ಆಹಾ ಬಾಳೆಹಣ್ಣು ಎಂದು ಕೈ ಹಾಕಿದಿರೋ ಅಯ್ಯೋ ಎಂದು ನರಳುವುದು ಗ್ಯಾರಂಟಿ

Ball Python : ಇನ್ನು ಯಾವತ್ತೂ ಪಚ್ಚಬಾಳೆಹಣ್ಣನ್ನು ತಿನ್ನುವುದೇ ಇಲ್ಲ ಎನ್ನುತ್ತಿದ್ದಾರೆ ಕೆಲವರು. ಇದು ವೇಷ ಬದಲಿಸುವ ಹಾವು ಹುಷಾರು ಎನ್ನುತ್ತಿದ್ದಾರೆ ಕೆಲವರು. 9 ಲಕ್ಷಕ್ಕಿಂತಲೂ ಹೆಚ್ಚು ಜನ ನೋಡಿದ ವಿಡಿಯೋ ಇದಾಗಿದೆ. ನೀವೇನಂತೀರಿ?

ಆಹಾ ಬಾಳೆಹಣ್ಣು ಎಂದು ಕೈ ಹಾಕಿದಿರೋ ಅಯ್ಯೋ ಎಂದು ನರಳುವುದು ಗ್ಯಾರಂಟಿ
ಬಾಳೆಹಣ್ಣಿನಂತೆ ಕಾಣುವ ಬಾಲ್​ ಪೈಥಾನ್​
Follow us
| Updated By: ಶ್ರೀದೇವಿ ಕಳಸದ

Updated on:Jan 09, 2023 | 5:26 PM

Viral Video : ಪಚ್ಚಬಾಳೆಹಣ್ಣಿನ ಪಕ್ಕ ಇರುವ ಇದು ಹಾವಿನಂಥ ಬಾಳೆಹಣ್ಣಲ್ಲ. ನಿಜವಾದ ಹಾವೇ. ಇದೀಗ ನೆಟ್ಟಿಗರನ್ನು ಕುತೂಹಲದಿಂದ ನೋಡುವಂತೆ ಮಾಡುತ್ತಿದೆ. ಈ ಹಾವನ್ನು ಬಾಲ್​ ಪೈಥಾನ್ (Ball Python)​ ಎನ್ನಲಾಗುತ್ತದೆ. ಹಳದಿ ಮೈಬಣ್ಣದ ಮೇಲೆ ಕಂದುಬಣ್ಣದ ಚುಕ್ಕೆಗಳನ್ನು ನೋಡುತ್ತಿದ್ದರೆ ಇದು ಮಾಗಿದ ಬಾಳೆ ಎಂದೇ ಹೇಳುವಷ್ಟು ಸಾಮ್ಯತೆಯಿಂದ ಕೂಡಿದೆ. ಆದರೆ ಇದು ಅಪಾಯಕಾರಿ ಹಾವು. ಆಹಾರವನ್ನು ಬೇಟೆಯಾಡಲು ಮತ್ತು ತನ್ನನ್ನು ತಾನು ರಕ್ಷಿಸಿಕೊಳ್ಳಲು ಮಾರುವೇಷದಲ್ಲಿ ಸುಳಿದಾಡುತ್ತದೆ.

ಸೈನ್ಸ್ ಗರ್ಲ್ ಎಂಬ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಡೈನಿಂಗ್ ಟೇಬಲ್ ಮೇಲೆ ಹಾವು ಮತ್ತು ಬಾಳೆಹಣ್ಣನ್ನು ಇಟ್ಟರೆ ಯಾರೂ ಸುಲಭವಾಗಿ ಮೋಸಹೋಗಬಹುದು. ಬಾಳೆಯ ಬದಲಾಗಿ ಹಾವನ್ನು ಮುಟ್ಟಿದವರ ಕಥೆ ಕೇಳಬೇಕೇ? ಈತನಕ ಈ ವಿಡಿಯೋ ಅನ್ನು 9 ಲಕ್ಷಕ್ಕಿಂತಲೂ ಹೆಚ್ಚು ಜನ ನೋಡಿದ್ದಾರೆ. 2,000ಕ್ಕಿಂತಲೂ ಹೆಚ್ಚು ಜನರು ರೀಟ್ವೀಟ್ ಮಾಡಿದ್ದಾರೆ. 15,000 ಕ್ಕಿಂತಲೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ.

ಇದನ್ನೂ ಓದಿ : ರಾಮೆನ್​ ಥಣ್ಣಗಾಗಿದ್ದಾನೆ! ಚಮಚ ಸಮೇತ ಹಿಮಗಟ್ಟಿದ ನೂಡಲ್ಸ್​ ವಿಡಿಯೊ ವೈರಲ್

ನಿಜವಾದ ಪಚ್ಚಬಾಳೆ ನೋಡಿದಾಗಲೂ ನನಗೀಗ ಇದು ಇದೇ ಹಾವೇ? ಎಂದು ಅನುಮಾನಿಸುವಷ್ಟು ಮನಸಲ್ಲಿ ಅಚ್ಚೊತ್ತಿದೆ ಎಂದಿದ್ದಾರೆ ಒಬ್ಬರು. ಇನ್ನು ಯಾವತ್ತೂ ನಾನು ಪಚ್ಚಬಾಳೆಹಣ್ಣನ್ನು ತಿನ್ನುವುದೇ ಇಲ್ಲ. ತಿನ್ನಲು ಹೋದರೆ ಹಾವೇ ಬಾಯಿಗೆ ಬಂದಹಾಗಾಗುತ್ತದೆ ಎಂದಿದ್ದಾರೆ ಮಗದೊಬ್ಬರು. ಇದು ವೇಷ ಬದಲಿಸುವ ಹಾವು ಹುಷಾರು! ಎಂದಿದ್ಧಾರೆ ಇನ್ನೂ ಒಬ್ಬರು.

ಪಶ್ಚಿಮ ಮತ್ತು ಮರ್ಧಯ ಆಫ್ರಿಕಾದಲ್ಲಿ ಈ ಬಾಲ್​ ಪೈಥಾನ್​ಗಳು ಹೆಚ್ಚಾಗಿ ವಾಸಿಸುತ್ತವೆ. ಪ್ರಾಣಿಪ್ರಿಯರು ಇವುಗಳನ್ನು ಸಾಕುತ್ತಾರೆ. ಇವು ವಿಷಕಾರಿಯಲ್ಲದಿದ್ದರೂ ವೈದ್ಯರ ಚಿಕಿತ್ಸೆ ಖಂಡಿತ ಬೇಕಾಗುತ್ತದೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 5:24 pm, Mon, 9 January 23