ನನ್ನ ಭಾರತೀಯ ಸ್ನೇಹಿತರು ಈ ವಿಡಿಯೋ ನೋಡಬೇಕು ಎಂದ ಈ ಪಾಕಿಸ್ತಾನಿ ವ್ಯಕ್ತಿ
Pakistani man’s warm gesture : ‘ಗಡಿ ದಾಟುವಾಗ ಸ್ವಲ್ಪ ಭಯವಿತ್ತು. ಆದರೆ ಇಲ್ಲಿಗೆ ಬಂದಮೇಲೆ ಇಷ್ಟೊಂದು ಆಪ್ತ ವಾತಾವರಣ ಇರುತ್ತದೆಯೆಂದು ಊಹಿಸಿರಲಿಲ್ಲ. ನಿಜ ಹೇಳಬೇಕೆಂದರೆ ಭಾರತದಲ್ಲಿಯೂ ಇಂಥ ಪ್ರೀತಿ ಸಿಕ್ಕಿರಲಿಲ್ಲ.’
Viral Video : ನನ್ನ ಭಾರತೀಯ ಸ್ನೇಹಿತರು ಮತ್ತು ಸೋಶಿಯಲ್ ಮೀಡಿಯಾ ಫಾಲೋವರ್ಗಳು ಈ ವಿಡಿಯೋ ನೋಡಬೇಕೆಂದು ನಾನು ಕೇಳಿಕೊಳ್ಳುತ್ತೇನೆ ಎಂದು ಟ್ವೀಟ್ ಮಾಡಿ ಈ ನೋಟ್ ಬರೆದಿದ್ದಾರೆ ಪಾಕಿಸ್ತಾನಿ ನಿವಾಸಿ ಇಹ್ತಿಶಮ್ ಉಲ್ ಹಕ್; ‘ಭಾರತೀಯ ಕುಟುಂಬವೊಂದು, ತಮ್ಮ ಹೆಣ್ಣುಮಕ್ಕಳನ್ನು ಟೆನ್ನಿಸ್ ಪಂದ್ಯಕ್ಕಾಗಿ ಇಸ್ಲಾಮಾಬಾದಿಗೆ ಕರೆದುಕೊಂಡು ಹೋಗುತ್ತಿರುವಾಗ ಮಾರ್ಗಮಧ್ಯೆ ನನ್ನ ಸ್ನೇಹಿತ ತಾಹಿರ್ ಖಾನ್ ಅವರನ್ನು ಭೇಟಿಯಾಗಿ ಲಿಫ್ಟ್ ಕೇಳಿದೆ. ಆ ಒಡನಾಟದ ಅನುಭವವನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ. ನಿಜವಾದ ಪಾಕಿಸ್ತಾನವೆಂದರೆ ಇದು.’
1/2 How sweet ? pic.twitter.com/8Oiv1QfTLn
ಇದನ್ನೂ ಓದಿ— Ihtisham Ul Haq (@iihtishamm) November 8, 2022
‘ಪಾಕಿಸ್ತಾನದ ಇಸ್ಲಾಮಾಬಾದಿನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಟೆನ್ನಿಸ್ ಪಂದ್ಯಾವಳಿಗೆ ಹೈದರಾಬಾದ್ ಮೂಲದ ಈ ಇಬ್ಬರೂ ಪೋಷಕರು ತಮ್ಮ ಹೆಣ್ಣುಮಕ್ಕಳನ್ನು ಕರೆದೊಯ್ದಿದ್ದಾರೆ. ಮಾರ್ಗ ಮಧ್ಯೆ ಪಾಕಿಸ್ತಾನದ ವ್ಯಕ್ತಿಯೊಬ್ಬರು ಕಾರಿನಲ್ಲಿ ಬರುತ್ತಿರುವುದನ್ನು ನೋಡಿ ಲಿಫ್ಟ್ ಕೇಳಿದ್ದಾರೆ. ‘ಗಡಿ ದಾಟುವಾಗ ಸ್ವಲ್ಪ ಭಯವಾಯಿತು. ಆದರೆ ಇಲ್ಲಿಗೆ ಬಂದಮೇಲೆ ಇಷ್ಟೊಂದು ಆಪ್ತ ವಾತಾವರಣ ಇರುತ್ತದೆ ಎಂದು ಊಹಿಸಿರಲಿಲ್ಲ. ನಿಜ ಹೇಳಬೇಕೆಂದರೆ ಭಾರತದಲ್ಲಿಯೂ ಇಂಥ ಪ್ರೀತಿ ಸಿಕ್ಕಿರಲಿಲ್ಲ. ದೇವರು ಈ ದೇಶವನ್ನು ಹೆಚ್ಚು ಆಶೀರ್ವದಿಸಲಿ’ ಎಂದಿದ್ದಾರೆ ಒಬ್ಬ ಪೋಷಕರು.
