AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ದಾಳಿ ಮಾಡಿದ ಸಿಂಹಿಣಿಗೆ ತಕ್ಕ ಶಾಸ್ತಿ ಮಾಡಿದ ಕೃಷ್ಣಮೃಗ

ಬೇಟೆ ಸಿಕ್ಕಿತು ಅಂದುಕೊಂಡು ಓಡೋಡಿ ಬಂದ ಸಿಂಹಿಣಿಗೆ ತನ್ನ ಬಾಗಿದ ಮತ್ತು ಚೂಪಾದ ಕೊಂಬುಗಳಿಂದ ತಿವಿದು ಸಿಂಹವನ್ನು ಓಡಿಸಿದ ಕೃಷ್ಣಮೃಗದ ವಿಡಿಯೋ ವೈರಲ್ ಆಗುತ್ತಿದೆ.

Viral Video: ದಾಳಿ ಮಾಡಿದ ಸಿಂಹಿಣಿಗೆ ತಕ್ಕ ಶಾಸ್ತಿ ಮಾಡಿದ ಕೃಷ್ಣಮೃಗ
ದಾಳಿ ಮಾಡಿದ ಸಿಂಹಿಣಿಗೆ ತಕ್ಕ ಶಾಸ್ತಿ ಮಾಡಿದ ಕೃಷ್ಣಮೃಗ
TV9 Web
| Edited By: Rakesh Nayak Manchi|

Updated on: Oct 17, 2022 | 10:17 AM

Share

ಬಲಿಷ್ಠ ಪ್ರಾಣಿಗಳಾದ ಸಿಂಹ, ಹುಲಿಯಂತಹ ಪ್ರಾಣಿಗಳ ಮುಂದೆ ಯಾವುದೇ ಬೇಟೆ ಹಾದು ಹೋದರೂ ಅವುಗಳ ಸಾವು ನಿಶ್ಚಿತ. ಅದಾಗ್ಯೂ ಕೆಲವೊಮ್ಮೆ ಬೇಟೆಯಾಡಿದ ಪ್ರಾಣಿಗಳ ಪ್ರಬಲ ಪ್ರತಿರೋಧದಿಂದ ಬೇಟೆ ತಪ್ಪಿಹೋಗುವುದುಂಟು. ಸಿಂಹ ಕತ್ತೆಕಿರುಬದ ಮೇಲೆ ದಾಳಿ ನಡೆಸಿ ಬೇಟೆ ಬಲಿ ಪಡೆಯಲು ಸಾಧ್ಯವಾಗದೇ ಕೈಸುಟ್ಟುಕೊಂಡ ವಿಡಿಯೋ ಇತ್ತೀಚೆಗೆ ವೈರಲ್ ಆಗಿತ್ತು. ಇದೀಗ ಮತ್ತೊಂದು ವಿಡಿಯೋ ವೈರಲ್ ಆಗತ್ತಿದ್ದು, ಇದರಲ್ಲಿ ಕೃಷ್ಣಮೃಗ (ಹಲ್ಲೇಕರ)ದ ಮೇಲೆ ದಾಳಿ ನಡೆಸಿದ ಸಿಂಹಿಣಿ ಬೇಟೆ ಮಣಿಸಲಾಗದೆ ಓಡಿಹೋಗುವುದನ್ನು ಕಾಣಬಹುದು.

ವಿಡಿಯೋದಲ್ಲಿ ಕಾಣುವಂತೆ, ಒಂದು ಸಣ್ಣ ಕೊಳದಲ್ಲಿ ಹುಲ್ಲೇಕರ ನೀರು ಕುಡಿಯುತ್ತಿರುತ್ತದೆ. ದೂರದಿಂದಲೇ ನೋಡಿದ ಸಿಂಹಿಣಿ ಭರ್ಜರಿಯಾಗಿ ಮಾಂಸ ಸವಿಯಬಹುದು ಎಂದು ಓಡೋಡಿ ಬಂದು ಹುಲ್ಲೇಕರದ ಮೇಲೆರಗಿದೆ. ಈ ವೇಳೆ ತನ್ನನ್ನು ರಕ್ಷಿಸಿಕೊಳ್ಳಲು ಹುಲ್ಲೇಕರ ಬಾಗಿದ ಕೊಂಬುಗಳಿಂದ ಸಿಂಹಿಣಿಗೆ ಚುಚ್ಚಲು ಆರಂಭಿಸುತ್ತದೆ. ನೋವಿನಿಂದ ಬೇಟೆ ಬಿಟ್ಟ ಸಿಂಹಿಣಿ ಕೊಳದ ಮೂಲಕ ಓಡಿ ಹೋಗುತ್ತದೆ.

ದಿ ಡಾರ್ಕ್ ಸೈಡ್ ಆಫ್ ನೇಚರ್ ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಇದರ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, “ಪ್ರತಿದಾಳಿಯೇ ಅತ್ಯುತ್ತಮ ರಕ್ಷಣಾ ತಂತ್ರ, ಹುಲ್ಲೇಕರ ತನ್ನ ಬಾಗಿದ ಕೊಂಬುಗಳನ್ನು ಸಿಂಹಿಣಿಯನ್ನು ಓಡಿಸಲು ಬಳಸುತ್ತದೆ” ಎಂದು ಶೀರ್ಷಿಕೆ ಬರೆಯಲಾಗಿದೆ. ಇತ್ತೀಚಿಗೆ ಹಂಚಿಕೊಂಡಿರುವ ಈ ವಿಡಿಯೋ 1 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದ್ದು, 72 ಸಾವಿರಕ್ಕೂ ಹೆಚ್ಚು ನೆಟ್ಟಿಗರು ಲೈಕ್​ಗಳನ್ನು ನೀಡಿದ್ದಾರೆ.

ಮತ್ತಷ್ಟು ವೈರಲ್ ವಿಡಿಯೋಗಳನ್ನು ವಿಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Follow Us
TV9 Web
TV9 Web

TV9 Kannada

Read More
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