ವಧುವನ್ನು ಎತ್ತಿಕೊಂಡು ಮಂಟಪದಿಂದ ಇಳಿಯುತ್ತಿರುವಾಗ ಆಯತಪ್ಪಿ ಬಿದ್ದ ವರನ ವಿಡಿಯೋ ವೈರಲ್

Bridegroom : ತಾನು ಬಿದ್ದರೂ ವಧುವನ್ನು ತೋಳೊಳಗಿನಿಂದ ಕೆಳಗಿಳಿಸಿಲ್ಲ, ಗಾಬರಿಗೆ ಒಳಗಾಗಿಲ್ಲ. ಬದಲಾಗಿ ಆಕೆಯ ಕೆನ್ನೆಗೆ ಮುತ್ತು ಕೊಟ್ಟು ಸಮಾಧಾನಿಸಿದ್ದಾನೆ. ಆಕೆ ಅವಮಾನಿತಳಾಗದಂತೆ ಕಾಪಾಡಿದ್ದಾನೆ ವರ.

ವಧುವನ್ನು ಎತ್ತಿಕೊಂಡು ಮಂಟಪದಿಂದ ಇಳಿಯುತ್ತಿರುವಾಗ ಆಯತಪ್ಪಿ ಬಿದ್ದ ವರನ ವಿಡಿಯೋ ವೈರಲ್
ವಧುವನ್ನು ಎತ್ತಿಕೊಂಡು ಮಂಟಪದಿಂದ ಇಳಿಯುತ್ತಿರುವಾಗ ಆಯತಪ್ಪಿ ಬಿದ್ದ ವರ
Follow us
| Updated By: ಶ್ರೀದೇವಿ ಕಳಸದ

Updated on:Jan 10, 2023 | 2:44 PM

Viral Video : ಪ್ರೀ ವೆಡ್ಡಿಂಗ್​, ವೆಡ್ಡಿಂಗ್ ಫೋಟೋ ಶೂಟ್ ನಡೆಯುತ್ತಿರುವಾಗ ನಡೆದ ಅವಘಡಗಳನ್ನು ಅನೇಕ ವಿಡಿಯೋಗಳಲ್ಲಿ ನೋಡಿದ್ದೀರಿ. ಇತ್ತೀಚೆಗಷ್ಟೇ ಫೋಟೋ ವೆಡ್ಡಿಂಗ್​ ಶೂಟ್​ಗಾಗಿ ನರ್ತಿಸುತ್ತಿರುವ ವಧುವವರು ಮಂಟಪದ ಮೇಲೆಯೇ ಬಿದ್ದಿದ್ದನ್ನು ನೋಡಿರಬಹುದು. ಆದರೆ ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ವರ ವಧುವನ್ನು ಎತ್ತಿಕೊಂಡು ಮಂಟಪದಿಂದ ಮೆಟ್ಟಿಲು ಇಳಿಯುತ್ತಿರುವಾಗ ಆಯತಪ್ಪಿ ಬಿದ್ದಿದ್ದಾನೆ. ಆದರೂ ಗಾಬರಿಗೆ ಒಳಗಾಗದೆ, ಏನೂ ಆಗಿಲ್ಲ ಆಗುತ್ತೆ ಇದೆಲ್ಲ ಎಂದು ಹೇಳುತ್ತ ಅವಳಿಗೊಂದು ಮುತ್ತು ಕೊಟ್ಟು ಸಮಾಧಾನಿಸಿದ್ದಾನೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by joya jaan (@joyajaan816)

ಜೋಯಾ ಜಾನ್ ಎನ್ನುವವರು ಈ ವಿಡಿಯೋ ಅಪ್​ಲೋಡ್ ಮಾಡಿದ್ದಾರೆ. ಬೀಳುವುದೆಂದರೆ ಅವಮಾನ ತಾನೆ? ಆದರೆ ಧೃತಿಗೆಡದ ವರ ತಕ್ಷಣವೇ ಏನಾಗಲ್ಲ, ಇದೆಲ್ಲ ಆಗುವುದೇ ಎಂದು ವಧುವನ್ನು ಸಮಾಧಾನಿಸಿ ತಾನೂ ಗೆಲುವು ತಂದುಕೊಳ್ಳುತ್ತಾನೆ. ವಧುವಿಗೆ ಮುಜುಗರವಾಗದಂತೆ ಕಾಪಾಡುತ್ತಾನೆ. ನೆರೆದವರೆಲ್ಲ ಏನೂ ಆಗಿಲ್ಲ ಎಂದು ಹುರಿದುಂಬಿಸುತ್ತಾರೆ. ಗಮನಿಸಿದಿರಾ? ಬಿದ್ದರೂ ವಧುವನ್ನು ತೋಳೊಳಗಿನಿಂದ ಬಿಡುವುದಿಲ್ಲ ವರ!

ಇದನ್ನೂ ಓದಿ : ಬಾಲಕಾರ್ಮಿಕನೊಬ್ಬ ಅತೀ ಎತ್ತರದ ಜಾಗದಲ್ಲಿ ಕುಳಿತು ಕೆಲಸ ಮಾಡುತ್ತಿರುವ ವಿಡಿಯೋ ವೈರಲ್; ಕೋಪಗೊಂಡ ನೆಟ್ಟಿಗರು

ಈ ವಿಡಿಯೋ ಅನ್ನು, ಸುಮಾರು 2 ಲಕ್ಷಕ್ಕಿಂತಲೂ ಹೆಚ್ಚು ಜನ ನೋಡಿದ್ದಾರೆ.  ಮದುವೆಯಲ್ಲಿ ನೌಟಂಕಿ ಮಾಡಿದರೆ ಇಂಥದ್ದನ್ನೆಲ್ಲ ಅನುಭವಿಸಬೇಕಾಗುತ್ತದೆ ಎಂದು ಕಾಲೆಳೆದಿದ್ದಾರೆ ಅನೇಕರು. ಊಟ ಮಾಡಿ ಮಂಟಪ ಏರಿದ್ದರೆ ಹೀಗಾಗುತ್ತಿರಲಿಲ್ಲ ಎಂದಿದ್ಧಾರೆ ಹಲವರು. ಈಗ ಸಾಥ್​ ಕೊಟ್ಟಂತೆ ಜೀವನಪೂರ್ತಿಯೂ ಸಾಥ್​ ಕೊಡುವುದು ಬಾಕಿ ಇದೆ ಅಣ್ಣಾ ಎಂದಿದ್ಧಾರೆ ಕೆಲವರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 2:43 pm, Tue, 10 January 23