AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಮಾನದಲ್ಲಿ ಸಹಪ್ರಯಾಣಿಕನೊಂದಿಗೆ ಶರ್ಟ್ ಬಿಚ್ಚಿ ಹೊಡೆದಾಟಕ್ಕಿಳಿದ ಯುವಕನ ವಿಡಿಯೋ ವೈರಲ್

Biman Bangladesh Airlines : ಈ ಪ್ರಕರಣ ಬಿಮಾನ್​ ಬಾಂಗ್ಲಾದೇಶ್​ ವಿಮಾನದಲ್ಲಿ ನಡೆದಿದೆ. ಇಂಥ ಅನುಚಿತ ವರ್ತನೆಗಳು ಹೆಚ್ಚಾಗುತ್ತಿವೆ. ರೌಡಿ ಮನಸ್ಥಿತಿಯುಳ್ಳವರಿಗೆ ವಿಮಾನ ಪ್ರಯಾಣವನ್ನು ಅನುಮತಿಸಬೇಡಿ ಎನ್ನುತ್ತಿದ್ದಾರೆ ನೆಟ್ಟಿಗರು.

ವಿಮಾನದಲ್ಲಿ ಸಹಪ್ರಯಾಣಿಕನೊಂದಿಗೆ ಶರ್ಟ್ ಬಿಚ್ಚಿ ಹೊಡೆದಾಟಕ್ಕಿಳಿದ ಯುವಕನ ವಿಡಿಯೋ ವೈರಲ್
ಬಿಮಾನ್​ ಬಾಂಗ್ಲಾದೇಶ ವಿಮಾನದಲ್ಲಿ ಶರ್ಟ್​ ಬಿಚ್ಚಿ ಜಗಳಾಡುತ್ತಿರುವ ಯುವಕ
TV9 Web
| Updated By: ಶ್ರೀದೇವಿ ಕಳಸದ|

Updated on:Jan 10, 2023 | 10:40 AM

Share

Viral Video : ಬಸ್ಸು ಏರಿದರೂ, ರೈಲು ಏರಿದರೂ, ವಿಮಾನ ಏರಿದರೂ ಅಲ್ಲಿರುವ ಮನುಷ್ಯರು ಮನುಷ್ಯರೇ. ಮನುಷ್ಯನ ಮನಸ್ಸು ಯಾವಾಗ ಎಲ್ಲಿ ಯಾಕಾಗಿ ಹೇಗೆ ಸಿಡಿದೇಳುತ್ತದೆ ಎಂದು ಊಹಿಸಲಾಗದು. ಗಗನಸಖಿಯ ಮೇಲೆ ಉಗುಳುವುದು, ಮಹಿಳಾ ಪ್ರಯಾಣಿಕರ ಮೇಲೆ ಮೂತ್ರ ಮಾಡುವುದು ಹೀಗೆ ಒಂದಿಲ್ಲಾ ಒಂದು ಅಸಭ್ಯ ಘಟನೆಗಳು ನಡೆಯುತ್ತಲೇ ಇವೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಬಿಮಾನ್​ ಬಾಂಗ್ಲಾದೇಶ ಏರ್​ವೇಸ್​ನಲ್ಲಿ (Biman Bangladesh Boeing 777) ಪ್ರಯಾಣಿಕನೊಬ್ಬ ಶರ್ಟ್​ ಬಿಚ್ಚಿ ಸಹಪ್ರಯಾಣಿಕನ ಮೇಲೆ ಹಲ್ಲೆ ಮಾಡಿದ್ದಾನೆ. ಅಲ್ಲಿದ್ದ ಕೆಲವರು ಈತನನ್ನು ತಡೆಯಲು ಪ್ರಯತ್ನಿಸಿದರೂ ವಿಫಲವಾಗಿದೆ.

ಬಿಟಾಂಕೊ ಬಿಸ್ವಾಸ್ ಎನ್ನುವವರು ಈ ವಿಡಿಯೋ ಟ್ವೀಟ್ ಮಾಡಿದ್ದಾರೆ. ಬಿಮಾನ್​ ಬಾಂಗ್ಲಾದೇಶದ ವಿಮಾನದಲ್ಲಿ ನಡೆದ ಈ ಘಟನೆಯ ವಿಡಿಯೊ ಅನ್ನು 15,000 ಜನರು ನೋಡಿದ್ದಾರೆ. ನೂರಾರು ಜನರು ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ. ವಿಮಾನಪ್ರಯಾಣದಲ್ಲಿ ಇಂಥ ಅನುಚಿತ ವರ್ತನೆಗಳು ಹೆಚ್ಚಾಗುತ್ತಿವೆ. ರೌಡಿ ಮನಸ್ಥಿತಿಯುಳ್ಳ ಪ್ರಯಾಣಿಕರಿಗೆ ಅನುಮತಿಸಬೇಡಿ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಇಂಥ ಕ್ರೂರ ಪ್ರಯಾಣಿಕರೊಂದಿಗೆ ಉಳಿದವರು ಹೇಗೆ ಪ್ರಯಾಣಿಸಬೇಕು? ಈ ಬಗ್ಗೆ ವಿಮಾನ ಸಂಸ್ಥೆಗಳು ವಿಶೇಷ ಗಮನ ಕೊಡಬೇಕು. ಇಂಥವರ ಪ್ರಯಾಣವನ್ನು ಶಾಶ್ವತವಾಗಿ ರದ್ದುಗೊಳಿಸಬೇಕು ಎಂದಿದ್ದಾರೆ ಹಲವರು.

