ತರುಣಿಯೊಬ್ಬಳಿಗೆ ಡೇಟಿಂಗ್ ಸಲಹೆ ನೀಡಿದ ಜೋ ಬೈಡನ್, ನೆಟ್ಟಿಗರಿಂದ ಮಿಶ್ರಪ್ರತಿಕ್ರಿಯೆ
Biden Offers Dating Advice : ‘ನಿಮಗೆ 30 ವರ್ಷಗಳಾಗುವವರೆಗೂ ಯಾವ ಹುಡುಗರನ್ನೂ ಗಂಭೀರವಾಗಿ ಪರಿಗಣಿಸಬೇಡಿ’ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್, ತರುಣಿಯೊಬ್ಬಳಿಗೆ ಸಾರ್ವಜನಿಕವಾಗಿ ಡೇಟಿಂಗ್ ಸಲಹೆ ನೀಡಿದ್ದಾರೆ.
Viral Video : ‘ನಿಮಗೆ 30 ವರ್ಷಗಳಾಗುವತನಕ ಯಾವ ಹುಡುಗರನ್ನೂ ಗಂಭೀರವಾಗಿ ಪರಿಗಣಿಸಬೇಡಿ’ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್ ತರುಣಿಯೊಬ್ಬಳಿಗೆ ಸಾರ್ವಜನಿಕವಾಗಿ ಸಲಹೆ ನೀಡದ್ದಾರೆ. ಕ್ಯಾಲಿಫೋರ್ನಿಯಾದ ಐರ್ವಿನ್ ವ್ಯಾಲಿ ಕಮ್ಯೂನಿಟಿ ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಬೈಡನ್ ಹೀಗೊಂದು ಅನಿರೀಕ್ಷಿತ ಡೇಟಿಂಗ್ ಸಲಹೆ ಕೊಟ್ಟಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ನೆಟ್ಟಿಗರು ವಿಧವಿಧವಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ
President Joe Biden grabs a young girl by the shoulder and tells her “no serious guys till your 30” as she looks back appearing uncomfortable, secret service appears to try to stop me from filming it after Biden spoke @ Irvine Valley Community College | @TPUSA @FrontlinesShow pic.twitter.com/BemRybWdBI
ಇದನ್ನೂ ಓದಿ— Kalen D’Almeida (@fromkalen) October 15, 2022
ಬೈಡನ್ ಜೊತೆ ಫೋಟೋ ತೆಗೆಸಿಕೊಳ್ಳಲು ಬಂದ ಈ ತರುಣಿಗೆ, ಹೀಗೊಂದು ಸಲಹೆ ಸಿಗಬಹುದು ಎಂಬ ನಿರೀಕ್ಷೆಯೇ ಇರಲಿಲ್ಲ. ಆಕೆಯ ಭುಜ ಬಳಿಸಿದ ಬೈಡನ್, ‘30 ಆಗುವತನಕ ಯಾವ ಹುಡುಗರನ್ನೂ ಗಂಭೀರವಾಗಿ ಪರಿಗಣಿಸಬೇಡಿ ಈ ವಿಷಯವನ್ನು ನನ್ನ ಹೆಣ್ಣುಮಕ್ಕಳಿಗೆ ಮತ್ತು ಮೊಮ್ಮಕ್ಕಳಿಗೂ ಹೇಳಿದ್ದೇನೆ’ ಎನ್ನುತ್ತಾರೆ. ಆಗ ಆಕೆ ಕೊಂಚ ಗಲಿಬಿಲಿಗೆ ಬೀಳುತ್ತಾಳೆ. ನಂತರ ‘ಹಾಗೇ ಆಗಲಿ ಈ ವಿಷಯವನ್ನು ಗಮನದಲ್ಲಿಟ್ಟುಕೊಳ್ಳುತ್ತೇನೆ’ ಎಂದು ನಗುತ್ತ ಉತ್ತರಿಸುತ್ತಾಳೆ.
ಈ ವಿಡಿಯೋ ಅನ್ನು 5.2 ಮಿಲಿಯನ್ ವೀಕ್ಷಕರು ನೋಡಿದ್ದಾರೆ. ನೆಟ್ಟಿಗರು ತಮ್ಮ ಅಸಮಾಧಾನವನ್ನು ರೀಟ್ವೀಟ್ ಮಾಡುವುದರ ಮೂಲಕ ವ್ಯಕ್ತಪಡಿಸಿದ್ಧಾರೆ. ಈ ವಿಡಿಯೋ ನೋಡಲು ತುಂಬಾ ಕಿರಿಕಿರಿ ಎನ್ನಿಸುತ್ತದೆ, ಸಾರ್ವಜನಿಕವಾಗಿ ಮಕ್ಕಳೊಂದಿಗೆ ಅವರು ಹೀಗೆ ವರ್ತಿಸಿದ್ದು ಸರಿಯಲ್ಲ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ನಿಮ್ಮ ಮಕ್ಕಳೊಂದಿಗೆ ಬೈಡನ್ ಹೀಗೆ ವರ್ತಿಸಲು ಅನುವು ಮಾಡಿಕೊಡುತ್ತೀರಾ?’ ಎಂದು ಒಬ್ಬರು ಪ್ರಶ್ನಿಸಿದ್ದಾರೆ. ‘ಡೇಟಿಂಗ್ ಬಗ್ಗೆ ಮಾತನಾಡಲು ಯಾವ ವಯಸ್ಸಿನವರಿಗೂ ಮುಜುಗರವಾಗುತ್ತದೆ. ಅಂಥದ್ದರಲ್ಲಿ ಈ ವಯಸ್ಸಾದ ವ್ಯಕ್ತಿ ಹೀಗೆ ತರುಣಿಯ ಭುಜದ ಮೇಲೆ ಕೈಹಾಕಿ ಮಾತನಾಡುವುದೆಂದರೆ…’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಮತ್ತೊಬ್ಬರು. ಅಲ್ಲೊಬ್ಬರು ಇಲ್ಲೊಬ್ಬರು, ‘ನಿಮ್ಮ ಸಲಹೆ ಸರಿಯಾಗಿದೆ’ ಎಂದಿದ್ದಾರೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 10:37 am, Mon, 17 October 22