಯುವ ಅಪಘಾತಗಳು ಮಾರಣಾಂತಿಕವಾಗಿರುತ್ತದೆ. ಅದಾಗ್ಯೂ ಈ ದುರ್ಘಟನೆಯಲ್ಲಿ ಕೆಲವರು ಬದುಕುಳಿಯುತ್ತಾರೆ, ಇನ್ನು ಕೆಲವರು ಮಸಣ ಸೇರುತ್ತಾರೆ. ಇಂತಹ ಅವಘಡಗಳಿಗೆ ಸಂಬಂಧಿಸಿದ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗುತ್ತಿರುತ್ತವೆ. ಇದೀಗ ಒಂದು ವಿಡಿಯೋ ವೈರಲ್ ಆಗುತ್ತಿದ್ದು, ಅಪಘಾತದ ಭೀಕರತೆಯನ್ನು ನೋಡಿದಾಗ ಮೈ ರೋಮ ನೆಟ್ಟಗಾಗುವಂತೆ ಮಾಡುತ್ತಿದೆ.

ಈ ವೀಡಿಯೊದಲ್ಲಿ, ವೇಗವಾಗಿ ಬಂದ ಕಾರು ಇದ್ದಕ್ಕಿದ್ದಂತೆ ಟೋಲ್ ಗೇಟ್ ಬಳಿಯ ಡಿವೈಡರ್‌ಗೆ ಡಿಕ್ಕಿ ಹೊಡೆಯುತ್ತದೆ. ಈ ರಭಸಕ್ಕೆ ಕಾರು ಮೇಲಕ್ಕೆ ಹಾರಿ ಗಾಳಿಯಲ್ಲಿ ಪಲ್ಟಿ ಹೊಡೆದಿದ್ದಲ್ಲದೆ ಬೆಂಕಿಯೂ ಹೊತ್ತಿಕೊಳ್ಳುತ್ತದೆ. ಈ ವೇಳೆ ಮುಂಭಾಗದ ಗ್ಲಾಸ್​ನಿಂದ ಚಾಲಕ ಹೊರಗೆ ಎಸೆಯಲ್ಪಟ್ಟು ಒಂದಷ್ಟು ದೂರದಲ್ಲಿ ಬೀಳುತ್ತಾನೆ. ಈ ಅಪಘಾತ ಎಷ್ಟು ಗಂಭೀರವಾಗಿದೆ ಎಂದು ಈಗ ನೀವು ಅರ್ಥಮಾಡಿಕೊಳ್ಳಬಹುದು. ಈ ಅಪಘಾತದಲ್ಲಿ ಚಾಲಕನ ಪ್ರಾಣ ಉಳಿದಿದೆಯೇ ಎಂಬುದು ನಿಖರವಾಗಿ ತಿಳಿದಿಲ್ಲ. ಆದರೆ ವಿಡಿಯೋ ಹಂಚಿಕೊಂಡವರು ಮೂಲಗಳನ್ನು ಉಲ್ಲೇಖಿಸಿ ಚಾಲಕನ ಜೀವವನ್ನು ಉಳಿಸಲಾಗಿದೆ ಎಂದು ಹೇಳಿದ್ದಾರೆ.

ViciousVideos ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಮೂಲಗಳ ಪ್ರಕಾರ ಚಾಲಕನ ಜೀವ ಉಳಿದಿದೆ, ಆದರೆ ನನಗೆ ಗೊತ್ತಿಲ್ಲ ಎಂದು ಶೀರ್ಷಿಕೆ ಬರೆಯಲಾಗಿದೆ. ಒಟ್ಟು 15 ಸೆಕೆಂಡ್​ಗಳ ಈ ವಿಡಿಯೋ 31 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಣೆ ಪಡೆದಿದ್ದು, ನೂರಾರು ಲೈಕ್​ಗಳು ಬಂದಿವೆ. ವಿಡಿಯೋ ನೋಡಿದ ನೆಟ್ಟಿಗರು ಗಂಭೀರತೆಯನ್ನು ಅರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದು, ಕೆಲವರು ಬದುಕುಳಿಯುವ ಸಾಧ್ಯತೆ ಬಗ್ಗೆ ತಿಳಿಸಿದರೆ ಇನ್ನು ಹಲವರು ಅನುಮಾನಿಸಿದ್ದಾರೆ. ಒಬ್ಬಾತ ಚಾಲಕ ನಿದ್ದೆ ಮಾಡಿರಬೇಕು ಎಂದು ಹೇಳಿದ್ದಾರೆ.

ಮತ್ತಷ್ಟು ವೈರಲ್ ವಿಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Published On - 11:18 am, Sun, 16 October 22