ಇದನ್ನೂ ಓದಿ : Air India: ಮಹಿಳೆ ಮೇಲೆ ಮೂತ್ರ ವಿಸರ್ಜನೆ ಪ್ರಕರಣ; ಕ್ಷಮೆ ಕೋರಿದ ಏರ್​ ಇಂಡಿಯಾ ಸಿಇಒ

ಅಂಥಾ ಏನೂ ಇಲ್ಲ, ಅವ ತನ್ನ ಶರ್ಟ್​ ವಾಪಾಸ್ ಕೊಡಿ ಎಂದು ಕೇಳುತ್ತಿದ್ಧಾನೆಷ್ಟೇ ಎಂದು ಇಂಥ ಸಂದರ್ಭದಲ್ಲಿಯೂ ತಮಾಷೆ ಮಾಡಿದ್ಧಾರೆ ಅಸೂಕ್ಷ್ಮ ನೆಟ್ಟಿಗರೊಬ್ಬರು. ಇದು ವಿಮಾನ ಸಂಸ್ಥೆಗೂ ಕೆಟ್ಟ ಹೆಸರನ್ನು ತಂದುಕೊಡುತ್ತದೆ ಎಂದಿದ್ಧಾರೆ ಮತ್ತೊಬ್ಬರು. ವಿಮಾನಗಳಲ್ಲಿ ಆಲ್ಕೋಹಾಲ್​ ನೀಡುವುದನ್ನು ನಿಲ್ಲಿಸಿದರೆ ಮೇಲಿಂದ ಮೇಲೆ ನಡೆಯುವ ಇಂಥ ಪ್ರಕರಣಗಳನ್ನು ತಡೆಯಬಹುದು ಎಂದಿದ್ದಾರೆ ಕೆಲವರು.

ಇದನ್ನೂ ಓದಿ : ಶಾಲಾಮಕ್ಕಳು ಮತ್ತು ಪತ್ನಿಯೊಂದಿಗೆ ಅಸ್ಸಾಂನ ಮುಖ್ಯಮಂತ್ರಿ ನೃತ್ಯದ ವಿಡಿಯೋ ವೈರಲ್

ವಿಮಾನ ಹತ್ತುವ ಮೊದಲು ಎಲ್ಲ ಪ್ರಯಾಣಿಕರನ್ನು ಸೂಕ್ತವಾಗಿ ತಪಾಸಣೆಗೆ ಒಳಪಡಿಸಬೇಕು. ಇದು ಹೀಗೇ ಮುಂದುವರಿದರೆ ಅಪರಾಧ ಪ್ರಕರಣಗಳು ಹೆಚ್ಚುತ್ತ ಹೋಗುತ್ತವೆ. ವಯಸ್ಸಾದವರಿಗೆ, ಮಕ್ಕಳಿಗೆ, ಹೆಣ್ಣುಮಕ್ಕಳಿಗೆ ವಿಮಾನ ಪ್ರಯಾಣವೆಂದರೆ ಭಯ ಹುಟ್ಟಲಾರಂಭಿಸುತ್ತದೆ ಎಂದು ಅನೇಕರು ಹೇಳಿದ್ಧಾರೆ.

ಒಟ್ಟಾರೆಯಾಗಿ ಯಾಕೆ ಈ ವ್ಯಕ್ತಿ ಹೀಗೆ ವರ್ತಿಸುತ್ತಿದ್ದಾನೆ, ಇಲ್ಲಿ ಏನು ನಡೆಯುತ್ತಿದೆ ಎಂದು ಅನೇಕರು ಕೇಳಿದ್ಧಾರೆ. ಇಂಥವರಿಗೆ ಕೆಲ ಗಂಟೆಗಳ ಕಾಲ ತಮ್ಮಷ್ಟಕ್ಕೆ ತಾವು ಸುಮ್ಮನೆ ಕುಳಿತುಕೊಳ್ಳುವ ತಾಳ್ಮೆ ಇಲ್ಲವೆಂದರೆ ಏನು ಹೇಳುವುದು? ಎಂದಿದ್ದಾರೆ ಹಲವರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:39 am, Tue, 10 January 23

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?