‘ದೇವರನ್ನು ನಂಬಿ ಇಲ್ಲಿಗೆ ಬಂದಿದ್ದೇವೆ. ಭಾರತದಂತೆಯ ಇಲ್ಲಿಯೂ ಆಪ್ತವಾದ ವಾತಾವರಣ ಇದೆ’ ಎಂದಿದ್ದಾರೆ ಇನ್ನೊಬ್ಬ ಪೋಷಕರು.
ಇವರಿಗೆ ಲಿಫ್ಟ್ ಕೊಟ್ಟ ವ್ಯಕ್ತಿ ತಾಹೀರ್, ‘ಇವರು ಹೈದರಾಬಾದಿನಿಂದ ಬಂದಿದ್ದಾರೆ ಎಂದು ತಿಳಿದು ಸಂತೋಷವಾಯಿತು. ನೀವು ಎಲ್ಲಿ ಹೋಗಬೇಕೋ ಅಲ್ಲಿ ಡ್ರಾಪ್ ಮಾಡುತ್ತೇನೆ. ಆದರೆ ನೀವು ನಮ್ಮ ಅತಿಥಿಗಳು. ನಮ್ಮ ಆತಿಥ್ಯವನ್ನು ನೀವು ಸ್ವೀಕರಿಸಲೇಬೇಕು. ಹೈದರಾಬಾದಿ ಬಿರಿಯಾನಿ, ಕಾಬೂಲಿ ಪುಲಾವ್, ಜಾಮೂನ್ ಖೀರ್ ಎಲ್ಲ ಇದೆ’ ಎಂದು ಹೋಟೆಲಿಗೆ ಕರೆದುಕೊಂಡು ಬಂದಿದ್ದಾರೆ. .
ಟೆನ್ನಿಸ್ ಪಂದ್ಯಾವಳಿಯಲ್ಲಿ ಭಾಗವಹಿಸಲು ಬಂದ ಹುಡುಗಿಯರು, ‘ಇಲ್ಲಿಗೆ ಬರುವ ಇದೆಲ್ಲವನ್ನೂ ನಾವು ನಿರೀಕ್ಷಿಸಿರಲಿಲ್ಲ. ಬಹಳ ಸುಂದರವಾಗಿದೆ ಪಾಕಿಸ್ತಾನ’ ಎನ್ನುತ್ತಾರೆ. ಅದಕ್ಕೆ ಪ್ರತಿಯಾಗಿ ತಾಹೀರ್, ‘ಹಾಗಿದ್ದರೆ ಯಾರು ಗೆಲ್ಲುತ್ತಾರೆ?’ ಎಂದು ಪ್ರಶ್ನಿಸುತ್ತಾರೆ. ‘ಅದನ್ನು ದೇವರು ನಿರ್ಣಯಿಸುತ್ತಾನೆ’ ಎನ್ನುತ್ತಾರೆ ಹುಡುಗಿಯರು.
ಈ ವಿಡಿಯೋ ಈತನಕ 3.5 ಲಕ್ಷಕ್ಕೂ ಹೆಚ್ಚು ಜನರನ್ನು ತಲುಪಿದೆ. ನೆಟ್ಟಿಗರು ಈ ಸೌಹಾರ್ದಯುತ ಭೇಟಿಯನ್ನು ಶ್ಲಾಘಿಸುತ್ತಿದ್ದಾರೆ. ಮಾನವೀಯತೆ ಇನ್ನೂ ಜೀವಂತವಿದೆ ಎನ್ನುವುದಕ್ಕೆ ಇಂಥ ಘಟನೆಗಳು ಸಾಕ್ಷಿ ಎಂದು ಖುಷಿಗೊಳ್ಳುತ್ತಿದ್ದಾರೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 2:16 pm, Wed, 9 November 22