Shocking Video: ಟೇಕ್-ಆಫ್ ವೇಳೆ ವಿಮಾನದ ಟೈರ್ ಸ್ಫೋಟ

ಟೇಕ್​-ಆಫ್​ ಆಗುತ್ತಿದ್ದಂತೆ ವಿಮಾನದ ಚಕ್ರ ಸ್ಫೋಟಗೊಂಡ ಘನೆಯ ವಿಡಿಯೋ ವೈರಲ್ ಆಗುತ್ತಿದೆ. ಅದರ ನಂತರ ಏನಾಗುತ್ತದೆ ಎಂಬುದು ಆಶ್ಚರ್ಯಕರವಾಗಿದೆ.

Shocking Video: ಟೇಕ್-ಆಫ್ ವೇಳೆ ವಿಮಾನದ ಟೈರ್ ಸ್ಫೋಟ
ಟೇಕ್-ಆಫ್​ ವೇಳೆ ವಿಮಾನದ ಟೈರ್ ಸ್ಫೋಟ
Follow us
TV9 Web
| Updated By: Rakesh Nayak Manchi

Updated on:Oct 16, 2022 | 3:06 PM

ಸಾಮಾಜಿಕ ಜಾಲತಾಣದಲ್ಲಿ ವಿಮಾನದ ಆಘಾತಕಾರಿ ವಿಡಿಯೋವೊಂದು ವೈರಲ್ ಆಗುತ್ತಿದೆ. ಟೇಕ್-ಆಫ್​ ಆಗುತ್ತಿದ್ದಂತೆ ವಿಮಾನದ ಚಕ್ರವು ಸ್ಫೋಟಗೊಳ್ಳುತ್ತದೆ. ಅದರ ನಂತರ ಏನಾಗುತ್ತದೆ ಎಂಬುದು ಆಶ್ಚರ್ಯಕರವಾಗಿದೆ. ನೀವು ಸಾಮಾಜಿಕ ಮಾಧ್ಯಮಗಳಲ್ಲಿ ವಿಮಾನ ಲ್ಯಾಂಡ್ ಆಗುವುದು ಮತ್ತು ಮೇಲಕ್ಕೆ ಹಾರುವ ಅನೇಕ ವೀಡಿಯೊಗಳನ್ನು ನೋಡಿರುತ್ತೀರಿ. ಆದರೆ ಈ ವೀಡಿಯೊ ಖಂಡಿತವಾಗಿಯೂ ನಿಮ್ಮನ್ನು ಬೆಚ್ಚಿಬೀಳಿಸುತ್ತದೆ. ರನ್‌ವೇಯಲ್ಲಿ ವೇಗವಾಗಿ ಬಂದು ಟೇಕ್ ಆಫ್ ಆಗುತ್ತದೆ. ಸ್ವಲ್ಪ ಮೇಲಕ್ಕೆ ಹೋಗುತ್ತಿದ್ದಂತೆ ಚಕ್ರ ಸ್ಫೋಟಗೊಂಡು ಕೆಳಗೆ ಬೀಳುವುದನ್ನು ವೈರಲ್ ವಿಡಿಯೋ (Viral Video)ತೋರಿಸುತ್ತದೆ.

ಇಟಾಲಿಯನ್ ವಿಮಾನದ್ದು ಎಂದು ಹೇಳಲಾಗುತ್ತಿರುವ ವಿಡಿಯೋದಲ್ಲಿ ಅಟ್ಲಾಸ್ ಏರ್‌ನ ಡ್ರೀಮ್‌ಲಿಫ್ಟರ್ ಬೋಯಿಂಗ್ 747 ವಿಮಾನವು ರನ್‌ವೇಯಿಂದ ಟೇಕಾಫ್ ಆಗುತ್ತಿದ್ದಂತೆ ಮುಖ್ಯ ಲ್ಯಾಂಡಿಂಗ್ ಗೇರ್ ಟೈರ್ ಬೆಂಕಿಯ ಚೆಂಡಾಗಿ ಮಾರ್ಪಟ್ಟು ವಿಮಾನದಿಂದ ಬೇರ್ಪಟ್ಟು ಭೂಮಿಗೆ ಬೀಳುವುದನ್ನು ವೀಡಿಯೊದಲ್ಲಿ ಕಾಣಬಹುದು. ಹೀಗೆ ಬಿದ್ದ ಚಕ್ರ ದ್ರಾಕ್ಷಿತೋಟದಲ್ಲಿ ಪತ್ತೆಯಾಗಿದೆ. ವಿಮಾನದಿಂದ ಬೇರ್ಪಟ್ಟ ಟೈರ್ ಸುಮಾರು 100 ಕೆ.ಜಿ. ಇದೆ.

ಇಟಲಿಯ ಟೊರೊಂಟೊ ವಿಮಾನ ನಿಲ್ದಾಣದಲ್ಲಿ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಟೈರ್ ವಿಮಾನದಿಂದ ಬೇರ್ಪಟಟ್ಟು ದ್ರಾಕ್ಷಿತೋಟದಲ್ಲಿ ಬಿದ್ದಿದೆ. ಅಪಘಾತದ ನಂತರ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು. ಆದಾಗ್ಯೂ ಲ್ಯಾಂಡಿಂಗ್ ಸಮಯದಲ್ಲಿ ಯಾವುದೇ ಅಪಘಾತ ಸಂಭವಿಸಿಲ್ಲ ಮತ್ತು ವಿಮಾನದಲ್ಲಿ ಅಳವಡಿಸಲಾದ ಇತರ ಚಕ್ರಗಳ ಸಹಾಯದಿಂದ ಅಮೆರಿಕದಲ್ಲಿ ವಿಮಾನವನ್ನು ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಲಾಗಿದೆ. ಯುಎಸ್‌ನ ಚಾರ್ಲ್ಸ್‌ಟನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸರಕು ಸಾಗಣೆ ವಿಮಾನವು ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಿದೆ ಎಂದು ಬೋಯಿಂಗ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಮತ್ತಷ್ಟು ವೈರಲ್ ವಿಡಿಯೋ ವೀಕ್ಷಣೆ ಮಾಡಲು ಇಲ್ಲಿ ಕ್ಲಿಕ್ ಮಾಡಿ

Published On - 3:06 pm, Sun, 16 October 22